ಪ್ರಸವ
ಅದು ಬಹು ಸರಳ ಹೇಳಲು
ಭಿಮ್ಮನಸೆ ಹಡೆದಳೆಂದು .
ಹಡೆದಾಕೆ ಯನ್ನು ಕೇಳಿದರೆ,
ಅದೊಂದು ಪುನರ್ಜನ್ಮ ಎನ್ನುವಳು.............
ಹರೆಯದ ಹಮ್ಮು
ಬಿಮ್ಮಗೆಯ ಮನಸ್ಸಿನ ಬೆಸುಗೆ,
ಸರಳಗೊಳಿಸಿತ್ತು ಪತಿ ಪತ್ನಿಯರ.
ಲಜ್ಜೆಯ ಸುಪ್ತಕಾಮನೆಯ ಬಯಕೆ........
ಭಾವುಕನ ಭಾವಕ್ಕೆ ಭಾವಕಿ,
ಮನತೆರದು ಭಾವಜನ ಉನ್ಮಾದಕ್ಕೆ,
ಸೋತು ನಿರಾಳ ಅಗುವಳು,
ಸಮ ಬಯಕೆಯ ತ್ರುಪ್ತಿಯ ಶಕೆಯಲ್ಲಿ..........................
ತೃಪ್ತಿಯ ಶಿಖರದಲ್ಲಿ ಮದವೇರಿ,
ಸತ್ವ ಅಲುಗಿ ಮೈಮರೆವು ಹೊಮ್ಮಿ,
ಕಾಮ ಸಿಂಚನಕ್ಕೆ, ತಂಪೇರಿದ ವಸುಧೆಯಂತೆ,
ಚಿಗುರು ಚಿಗುರೊಡೆಯುವುದು ಗರ್ಭದಲ್ಲಿ...........................
ಕಾಲಗತಿಯ ಋತುಚಕ್ರದ ಪಥದ,
ಅಂಡಪಿಂಡ ಕಾಂಡದ ಕ್ರಿಯೆಯ ಗತಿಯಲ್ಲಿ,
ಹರ್ಷ ನೋವು ವಿನೋದ ಸರಸದ ಸಹವಾಸದಲ್ಲಿ,
ವಾತ್ಸಲ್ಯ ಚಿಮ್ಮುವುದು ಮನದಾಳದಲ್ಲಿ.......................................
ನೂವು ಸೆಳೆತಕ್ಕೆ ತನು ಆಲಸಿದಾಗ
ಸಂಗಾತಿಯ ಮುಂಗುರುಳ ಸರಸ ಸಾಕಾಗುವುದು,
ದಣಿವು ಏರಿದ ತನು ಮನಕ್ಕೆ, ಆಗ
ಗರ್ಭದಾಳದ ಅಲ್ಲಾಟ ಮುದನೀಡುವುದು...........................
ನಿರೀಕ್ಷೆಯ ನಿಶೆಯಲ್ಲಿ ನವಮಾಸಜಾರಿ,
ಪ್ರಸವಕಾಲ ಕೂಡಿಬಂದಾಗ ,
ಕುಡಿಯ ಆಗಮನದ ಕಾಲಗಣನೆಯಲ್ಲಿ,
ಮನದುಂಬ ಚೇತನ ಸಂಚಾರವಾಗುವುದು..................................
ಬ್ರಂಹ್ಮಾಂಡವೇ ಹರಿದು ಹೊಮ್ಮಿದನೂವಿಗೆ,
ಪಾಲುದಾರರಿಲ್ಲದ ಪರಿತಾಪ ನರಳಾಟ,
ಜನ್ಮವಿತ್ತೊಡನೇ ನಿರಾಳ ಮೂಜುಗರ ಜನನಿಗೆ,
ಪುನರ್ಜನ್ಮ ಪಡೆದ ರಹಸ್ಯದ ಅರಿವು ಆಗುವುದು..................................
ಮಡಿಲು ತುಂಬಿ ಮುದನೀಡಿ,
ಎದೆ ತುಂಬಿದ ಅಮೃತ ಹೀರಿ,
ಕೂಸು ಕೊಸರಾಡಿದಾಗ ಸಂತೃಪ್ತಸಾರ,
ವಂಶಧಾರೆ ಹಡೆದ ತೃಪ್ತಿ ಸಡಗರ ಅಲ್ಲಿನೆಲೆಸುವುದು...................................
ತನುಮನದ ಬಯಕೆಗೆ ಕುಡಿಯೊಡೆದು,
ನವಮಾಸ ಹೊತ್ತು ಹೆರುವ ಕಾಯಕ,
ವಾತ್ಸಲ್ಯ ಮಮಕಾರದ ಕಾಯಕಲ್ಪಕ್ಕೆ,
ಗರ್ಭವೊಂದೆ ವೇದಿಕೆ ಜನನಿಯ ಕಾಯಕಕ್ಕೆ.............................
೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