ಪ್ರತ್ಯೇಕ ರಾಜ್ಯದ ಕೂಗು ಬೇಡ

ಪ್ರತ್ಯೇಕ ರಾಜ್ಯದ ಕೂಗು ಬೇಡ

ಉತ್ತರ ಕರ್ನಾಟಕ ಹಿಂದುಳಿದೆದೆ ಎಂಬ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಜೋರಾಗಿಯೇ ಆರಂಭವಾಗಿದೆ. ಸಾಲದೆಂಬಂತೆ ಕೆಲವರು 13 ಜಿಲ್ಲೆಗಳ ನಕ್ಷೆಯನ್ನು ಹಾಕಿ ಕೆಕೆ ಹಾಕುತ್ತಿದ್ದಾರೆ. ನಿಜಕ್ಕೂ ಉತ್ತರ ಕರ್ನಾಟಕ ಪ್ರಾದೇಶಿಕ ಅಸಮಾನತೆಯಲ್ಲಿ ಸಿಲುಕಿ ನರಳಾಡುತ್ತಿದೆ. ಕಿತ್ತು ತಿನ್ನುವ ಬಡತನದ ಪರಿಣಾಮ ಬೇರೆಡೆ ಗುಳೆ ಹೋಗುತ್ತಿದ್ದಾರೆ. ಶಾಲಾ-ಕಾಲೇಜು-ಹಾಸ್ಟೆಲ್ ಗಳಲ್ಲಿ ಗುಣಮಟ್ಟದ ಕೊರತೆ ಮತ್ತು ಸೌಲಭ್ಯಗಳಿಲ್ಲದ ಪರಿಣಾಮ ಶಿಕ್ಷಣ ವಂಚಿತರ ಸಂಖ್ಯೆ ಹೆಚ್ಚಾಗುತ್ತಿದೆ.ಇನ್ನೂ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ ಗಗನ ಕುಸುಮವೇ ಸರಿ.ದೇವದಾಸಿ ಪದ್ದತಿ, ಅಸ್ಪೃಶ್ಯತೆಯಂತಹ ಮೌಢ್ಯಾಚರಣೆಗಳು ಇನ್ನು ಜೀವಂತ ಇವೆ.ಅನೇಕ ಜನರಿಗೆ ಕುಟುಂಬದ ಜೊತೆ ಬಾಳಲು ಸೂರು ಇಲ್ಲ. ಸಾವಿರಾರು ಕುಟುಂಬಗಳು ಇಗಲು ಗುಡಿಸಲು ವಾಸಿಗಳೆ ಆಗಿದ್ದಾರೆ. ಲಕ್ಷಾಂತರ ಮಂದಿ ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡುತ್ತಿದ್ದಾರೆ.ಹಸಿವಿನ ಕ್ರೌರ್ಯವನ್ನು ತಾಳದೆ ಅನೇಕ ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿವೆ.ಹೀಗೆ ಸಮಸ್ಯಗಳ ಹೊಯ್ದಾಟದಲ್ಲಿ ಜನ ದಿನಗಳನ್ನು ದೂಡುತ್ತಿದ್ದಾರೆ.
ಅಪಾಯಕಾರಿ: ಪ್ರತ್ಯೇಕ ರಾಜ್ಯ ನಿರ್ಮಾಣ ಸಮಿತಿಯ ನಡೆ ಅಪಾಯಕಾರಿಯಾಗಿದೆ. ಈ ಭಾಗದ ಸಮಸ್ಯೆಗಳ ನಿವಾರಣೆಗಾಗಿ ಪ್ರತ್ಯೆಕ ರಾಜ್ಯವೇ ಸೂಕ್ತ ಎಂದು ಜನರನ್ನು ಭಾವನಾತ್ಮಕವಾಗಿ ಎಚ್ಚರಿಸುತ್ತಿದ್ದಾರೆ. ಪ್ರತ್ಯೆಕ ರಾಜ್ಯಕ್ಕೆ ಬೇಕಾದ ಎಲ್ಲಾ ಸವಲತ್ತುಗಳು ಇವೆ ಎಂದು ಹೇಳಲಾಗುತ್ತಿದೆ.ಸೌಲಭ್ಯಗಳಿದ್ದ ಮೇಲೆ ಪ್ರತ್ಯೇಕ ರಾಜ್ಯವೇಕೆ ?
ರಾಜಕೀಯ ಇಚ್ಚಾ ಶಕ್ತಿ ಕೊರತೆಯೇ ಈ ಭಾಗ ಮುಖ್ಯವಾಗಿ ಹಿಂದುಳಿಯಲು ಕಾರಣವಾಗಿದೆ.
ಅಖಂಡ ಕರ್ನಾಟಕ: ಪ್ರತ್ಯೇಕ ರಾಜ್ಯದ ಬದಲಾಗಿ ಅಖಂಡ ಕರ್ನಾಟಕದ ಅಗತ್ಯವಿದೆ.ಇಲ್ಲಿರುವ ಅಸಮಾನತೆಯ ನಿವಾರಣೆಗಾಗಿ 371(ಜೆ) ಅನುಷ್ಠಾನ ಜಾರಿಯಾಗಿದೆ.ಅದರಲ್ಲೂ ನ್ಯೂನ್ಯತೆಗಳಿವೆ ಎಂದು ಅನೇಕರು ಹೇಳುತ್ತಿದ್ದಾರೆ.ಇದರಿಂದಲೇ ಅಸಮಾನತಿ ನಿವಾರಣೆಯಾಗುವುದು ಕಷ್ಟ. ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉದ್ಯೋಗ ಸೃಷ್ಟಿ.ರೈತ-ಕೂಲಿಕಾರರಿಗೆ ವಿಶೇಷ ಪ್ಯಾಕೇಜ್ ಜಾರಿ.ಆಹಾರದ ಭದ್ರತೆ ವಸತಿ ಸೌಲಭ್ಯ ನೀಡಲು ಸರಕಾರ ಮುಂದಾಗಬೇಕಿದೆ.ಅದಕ್ಕಾಗಿ ನಾವು ಪ್ರಭಲ ಹೋರಾಟಕ್ಕೆ ಹೆಜ್ಜೆ ಹಾಕಬೇಕಿದೆ.ಪ್ರತ್ಯೆಕ ರಾಜ್ಯದ ಹೆಸರಲ್ಲಿ ರಾಜ್ಯ ಒಡೆಯುವ ಕೆಲಸ ಬೇಡ.ಕರ್ನಾಟಕ ಏಕಿಕರಣಕ್ಕೆ ಈ ಭಾಗದ ಕೊಡುಗೆ ಅತ್ಯಮೂಲ್ಯವಾಗಿತ್ತು ಎನ್ನುವುದನ್ನು ಮರೆಯಬಾರದು.
ಗುರುರಾಜ ದೇಸಾಯಿ.

Comments