ಪ್ರಾಂತ್ಯಭೇದ ಹಾಗೂ ಶಬ್ದಗಳು

ಪ್ರಾಂತ್ಯಭೇದ ಹಾಗೂ ಶಬ್ದಗಳು

Comments

ಬರಹ

ವಿಶಾಲ ಕರ್ಣಾಟಕದಲ್ಲಿ ಪ್ರಾಂತ್ಯಭೇದಗಳಿಂದ ಕೆಲವು ವಸ್ತು/ವ್ಯಕ್ತಿಗಳಿಗೆ ಬೇಱೆ ಬೇಱೆ ಶಬ್ದಗಳಿಂದ ಸೂಚಿಸುತ್ತಾರೆ. ಅಧಿಕೃತವಾಗಿ ನಿಘಂಟುವಿನಲ್ಲಿ ಪ್ರಾಂತ್ಯಭೇದವಿದ್ದಾಗ ಬೞಸುವ ಎಲ್ಲಾ ಪದಗಳನ್ನು ಸೇರಿಸುತ್ತಾರೆ. ಶಿವಮೊಗ್ಗದಿಂದ ಉತ್ತರಕ್ಕೆ ಹೋದಂತೆ ಈ ಶಬ್ದಗಳನ್ನು ಬೞಸುತ್ತಾರೆ ಉದಾಹರಣೆಗೆ, ಇಣಚಿ=ಅಳಿಲು, ಜ(ಚ)ವಳೀಕಾಯಿ=ಗೋರಿಕಾಯಿ ಇವು ಪ್ರಾಂತ್ಯಭೇದದಿಂದ ಉತ್ತರಕರ್ಣಾಟಕದಲ್ಲಿ ’=’ ಚಿಹ್ನೆಯ ಎಡಗಡೆಗಿರುವ ಶಬ್ದ ಪ್ರಚಲಿತ. ಆದರೆ ಬಲಕ್ಕಿರುವ ಶಬ್ದಗಳು ಹೞೆಯ ಮೈಸೂರು ಪ್ರಾಂತ್ಯದಲ್ಲಿ ಉಪಯೋಗದಲ್ಲಿದೆ. ಶಿವಮೂಗ್ಗ ಮತ್ತು ದಕ್ಷಿಣ ಕನ್ನಡದಲ್ಲಿ ತೆಂಗಿನ ಅಥವಾ ಅಡಿಕೆಯ ಹೂವಿಗೆ ಹಿಂಗಾರ ಎಂದರೆ (ತುಳುವಿನಲ್ಲಿ ಪಿಂಗಾರ) ಮೈಸೂರು ಪ್ರಾಂತ್ಯದಲ್ಲಿ ಹೊಂಬಾೞೆಯೆನ್ನುತ್ತಾರೆ. ಧಾರವಾಡದಿಂದ ಉತ್ತರಕ್ಕೆ ಹೋದರೆ ತೆಂಗಿನಗಿಡಗಳು ಅಪರಿಚಿತವಾಗಿರುವುದಱಿಂದ(ಬೆಳೆಯುವುದಿಲ್ಲವಾದ್ದಱಿಂದ) ಈ ಎರಡೂ ಪದಗಳು ಹಿಂಗಾರ, ಹೊಂಬಾೞೆ ಉತ್ತರಕರ್ಣಾಟಕದ ಜನಕ್ಕೆ ಪರಿಚಯವಿಲ್ಲ. ವಸ್ತು/ವ್ಯಕ್ತಿಯನ್ನೇ ನೋಡದಿದ್ದಾಗ ಅದಕ್ಕೆ ಪದವೆಲ್ಲಿಂದ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet