ಪ್ರಯತ್ನ
ಕವನ
ಗಿರಿಯ ಆ *ತಪ್ಪಲಲಿ* ವಾಸ
ಗೆಳೆಯರ ಬಲು ಸವಾಸ
ಕೂಡಿ ಕಂಡರು ಒಂದು ಕನಸ
*ತುದಿ* ಏರುವ ಭಾರೀ ಸಾಹಸ.
ಮೊದಲ ಹೆಜ್ಜೆಯದು ಜಾರಿತು
ಎರಡನೇ ಹೆಜ್ಜೆಯೂ ಸೋತಿತು
ಚಿಂತಿಸಿದರು ಗೆಳೆಯರು ನಿಮಿಷ
ಸೋಲಲು ಇರದು ಹರುಷ.
ಹೊಸ ಪಟ್ಟುಗಳ ಬಳಸಿದರು
ಹಗ್ಗವ ಜಗ್ಗಿ ಬಿಗಿಯಾಗಿಸಿದರು
ಸೋಲ ಮೆಟ್ಟಿ ಸಾಗಲವರು ಭರದಲಿ
ಬೆವರು ಜಾರಿತು ಅವಸರದಲಿ.
ತಲುಪಲು ಗುರಿಯ ಕಾಯ
ಆಯಾಸದ ಗಾಯವೆಲ್ಲಾ ಮಾಯ
ಬಿದ್ದನೆಂದವರು ಹಿಂಜರಿಯಲಿಲ್ಲ
ಕನಸ ಹಾದಿಯ ತೊರೆಯಲಿಲ್ಲ.
- ನಿರಂಜನ ಕೇಶವ ನಾಯಕ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್