ಪ್ರಳಯ
ಕವನ
ಅಂದು
ಮುಸುಕು ಧರಿಸುವ ಸೂರ್ಯ,
ಚದುರಿ ಹೋಗುವ ನಕ್ಷತ್ರ,
ಭಯತೊರೆದು ಒಂದೆಡೆಸೇರುವ,
ಪಶು ವನ್ಯ ಜೀವಿ ಕುಲ,
ಗೋರಿ ಬಿರಿದು, ಮಸಣ ತೆರೆದು
ಏಳುವ ಮನುಕುಲ ದಂಗಾಗಿ
ಭಯಗೊೞುವ ಆ ಸಮಯ ,
ವಿಧಾತನ ದರ್ಶನ ದಾಹ ಇದ್ದವರಿಗೆ
ಆತುರ ಆತಂಕ
,ಆಲ್ಲಿ ಸಿಗುವುದು
ಇಹದ ಕರ್ಮಗಳ ಪ್ರತಿಫಲ.
ಅಲ್ಲಿ
ಕಾಣುವ ಜ್ವಾಲಮುಖಿಯ ನರಕ
ಸುಂದರ ಶಾಂತಮುಖಿ ಸ್ವರ್ಗ
ಕಂಡುಮರಗುವ ನಾವು ಅವರು
ಅರಿಯುವೆವು ,
ನಾವೇನು ಕಳಕೊಂಡೇವು ಎಂದು.