ಪ್ರತಿ ಸಂಜೆ ಪ್ರೀತಿ ಅಭಿಮಾನ, ಪ್ರತಿ ಬೆಳಗು ವಿರಹ ವಿದಾಯ...

ಪ್ರತಿ ಸಂಜೆ ಪ್ರೀತಿ ಅಭಿಮಾನ, ಪ್ರತಿ ಬೆಳಗು ವಿರಹ ವಿದಾಯ...

ಪ್ರಿಯ ಓದುಗರೇ, ಬೆಂಗಳೂರಿನ ವಿವೇಕಾನಂದ ಹೆಚ್. ಕೆ. ಇವರ ‘ಜ್ಞಾನ ಭಿಕ್ಷಾ ಪಾದಯಾತ್ರೆಯು ನೂರು ದಿನ ಪೂರೈಸಿದ ಬಗ್ಗೆ ಅವರು ತಮ್ಮದೇ ನುಡಿಗಳಲ್ಲಿ ಅನುಭವಗಳನ್ನು, ದಾಟಿ ಬಂದ ಊರುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಓದಿ, ನಿಮ್ಮ ಊರಿಗೆ ಬಂದಾಗ ಅವರ ಜೊತೆ ಹೆಜ್ಜೆ ಹಾಕುವುದರ ಮೂಲಕ ಬೆಂಬಲಿಸಿ…

***

100 ದಿನಗಳು, ಸುಮಾರು 2800 ಕಿಲೋಮೀಟರ್, 250 ಕ್ಕೂ ಹೆಚ್ಚು ಸಂವಾದ ಕಾರ್ಯಕ್ರಮಗಳು..

ಬೆಲೆ ಕಟ್ಟಲಾಗದ ಪ್ರೀತಿ ಅಭಿಮಾನ ಗೌರವ, ಹೊಸದೇನನ್ನೋ ಮಾಡಬಹುದು ಎಂಬ ಸಣ್ಣ ಭರವಸೆ..

ಇಷ್ಟೊಂದು ದೂರ ನಡೆದು ಬಂದ ರೀತಿಗೆ ಕುತೂಹಲ, ಆಶ್ಚರ್ಯ, ಹಲವಾರು ಪ್ರಶ್ನೆಗಳ ಸುರಿಮಳೆ..

ಆರೋಗ್ಯ, ಕುಟುಂಬ, ಹಣಕಾಸು, ಊಟ, ನಿದ್ದೆ, ವಯಸ್ಸು, ಏಕಾಂತ, ವಾತಾವರಣ, ಹುಚ್ಚುತನ ಎಲ್ಲದರ ಬಗ್ಗೆಯೂ ಮಾತುಕತೆ...

ಸಾಮಾನ್ಯವಾಗಿ ತಾಲ್ಲೂಕಿನಿಂದ ತಾಲ್ಲೂಕಿಗೆ ಸರಾಸರಿ 30 ಕಿಲೋಮೀಟರ್ ದೂರ ಇರುತ್ತದೆ. ಮಧ್ಯೆ ಒಂದು ಉಪಹಾರದ ಸಮಯವೂ ಸೇರಿ ಇದನ್ನು ಕ್ರಮಿಸಲು ಸುಮಾರು 7 ಗಂಟೆಗಳ ಅವಧಿ ಬೇಕಾಗುತ್ತದೆ. 

ಶಾಲಾ ಕಾಲೇಜುಗಳು ಪ್ರಾರಂಭವಾದ ನಂತರ ಮತ್ತು ಸಣ್ಣ ಮಟ್ಟದ ಪ್ರಚಾರ ಸಿಕ್ಕ ನಂತರ ದಾರಿಯಲ್ಲಿ ಮತ್ತಷ್ಟು ಸಂವಾದ ಚರ್ಚೆಗಳು ಹೆಚ್ಚಾಗುತ್ತಲೇ ಇದೆ. ದಿನಕ್ಕೆ ಸುಮಾರು 12 ಗಂಟೆಗಳ ಸಮಯ ರಸ್ತೆಯಲ್ಲಿಯೇ ಕಳೆಯುತ್ತಿದೆ....

ಒಮ್ಮೆ ದೀರ್ಘ ಮೌನ, ಮತ್ತೊಮ್ಮೆ ದೀರ್ಘ ಮಾತುಕತೆ, ಕೆಲವೊಮ್ಮೆ ಮಾನಸಿಕ ತೊಳಲಾಟ, ಮಗದೊಮ್ಮೆ ಭರವಸೆಯ ಆಶಾಕಿರಣ, ಸೃಷ್ಟಿಯ ಅಚ್ಚರಿ, ಮಾನವ ಜೀವಿಯ ವಿಚಿತ್ರ ವರ್ತನೆ, ಎಲ್ಲವೂ ಮನಸ್ಸಿನಲ್ಲಿ ಮಿಂಚಿ ಮರೆಯಾಗುತ್ತಿರುತ್ತದೆ.

