ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
ಬರಹ
‘ಜಸ್ಟಿಸ್ ಡಿಲೇಯ್ಡ್, ಇಸ್ ನಥಿಂಗ್ ಬಟ್ ಜಸ್ಟಿಸ್ ಡಿನಾಯ್ಡ್’.
ಧಾರವಾಡಕ್ಕೆ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯಾಗಲು ೯ ದಶಕಗಳ ಕಾಲ ಈ ಭಾಗದ ಎಲ್ಲರೂ ಅವಿರತವಾಗಿ ಹೋರಾಡಬೇಕಾಯಿತು. ಇನ್ನು ನ್ಯಾಯಕ್ಕಾಗಿ ಕಕ್ಷಿದಾರ ಅಷ್ಟು ವರ್ಷ ಕಾಯಬೇಕಿಲ್ಲವಲ್ಲವೇ? ಅಥವಾ ವಕೀಲರ ಸುಭೀಕ್ಷೆಗಾಗಿ, ಕಕ್ಷಿದಾರನ ದುರ್ಭಿಕ್ಷೆಗಾಗಿ ಈ ಅನುಕೂಲವೆ? ಸರಕಾರ, ಹೈಕೋರ್ಟ ಶ್ರೀಸಾಮಾನ್ಯನ ಅನುಕೂಲ ಪರಿಗಣಿಸಿದೆ. ಆದರೆ ವಕೀಲರು ಹಾಗೆ ಮಾಡುವರೆ? ಕಲಿತವರಿಂದ ಕಲಿಯದವರ ಶೋಷಣೆ ಇಂದಿನದಲ್ಲ. ‘ಮುದ್ದತ್’ ವಕೀಲರು ಇನ್ನಾದರೂ ಕಕ್ಕ್ಷಿದಾರನ ಹಿತ ಕಾಯುವರೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