ಪ್ರಧಾನಿಯ ದಿಟ್ಟಹೆಜ್ಜೆ

ಪ್ರಧಾನಿಯ ದಿಟ್ಟಹೆಜ್ಜೆ

ಬರಹ

ಎಲ್ಲೆಡೆ ತಲೆ ಎತ್ತಿದ ವಿರೋಧದ ಕೂಗಿನೊಳಗೇ ಬುಷ್ ಮೂರು ದಿನದ ಭಾರತ ಪ್ರವಾಸವನ್ನು ವಿಭಿನ್ನರೀತಿಯಲ್ಲಿ ಮಾಡಿ ಉತ್ತಮ ಫಲಿತಾಂಶದೊಂದಿಗೆ ತೆರಳಿದ್ದಾರೆ.ಈ ಒಪ್ಪಂದ ಉಭಯರಾಷ್ಟ್ರಗಳಿಗೆ ಸಹಕಾರಿಯಾಗಿ ತಲೆಯೆತ್ತಿದೆ.

ಜನಸಮುದಾಯದಿಂದಹಿಡಿದು ಸಾಹಿತಿ ಮತ್ತು ರಾಜಕಾರಣಿಗಳ ವರೆಗಿನವರ ವಿರೋದದ ಕೂಗುಗಳ ನಡುವೆಯೂ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಬೆಳವಣಿಗೆಗೆ ಎಲ್ಲವನ್ನೂ ಮೀರಿದ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ.ನಾಗರಿಕ ಹಾಗು ಮಿಲಟರಿ ಪರಮಾಣು ಸೌಲಭ್ಯಗಳನ್ನು ಬೇರ್ಪಡಿಸುವ ವಿಷಯದಲ್ಲಿ ಮೂಡಿದ್ದ ಅಸಮಾಧಾನವನ್ನು, 8ಮಿಲಟರಿ ಪರಮಾಣು ಬಳಕೆಯದಿದ್ದು ಅದನ್ನು ಬೇರ್ಪಡಿಸುವ ನಿರ್ಧಾರದ ಪೂರ್ತಿ ಹಕ್ಕು ನಮಗಿದೆ ಎಂಬುದು ಕಡಿಮೆಗೊಳಿಸಿದೆ.ಅಣು ರಿಯಾಕ್ಟರ್ ಗಳಿಗೆ ಬೇಕಾಗುವ ಇಂಧನ ಕೊರತೆಯನ್ನು ಎದುರಿಸುತ್ತಿದ್ದ ನಾವು ಈ'ನಾಗರಿಕ ಅಣು ಸಹಕಾರ ಒಪ್ಪಂದ'ದಿಂದ ಇಂಧನ ಪೂರೈಕೆಯ ಬರವಸೆಯನ್ನು ಪಡೆದುಕೊಂಡಿದ್ದೇವೆ. ಜೊತೆಗೆ ಫಾಸ್ಟ್ ಬ್ರಿಡರ್ ರಿಯಾಕ್ಟರ್ ತಪಾಸಣೆ ಇಲ್ಲವೆಂಬುದು ಮತ್ತೊಂದು ಪ್ರಮುಖ ವಿಷಯ.

ಈ ಒಪ್ಪಂದದಿಂದ ಭಾರತದ ಪರಮಾಣು ಕಾರ್ಯಕ್ರಮಗಳಿಗೆ ಉಪಯೋಗವಾಗಿದೆ. ಆದರೆ ಅಮೆರಿಕಾ ಇಂದನ ಪೂರೈಕೆಯನ್ನು ಸತತವಾಗಿ ನೀಡದೇ ಯಾವುದೇ ಕಿಮಿಕ್ ಮಾಡುವ ಸಾಧ್ಯತೆಯೂ ಇದೆ.ಅಮೆರಿಕಾ ಈ ಒಪ್ಪಂದವನ್ನು ಪಾಲಿಸಬಹುದೆಂಬ ಪೂರ್ಣವಿಶ್ವಾಸ ಹುಟ್ಟಿಲ್ಲ.

ಬುಷ್ ಬೇಟಿಯನ್ನು ವಿರೋದಿಸಿದ ಜನರು,ಅಮೇರಿಕಾದಿಂದ ನಮಗೇನು ಅನ್ಯಾಯ ವಾಗಿದೆ ಎಂಬುದನ್ನು ಹೇಳಲಿಲ್ಲ.ಇನ್ನು ನಾವು ನಮ್ಮದು ಎಂಬುದನ್ನು ದೇಶಗಳಿಗೆ ಸೀಮಿತಗೊಳಿಸದೆ ಹಲವೆಡೆತಲೆಯೆತ್ತಿದ ಅಮೆರಿಕಾದ ಕ್ರೌರತ್ವವನ್ನು ನೆನೆದು ಎಲ್ಲರಪರವಾಗಿ ವಿರೋಧಿಸುತ್ತಿದ್ದಾರೆ ಅನ್ನುವಂತೆಯೂ ಇಲ್ಲ.ಏಕೆಂದರೆ ಅವರ ಹೇಳಿಕೆಗಳು ಹೋರಾಟ ಎಲ್ಲವೂ ಇಸ್ಲಾಮಿಕ್ ಪರವಾಗಿ ನಿಂತಂತಿದೆ ಅಷ್ಟೇ.

ನಾವು ಭಾರತಕ್ಕೆ ಪ್ರತ್ಯಕ್ಷವಾಗಿ ಮೋಸವೆಸಗಿದ ಪಾಕಿಸ್ತಾನ,ಚೀನಾಗಳಿಂದ ಆಗಮಿಸುವ ಪ್ರಧಾನಿಗಳ ಬೇಟಿಗೆ ವಿರೋಧ ವ್ಯಕ್ತ ಪಡಿಸುವುದಿಲ್ಲ.ನಮ್ಮನ್ನು ನಾವು ಮತ್ತಷ್ಟು ಪ್ರಭಲಗೊಳಿಸಲು ನೋಡಬೇಕೆ ಹೊರತು ,ಪಕ್ಕಾ ಶತ್ರುಗಳ ಮಿತ್ರರಾಗಿ ಶಾಂತಿ ನೆಲೆಸುವಂತೆ ಮಾಡುತ್ತೇವೆ ಎಂಬಅಸಂಬದ್ಧಯೋಚನೆ ನಮಗಿದ್ದರೆ ಅದರಿಂದ ಅಪಾಯವೇ ಹೆಚ್ಚು.ನಮ್ಮೊಳಗೆ ನಾವು ಗೆದ್ದಲು ಗೂಡು ಕಟ್ಟಲು ಅವಕಾಶ ಮಾಡಿಕೊಡದೆ,ನಮ್ಮರಕ್ಷಣೆಯ ಹೊಣೆ ಪೂರ್ತಿಯಾಗಿ ನಮ್ಮದುಎಂಬುದನ್ನು ತಿಳಿದು ಎಲ್ಲಿಯೂ ಪೊಳ್ಳಾಗದಂತೆ ನೋಡಿಕೊಂಡು ಬದಲಾವಣೆಗೆ ತೆರೆದುಕೊಳ್ಳೋಣಾ.ಬೆಳವಣಿಗೆಯತ್ತ ಹೆಜ್ಜೆಹಾಕೋಣಾ. ಉನ್ನತ ಭವಿಷ್ಯಹೊಂದಿರುವ ಪ್ರಧಾನಿಯವರ ದಿಟ್ಟ ನಿರ್ಧಾರಕ್ಕೆ ತಲೆಬಾಗೋಣ.