ಪ್ರತಿ ಐದು ಸೆಕೆಂಡುಗಳಲ್ಲಿ ಐ-ಫೋನು ನಿಮ್ಮ ಚಿತ್ರಗಳನ್ನು ಏಕೆ ಕ್ಲಿಕ್ಕಿಸುತ್ತದೆ?

ಪ್ರತಿ ಐದು ಸೆಕೆಂಡುಗಳಲ್ಲಿ ಐ-ಫೋನು ನಿಮ್ಮ ಚಿತ್ರಗಳನ್ನು ಏಕೆ ಕ್ಲಿಕ್ಕಿಸುತ್ತದೆ?

ಇತ್ತೀಚಿಗೆ ಐ ಫೋನ್ ಬಳಕೆದಾರರು, ತಮ್ಮ ಸಾಧನದ (ಐ-ಫೋನ್) ಮುಂಭಾಗದ ಕ್ಯಾಮೆರಾವು ಪ್ರತಿ ಐದು ಸೆಕೆಂಡುಗಳಲ್ಲಿ ಅವರ ಫೋಟೊವನ್ನು ಕ್ಲಿಕ್ಕಿಸುತ್ತಿರಬಹುದೆಂದು ಭಯಪಡುತ್ತಿದ್ದಾರೆ. ನಿಜಕ್ಕೂ, ಐ-ಫೋನ್ ನಿಮ್ಮ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದೆಯೇ? ಹೌದು. Infrared ಕ್ಯಾಮೆರಾವು ಪ್ರತಿ ಐದು ಸೆಕೆಂಡುಗಳಲ್ಲಿ ಸಕ್ರಿಯಗೊಳ್ಳುತ್ತಿರುವುದು ನೈಜ ಸಂಗತಿ; ಹಾಗೆಯೇ, ಅದು 30,000 ಅದೃಶ್ಯ ಚುಕ್ಕೆಗಳನ್ನು ಸೆರೆ ಹಿಡಿಯುತ್ತಿದೆ. ಐ-ಫೋನ್ ಫೋಟೋಗಳನ್ನು ಕ್ಲಿಕ್ಕಿಸುತ್ತಿಲ್ಲ; ಬದಲಾಗಿ, ಅದು ಅದರ ಮುಂದೆ ಏನಿದೆ ಎಂಬುವುದು ಕೇವಲ ಪರಿಶೀಲಿಸುತ್ತಿದೆ.

ಐ-ಫೋನ್ 10ರ ಸಿಸ್ಟಮಿನಲ್ಲಿ Depth-Cameraವನ್ನು ಅಳವಡಿಸಲಾಗಿದೆ; ಮತ್ತು ಆಪಲ್ ಐ-ಫೋನನ್ನು ಹೆಚ್ಚು ಕ್ರಿಯಾತ್ಮಕಗೊಳಿಸಲು ಸಾಧನದಲ್ಲಿ ವಿವಿಧ ರೀತಿಯ ವೈಶಿಷ್ಟ್ಯಗಳನ್ನು ಅಳವಡಿಸುತ್ತಿದೆ. ಪ್ರಾರಂಭಿಕ ಹಂತದಲ್ಲಿ, ಅದನ್ನು ನಿಮ್ಮ ಮುಖ ಮ್ಯಾಪ್ ಮಾಡಲು ಮತ್ತು ಬಯೊಮೇಟ್ರಿಕ್ ದೃಢೀಕರಣವಾಗಿ ಬಳಸಲು ಉಪಯೋಗಿಸಲಾಗುತ್ತಿತ್ತು. ಆದ್ದರಿಂದ, ನೀವು ನಿಮ್ಮ ಐ-ಫೋನನ್ನು ಅನ್ಲಾಕ್ ಮಾಡಲು ಅಥವಾ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದಾಗ ಅದನ್ನು ಪಾಸ್ ವರ್ಡ್ ನಮೂದಿಸಬೇಕಾಗಿರಲಿಲ್ಲ; ಬದಲಿಗೆ, Infrared ಕ್ಯಾಮೆರಾ ನಿಮ್ಮ ಮುಖದ ಆ 30,000 ಚುಕ್ಕೆಗಳನ್ನು ಗುರುತಿಸಿ, ನಿಮ್ಮ ಗುರುತನ್ನು ದೃಢಿಕರಿಸುತಿತ್ತು.

