ಪ್ರಶ್ನೆಯಾಗೆ ಉಳಿದಿದೆ !

ಪ್ರಶ್ನೆಯಾಗೆ ಉಳಿದಿದೆ !

ಕವನ

ಯಾಕೋ ಏನೋ ಮನಸು ಮೌನವಾಗಿದೆ

ಅಲ್ಲಿ ಇಲ್ಲಿ ಎಲ್ಲೊ ಕನಸ ಹುಡುಕಿದೆ

ನಿನ್ನ ಕಣ್ ಅ೦ಚಿನಲ್ಲಿ  ಆ ಪ್ರೀತಿ ಅಡಗಿದೆ

ಮೌನ ಹೃದಯದ ಭಾಷೆ ಎ೦ದು ಹೇಳಿದೆ

                                     ನನ್ನ ಕೇಳದೆ

 

 

ನೀನಿಲ್ಲದ ಆ ಗಳಿಗೆಯು ಏನೋ ಒ೦ಥರ

ಬಾನ೦ಚಲಿ ಶಶಿ ಮೂಡದ ಸ೦ಜೆಯಾ ಥರ

ಎದೆಗಪ್ಪಿದ ನನ್ನ ಅ೦ಗಿಯ ಭ೦ಗಿಯಾ ಥರ

ನಿನ್ನ ಕಾಣದೆ ಮನಸು ಹಾಡಿದ ಹಾಡು ಒ೦ಥರ

                                        ಹೃದಯಕೆ ಹತ್ತಿರ

 

ಏನೆ೦ದು ನಾ ಹೇಳಲಿ ನಿನ್ನ ಪ್ರೀತಿ  ಮಾಡಿದೆ

ಈ ಜೀವ ಹಾದಿ ಕಾದು ಸುಣ್ಣವಾಗಿದೆ

ಬಿಡಲಾರೆನಾ ನ೦ಬಿಹೆ ಮೋಸ ಆಗದೆ ?

ನನ್ನ ಪ್ರೀತಿಲಿ ಈ ಬಾಳಿನ ಮೋಹ ಅಡಗಿದೆ

                                 ನಲುಮೆ ನಲುಗದೆ ?

 

ಯಾಕೋ ಏನೋ ಮನಸು ಮೌನವಾಗಿದೆ

ಎಲ್ಲಾ ಭಾವನೆ ಪ್ರಶ್ನೆಯಾಗೆ ಉಳಿದಿದೆ !