ಹೊಗಳಿಕೆಯ ಸುರಿಮಳೆ, ವ್ಯಂಗ್ಯ ಕುಹುಕದ ಪಿಸು ಮಾತು, ಆಳವಾದ ಚರ್ಚೆ, ಉಢಾಪೆಯ ಕಣ್ಣೋಟ, ಬೆಳಗಿನ ಮಂಜು, ಮಧ್ಯಾಹ್ನದ ಸೂರ್ಯ ಕಿರಣಗಳ ಬಿಸಿ, ಸಂಜೆಯ ತಣ್ಣಗಿನ ವಾತಾವರಣ, ರಾತ್ರಿಗಳ ನೀರವತೆ, ದೇಹದ ವಿವಿಧ ಪ್ರತಿಕ್ರಿಯೆ ಎಲ್ಲವೂ ಅನುಭವದ ಆಳದಲ್ಲಿ ಮೂಡುತ್ತಿರುತ್ತದೆ..

ಬಹುತೇಕ ಸಂಜೆ ಆತ್ಮೀಯ ಸ್ವಾಗತ,

ಬೆಳಗ್ಗೆ ಪ್ರೀತಿಯ ಬೀಳ್ಕೊಡುಗೆ,

ಊರುಗಳಲ್ಲಿ ಜನರ ಗುಂಪು ಸುತ್ತುವರೆದರೆ,

ಕೆಲವೇ ಕ್ಷಣಗಳಲ್ಲಿ ಏಕಾಂಗಿ,

ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ನಿರಂತರ ಬೆಂಬಲ ಪ್ರೋತ್ಸಾಹ..

ಹೆಜ್ಜೆಗಳ ಮೇಲೆ ಹೆಜ್ಜೆ ಇಡುತ್ತಾ...

ಇನ್ನೂ ದೂರ ಬಹುದೂರ ಸಾಗಬೇಕಿದೆ.......

***

ಇಲ್ಲಿಯವರೆಗಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆಯ ಒಂದು ಪಕ್ಷಿನೋಟ......

ವನಮಾರ್ಪಳ್ಳಿ - ಔರಾದ್,

ಔರಾದ್  - ಕಮಲನಗರ,

ಕಮಲನಗರ - ಬಾಲ್ಕಿ,

ಬಾಲ್ಕಿ - ಹುಲಸೂರು,

ಹುಲುಸೂರು - ಬಸವಕಲ್ಯಾಣ,

ಬಸವಕಲ್ಯಾಣ - ಹುಮ್ನಾಬಾದ್,

ಹುಮ್ನಾಬಾದ್ - ಚಿಟಗುಪ್ಪ,

ಚಿಟಗುಪ್ಪ - ಹಳ್ಳಿಖೇಡ್ ಬಿ,

ಹಳ್ಳಿಖೇಡ್  - ಬಸವಗಿರಿ ( ಬೀದರ್ )

ಬೀದರ್ - ವಿಠ್ಠಲ ಪುರ,

ವಿಠ್ಠಲ ಪುರ - ಚಿಂಚೋಳಿ,

ಚಿಂಚೋಳಿ - ಕಾಳಗಿ,

ಕಾಳಗಿ - ಕಮಲಾಪುರ,

ಕಮಲಾಪುರ - ಕಲಬುರಗಿ,

ಕಲಬುರಗಿ - ಕಡಗಂಚಿ,( ಕೇಂದ್ರೀಯ ವಿಶ್ವವಿದ್ಯಾಲಯ)

