ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್

ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್

ಬರಹ

ಪ್ರತಿನಿತ್ಯ ಆಗೊಮ್ಮೆ ಈಗೊಮ್ಮೆ, ಅದ್ಯಾವುದೋ ಬಾಂಬ್ ಬ್ಲಾಸ್ಟ್ ಆದಾಗ, ಮತ್ತೇನೋ ಆದಾಗ, "ಛೆ, ಈ ಜಗತ್ತು ಬದಲಾಗಬೇಕು, ನಾವುಗಳು ಇದನ್ನು ಬದಲಾಯಿಸಬೇಕು" ಅನ್ನಿಸಿದ್ದಿದೆಯೋ?
ಅಂತರ್ಜಾಲ ಜಗತ್ತನ್ನು ಸಂಪೂರ್ಣ ಬದಲಾಯಿಸಿಬಿಟ್ಟಿರುವ ಗೂಗಲ್ ಕಂಪೆನಿ ಈಗ ಹೀಗೆ ಅನ್ನಿಸುವವರಿಗೆ ಮಣೆ ಹಾಕಲಿದೆಯಂತೆ.

ಹಿನ್ನೆಲೆ:
ಗೂಗಲ್ ತನ್ನ ಹತ್ತನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದೆ. ಈ ಸಮಯದಲ್ಲಿ "Don't be evil" ಎಂದು ಹೊರಟ ಇದೇ ಕಂಪೆನಿ ಖಳನಾಯಕನಂತೆ ನಡೆದುಕೊಂಡು ಸ್ವತಃ evil ಆದ ಇತ್ತೀಚೆಗಿನ ಹಲವು ದೃಷ್ಟಾಂತಗಳ ನಡುವೆ ದುಡ್ಡು ಮಾಡಿತು, ಸಮಾಜ ಸೇವೆ ಮಾಡಿಲ್ಲ ಎಂಬ ಟೀಕೆ ಕೇಳಿಬಂದಿರುವುದು ಇವರ ಕಿವಿಗೂ ಬಿದ್ದಂತಿದೆ ಎಂಬುದು ಹಲವು ವರದಿಗಳ ಅಂಬೋಣ.
ಅದೇನೆ ಇರಲಿ, ಗೂಗಲ್ ಎಂದಿನಂತೆ ಹೆಚ್ಚಿನ ಕೆಲಸ ತಾನು ಮಾಡದೆ ಉಳಿದವರಿಗೆ ಮಾಡಲು ಬಿಟ್ಟು ಅದಕ್ಕೆ ಹಣಕಾಸಿನ ಸಹಾಯ ಮಾಡುವ ಜವಾಬ್ದಾರಿ ಹೊತ್ತಿಕೊಂಡಿದೆ. ಇದೇ ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್ (Project 10100).

ಇಡಿಯ ಜಗತ್ತನ್ನು ಬದಲಾಯಿಸಬಲ್ಲ ಐಡಿಯ ನಿಮ್ಮ ಬಳಿ ಇದ್ದರೆ ನೀವೂ ಇದರಲ್ಲಿ ಪಾಲ್ಗೊಳ್ಳಬಹುದು. ಒಟ್ಟಾರೆ ಹತ್ತು ಮಿಲಿಯನ್ ಡಾಲರುಗಳು ಕಣದಲ್ಲಿದೆಯಂತೆ!
ಯಾರ ಐಡಿಯ ಹೆಚ್ಚು ಜನರನ್ನು ತಲುಪುವುದೋ (ಹಾಗು ಅವರ ಜಗತ್ತನ್ನು ಉತ್ತಮಪಡಿಸುವುದೋ) ಅವರು ಗೆಲ್ಲಲಿ ಎನ್ನುತ್ತದೆ [:http://www.project10tothe100.com/how_it_works.html|ಈ ಕುರಿತ ಗೂಗಲ್ ಪುಟ].

ಐಡಿಯ ಕಳುಹಿಸಲು ಕೊನೆಯ ದಿನಾಂಕ - ಅಕ್ಟೋಬರ್ ೨೦, ೨೦೦೮.