ಪ್ರಭಾವ

ಪ್ರಭಾವ

ಬರಹ

ಈ ಕಥೆ ನನ್ನದಲ್ಲಾ, ಯಾವಾಗಲೋ ಕೇಳಿದ್ದು.

ಒಬ್ಬ ಸನ್ಯಾಸಿಯಿದ್ದ, ದಿನವೂ ಊರಿನಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದಾ, ಯಾರಾದರೂ ಸಮಸ್ಯೆ ತಂದರೆ ತನ್ನ ಕೈಲಾದ ಮಟ್ಟಿಗೆ ಪರಿಹರಿಸುತ್ತಿದ್ದಾ.

ಆವನು ರಾತ್ರಿ ತಂಗಲು ಒಂದು ಪಾಳುಬಿದ್ದ ಮನೆಯನ್ನು ಹುಡುಕಿಕೊಂಡಿದ್ದಾ, ದಿನಾ ರಾತ್ರಿ ಊಟ ಮಾಡಿ ಮಿಕ್ಕಿದ್ದನ್ನು ಬಟ್ಟೆಯಲ್ಲಿ ಕಟ್ಟಿ ಮಲಗುತ್ತಿದ್ದ. ಅದೇ ಮನೆಯಲ್ಲಿ ಒಂದು ಇಲಿ ಸಹ ವಾಸಮಾಡಿಕೊಂಡಿತ್ತು, ಸನ್ಯಾಸಿ ಮಲಗಿದಮೇಲೆ ಇಲಿ ಮೆಲ್ಲನೆ ಬಂದು ಸನ್ಸಾಸಿಯ ಬಟ್ಟೆಗೆ ತೂತು ಮಾಡಿ ಉಳಿದ ಅಹಾರ ಕಬಳಿಸುತ್ತಿತ್ತು. ದಿನಾಲೂ ನಡೆವ ಈ ಕಳ್ಳಾಟಕ್ಕೆ ಸನ್ಯಾಸಿ ರೋಸಿ ಹೋದ, ಇದನ್ನು ಹೇಗಾದರೂ ತಡೆಯಲೇ ಬೇಕೆಂದು ಉಪಾಯ ಮಾಡಿದ.

ಊಟದ ಗಂಟನ್ನು ಒಂದು ಕೊಕ್ಕೆಗೋಲಿಗೆ ಸಿಗಿಸಿ ಮೂಲೆಗೆ ಆನಿಸಿಟ್ಟಾ, ಮರುದಿನ ಬೆಳಿಗ್ಗೆ ನೋಡಿದರೆ, ಮತ್ತೆ ಗಂಟಿಗೆ ತೂತು. ಸನ್ಯಾಸಿ ಈ ದಿನ ರಾತ್ರಿ ಬಟ್ಟೆ ಗಂಟನ್ನು ಎತ್ತರದ ಗೊಡೆ ಗೂಟಕ್ಕೆ ಸಿಗಿಸಿ ಮಲಗಿದ.
ಬೆಳಿಗ್ಗೆ ಮತ್ತದೆ ಹಾಡು, ಬಟ್ಟೆ ಗಂಟು ತೂತು......

ಆದರೆ ಸನ್ಯಾಸಿಗೆ ಸಿಟ್ಟು ಬರುವ ಬದಲು ಆಶ್ಚರ್ಯವಾಯಿತು, ಅಲ್ಲಾ ಗೂಟಾ ಅಷ್ಟೆತ್ತರದಲ್ಲಿದೆ ಈ ಸಣ್ಣ ಇಲಿಗೆ ಆಷ್ಟು ಎತ್ತರ ನೆಗೆಯಲು ಸಾದ್ಯವಾ ?

ಸನ್ಯಾಸಿ ಈ ಸಮಸ್ಯೆಯನ್ನು ತನ್ನ ಗುರುಗಳ ಬಳಿ ಹೇಳಿಕೊಂಡ.

ಗುರುಗಳಿಗೂ ಆಶ್ಚರ್ಯವಾಯಿತು, ಅವರು ಇಲಿಯ ಬಿಲವನ್ನು ತೋರಿಸಲು ಹೇಳಿದರು,

ಮತ್ತು ಇಲಿಯ ಬಿಲವನ್ನು ಅಗೆದರು, ಬಿಲ ಆಳಕ್ಕೆ ಹೋದಂತೆ ಅಗಲವಾಗಿ ಕೊನೆಗೆ ಬಚ್ಚಿಟ್ಟ ನಿಧಿಯಲ್ಲಿ ಕೊನೆಗೋಡಿತು. ಆ ಸಂಪತ್ತನ್ನು ನೋಡಿ ಎಲ್ಲರಿಗೂ ದಿಘ್ಬ್ರಮೆಯಾಯಿತು.

ಅವರೆಲ್ಲಾ ಗುರುಗಳನ್ನು ಕೇಳಿದರು ನಿಮಗಿದೆಲ್ಲಾ ಹೇಗೆ ತಿಳಿಯಿತು ?

ಆಗ ಗುರುಗಳು ಹೇಳಿದರು
ಸಣ್ಣ ಇಲಿ ಇಷ್ಟೊಂದು ಸಾಹಸ ಮಾಡಬೇಕಾದರೆ ಅದಕ್ಕೆ ಯಾವದೋ ಶಕ್ತಿಯ ಸಂಪರ್ಕ ಇದೆ, ಎಂದು ವಿಚಾರ ಮಾಡಿ ಬಿಲವನ್ನು ಅಗೆದರೆ ಅದು ಬೇರಾವ ಶಕ್ತಿಯೂ ಅಲ್ಲಾ ಅದು ದುಡ್ಡಿನ ಶಕ್ತಿ, ಇಲಿ ದುಡ್ಡನ್ನೇನೂ ತಿನ್ನುವದಿಲ್ಲಾ ಕೇವಲ ಅದನ್ನು ಮನೆಯಲ್ಲಿ ಹೊಂದಿದ ಮಾತ್ರಕ್ಕೆ ಇಲಿಗೆ ಗೊತ್ತಿಲ್ಲದೆಯೆ ಶಕ್ತಿ ಬಂದಿದೆ ಎಂದರು.

ನೀತಿ ಪಾಠ : ದುಡ್ಡಿದ್ದರೆ ಯಾರು ಏನು ಬೇಕಾದರೂ ಮಾಡಬಹುದು, ಯಾವದೇ ಪಕ್ಷದ ತಿಕೀಟು ಪಡೆದು ಎಲೆಕ್ಷನ್ನಿಗೂ ನಿಲ್ಲಬಹುದು. ಎಷ್ಟು ಎತ್ತರ ಬೇಕಾದರೂ ನೆಗೆಯಬಹುದು.