ಕಡಗಂಚಿ - ಆಳಂದ,

ಆಳಂದ - ನಿಂಬರ್ಗಾ,

ನಿಂಬರ್ಗಾ - ಅಫಜಲಪುರ,

ಅಫಜಲಪುರ - ಕೋಳೂರು,ಗುಡ್ಡೇವಾಡಿ, 

ಗುಡ್ಡೇವಾಡಿ - ಯಡ್ರಾಮಿ,

ಯಡ್ರಾಮಿ - ಸೊನ್ನ,

ಸೊನ್ನ - ಜೇವರ್ಗಿ,

ಜೇವರ್ಗಿ  - ವಾಡಿ,

ವಾಡಿ - ಚಿತ್ತಾಪೂರ,

ಚಿತ್ತಾಪೂರ - ಸೇಡಂ,

ಸೇಡಂ - ಗುರುಮಿಠಕಲ್,

ಗುರುಮಿಠಕಲ್ - ಯಾದಗಿರಿ,

ಯಾದಗಿರಿ - ಶಹಾಪುರ,

ಶಹಾಪುರ - ಸುರಪುರ - ದೇವರ ಗೋನಾಳ್,

ದೇವರ ಗೋನಾಳ - ಕೆಂಭಾವಿ,

ಕೆಂಭಾವಿ - ಹುಣಸಗಿ,

ಹುಣಸಗಿ - ಜಾಲಹಳ್ಳಿ,

ಜಾಲಹಳ್ಳಿ - ದೇವದುರ್ಗ,

ದೇವದುರ್ಗ - ಗಬ್ಬೂರು,

ಗಬ್ಬೂರು  - ರಾಯಚೂರು ನಗರ,

ರಾಯಚೂರು  - ಸಿರಿವಾರ, 

ಸಿರಿವಾರ - ಮಾನ್ವಿ,

ಮಾನ್ವಿ - ಸಿಂಧನೂರು,

ಸಿಂಧನೂರು - ಮಸ್ಕಿ,

ಮಸ್ಕಿ - ವಟಗಲ್,

ವಟಗಲ್ - ಹಟ್ಟಿ,

ಹಟ್ಟಿ - ಲಿಂಗಸಗೂರು,

ಲಿಂಗಸಗೂರು - ನಾಲತವಾಡ,

ನಾಲತವಾಡ - ಮುದ್ದೇಬಿಹಾಳ,

ಮುದ್ದೇಬಿಹಾಳ - ತಾಳಿಕೋಟೆ,

ತಾಳಿಕೋಟೆ - ಮಿಣಜಗಿ,

ಮಿಣಜಗಿ - ಬ್ಯಾಕೋಡ,

ಬ್ಯಾಕೋಡ - ಬಸವನ ಬಾಗೇವಾಡಿ ( ಇಂಗಳೇಶ್ವರ )

ಇಂಗಳೇಶ್ವರ - ದೇವರ ಹಿಪ್ಪರಗಿ,

ದೇವರ ಹಿಪ್ಪರಗಿ -  ಸಿಂದಗಿ,   

ಸಿಂದಗಿ -  ಆಲಮೇಲ,

ಅಲಮೇಲ - ಇಂಡಿ,

ಇಂಡಿ - ಚಡಚಣ,

ಚಡಚಣ - ಅರಕೇರಿ,

ಅರಕೇರಿ - ವಿಜಯಪುರ,

ವಿಜಯಪುರ - ತಿಕೋಟಾ,

ತಿಕೋಟಾ - ಬಬಲೇಶ್ವರ,

ಬಬಲೇಶ್ವರ - ಕೊಲ್ಹಾರ,

ಕೊಲ್ಹಾರ - ಮುತ್ತಗಿ,

ಮುತ್ತಗಿ - ಯರನಾಳ,

ಯರನಾಳ - ನಿಡಗುಂದಿ,

ನಿಡಗುಂದಿ - ಆಲಮಟ್ಟಿ,

ಆಲಮಟ್ಟಿ - ಕೂಡಲ ಸಂಗಮ,

ಕೂಡಲ ಸಂಗಮ - ಹುನಗುಂದ - ಇಳಕಲ್,

ಇಳಕಲ್ - ಪಟ್ಟದಕಲ್ಲು,

ಪಟ್ಟದಕಲ್ಲು - ಬಾದಾಮಿ,

ಬಾದಾಮಿ - ಗುಳೇದಗುಡ್ಡ,

ಗುಳೇದಗುಡ್ಡ - ಬಾಗಲಕೋಟೆ,

ಬಾಗಲಕೋಟೆ - ಬೀಳಗಿ,

ಬೀಳಗಿ - ಮುಧೋಳ,

ಮುಧೋಳ - ಜಮಖಂಡಿ,

ಜಮಖಂಡಿ - ಮಹಾಲಿಂಗಪುರ ( ಬನಹಟ್ಟಿ / ರಬಕವಿ )

ಮಹಾಲಿಂಗಪುರ - ತೇರದಾಳ,

ತೇರದಾಳ - ಅಥಣಿ,

ಅಥಣಿ - ಮೋಳೆ

ಮೋಳೆ - ಕಾಗವಾಡ,

ಕಾಗವಾಡ - ರಾಯಭಾಗ,

ರಾಯಭಾಗ - ಚಿಕ್ಕೋಡಿ,

ಚಿಕ್ಕೋಡಿ - ನಿಪ್ಪಾಣಿ,

ನಿಪ್ಪಾಣಿ - ಸಂಕೇಶ್ವರ,

ಸಂಕೇಶ್ವರ - ಹುಕ್ಕೇರಿ,

ಹುಕ್ಕೇರಿ - ಘಟಪ್ರಭಾ,

ಘಟಪ್ರಭಾ - ಗೋಕಾಕ್,

ಗೋಕಾಕ್ - ಮೂಡಲಗಿ,

ಮೂಡಲಗಿ - ಹುಲಕುಂದ,

ಹುಲಕುಂದ - ರಾಮದುರ್ಗ,

ರಾಮದುರ್ಗ.....................

  • ಜ್ಞಾನ ಭಿಕ್ಷಾ ಪಾದಯಾತ್ರೆಯ 100 ನೆಯ ದಿನ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ವಾಸ್ತವ್ಯ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರದಲ್ಲಿ: ಶಾಲಾ ಮಕ್ಕಳಿಗೆ ಉಪನ್ಯಾಸ ಹಾಗೂ ಸಂವಾದದಲ್ಲಿ..