ನಿಮ್ಮ ಫೋನ್ ಅನ್ಲಾಕ್ ಆದಮೇಲೂ, ಆಪಲ್ ಈ ಚುಕ್ಕೆಗಳನ್ನು ಸಕ್ರಿಯಗೊಳಿಸುತ್ತಿರುವುದನ್ನು ಏಕೆ ಮುಂದುವರಿಸುತ್ತದೆ? ಅದು ಸೆಟ್ಟಿಂಗ್ಸ್ ನಲ್ಲಿ ಬರುವ FaceID ಮತ್ತು Passcodeಗೆ ಸಂಬಂಧಿಸಿದ್ದು. ಐ-ಫೋನಿನ ಈ ಸಾಮರ್ಥ್ಯವು Infrared Mapping ಅನ್ನು ಬಳಸಿ ವಿವಿಧ ರೀತಿಯ ಕೆಲಸಗಳನ್ನು ನೆರವೇರಿಸುತ್ತದೆ. ಉದಾಹರಣೆಗೆ: ನೀವು ನಿಮ್ಮ ಐ-ಫೋನಿನ ಡಿಸ್ಪ್ಲೇ [Display] ಅನ್ನು ಕೆಲವು ನಿಮಿಷಗಳ ಕಾಲ ಸ್ಪರ್ಶಿಸದಿದ್ದರೆ, ಅದು Infrared Mappingಅನ್ನು ಬಳಸಿ ನೀವು ಫೋನನ್ನು ನೋಡುತ್ತೀರಾ ಅಥವಾ ಇಲ್ಲ ಅಂತ ಪರಿಶೀಲಿಸುತ್ತಿದೆ; ಇಲ್ಲದಿದ್ದರೆ, ಅದು ಬ್ಯಾಟರಿಯನ್ನು ಉಳಿಸಲು ತಾನಾಗಿ ಮಬ್ಬಾಗಿಸುತ್ತದೆ.

ನೀವು ಫೋನಿನಲ್ಲಿ ಆಲಾರಾಮನ್ನು ಆಫ್ ಮಾಡುವ ಮುಂಚೆ ಅಥವ ಸ್ನೂಝ್ ಮಾಡುವ ಮುಂಚೆಯೇ, ನೀವು ಫೋನನ್ನು ನೋಡಲು ಪ್ರಾರಂಭಿಸಿದರೆ, ಅದು ತಾನಾಗಿ ಅಲಾರಾಮಿನ ಧ್ವನಿಯನ್ನೂ ಕಡಿಮೆಗೊಳಿಸುತ್ತದೆ. ನೀವು ಎಚ್ಚರಗೊಂಡು ನಿಮ್ಮ ಚಹರೆ ಫೋನಿಗೆ ತೋರಿಸಿದ ಬಳಿಕವೇ, ನಿಮ್ಮ ಸಾಧನ ಮೆಸೇಜ್ ಗಳ ಅಧಿಸೂಚನೆಗಳು ಅಥವಾ ಪೂರ್ವವೀಕ್ಷಣೆಗಳು ತೋರಿಸಲು ಪ್ರಾರಂಭಿಸುತ್ತದೆ. ಹಾಗೆಯೇ, ಕ್ಯಾಲೆಂಡರಿನ ಈವೆಂಟ್ ವಿವರಗಳನ್ನು ಬಹಿರಂಗಪಡಿಸಲು ಸ್ವಯಂಚಾಲಿತವಾಗಿ ಪ್ರಾರಂಭಿಸುತ್ತದೆ; ನಿಮ್ಮ ಮುಖವನ್ನು ಗುರುತಿಸದಿದ್ದಲ್ಲಿ, ನಿಮ್ಮ ಸಾಧನವು ಮೌನ ತಾಳುತ್ತದೆ. ನಿಮ್ಮ ಚಹರೆಯ ಎಲ್ಲ ಮ್ಯಾಪಿಂಗ್ ಡೇಟಾ ಐ-ಫೋನಿನ ಎಂಕ್ಲೇವಿನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ; ಆಪಲ್ ಕಂಪೆನಿಗೂ ಅದನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಆದರೂ, ನೀವು ಈ ಸೌಲಭ್ಯವನ್ನು ಆಫ್ ಮಾಡಲು ಬಯಸಿದರೆ, ನೀವು ಫೋನಿನ ಸೆಟ್ಟಿಂಗ್ಸ್ ನಲ್ಲಿ ಇದನ್ನು ಆಫ್ ಮಾಡಬಹುದು!

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು                     

ಚಿತ್ರ ಕೃಪೆ: ಇಂಟರ್ನೆಟ್ ತಾಣ