ಪ್ರಾಮಾಣಿಕ ರಾಷ್ಟ್ರ ನಾಯಕರೀರ್ವರು

ಪ್ರಾಮಾಣಿಕ ರಾಷ್ಟ್ರ ನಾಯಕರೀರ್ವರು

ಕವನ

ಜಗದಗಲ ಮೆಚ್ಚಿ ತಲೆದೂಗಿದ ಮಹನೀಯರು

ಕರ್ತವ್ಯನಿಷ್ಠೆ ದೇಶಪ್ರೇಮ  ಪ್ರಜ್ಞಾವಂತ ಸರಳತೆಗೆ ಸಾಕ್ಷಿಯಾದವರು|

ಅಹಿಂಸೆ,ತ್ಯಾಗ,ಶಾಂತಿ ಪರಮೋಚ್ಚ ಧರ್ಮವೆಂದವರು

ಅಂತಃಸಾಕ್ಷಿ  ನೊಂದವರ ಬಾಳಿಗೆ ಧ್ವನಿಯಾದವರು||

 

ತುಂಡುಡುಗೆಯ ಸರದಾರ ಬಡತನ ಶಾಪವಲ್ಲ ಎಂದು ಸಾರಿದ ಮಹಾತ್ಮಾ

ವಿದೇಶಿ ದಬ್ಬಾಳಿಕೆ ನಾಗರಿಕ ಹಕ್ಕುವರ್ಣನೀತಿಗಾಗಿ ಹೋರಾಡಿ ಗೆಲಿದ ಬಾಪೂಜಿ|

ಉಪ್ಪಿನಕರ ಉಪವಾಸ ಸ್ವದೇಶಿ ಚಳುವಳಿ  ಸಂಘಟಿಸಿ ಮೆರೆದ ಗಾಂಧೀಜಿ

ಎಲ್ಲಾ ಧರ್ಮಗಳಿಗೂ ತಾಯಿಬೇರು ಸತ್ಯವೆಂದ ರಾಷ್ಟ್ರಪಿತ||

 

ಭರತಖಂಡದಿ ಸತ್ಯಾಗ್ರಹದ ಸಾಗರದಿ ಈಜಿ ದಡ ಸೇರಿದಿರಿ

ಆಗಸದ ಧ್ರುವ ನಕ್ಷತ್ರವಾಗಿ ಬುದ್ಧನಂತೆ ತ್ಯಾಗ ಜೀವಿಯಾದಿರಿ|

ದೇವರಭಯ ನಮ್ಮ ಬದುಕಿನ ದಾರಿದೀಪವೆಂದಿರಿ

ಪಾರದರ್ಶಕತೆ ಸಹಕಾರ ಕರ್ತವ್ಯ ನಿಷ್ಠೆ ಆಚರಿಸಿ ತೋರಿಸಿದಿರಿ||

 

ವಿಶ್ವಮಾನವತೆಯ ಸಂದೇಶದ ಬೀಜವನು ಬಿತ್ತಿ ಅಜರಾಮರವಾದಿರಿ

ಸ್ವಚ್ಛತೆ ಸ್ವಾವಲಂಬನೆ ಕಷ್ಟಸಹಿಷ್ಣುತೆಯ ಸಾಕಾರ ಮೂರುತಿಗಳಾದಿರಿ|

ರೈತಾಪಿ ಜನರ ಬವಣೆಗಳ ನೀಗಿಸಲು ಶಾಸ್ತ್ರೀಜಿ ಪಣತೊಟ್ಟಿರಿ

'ಜೈ ಜವಾನ್ ಜೈ ಕಿಸಾನ್ ಘೋಷಣೆ'ಯಲಿ ಬಡದೆಬ್ಬಿಸಿದಿರಿ||

 

ಭಗವಂತನನ್ನು ಕಾಯಕದಲಿ ಕಂಡ ನಿಸ್ವಾರ್ಥ ರಾಷ್ಟ್ರ ಸೇವಕರಾದಿರಿ

ಬಾಪೂ ಮಹಾತ್ಮಾರಾಷ್ಟ್ರಪಿತ ಸಾಕೆ? ನಿನಗೆ ಶಾಂತಿಪ್ರಿಯ ಎನಿಸಿದಿರಿ|

ಆತ್ಮಾವಲೋಕನ ಅತಿ ದೊಡ್ಡ ಅಸ್ತ್ರ ವೆಂದು ಸಾರಿದಿರಿ

ರಾಜಕೀಯ ಮುತ್ಸದ್ಧಿಗಳಾಗಿ ಪ್ರಾಮಾಣಿಕ ರಾಷ್ಟ್ರನಾಯಕರೆನಿಸಿದಿರಿ||

 

ಮತ್ತೊಮ್ಮೆ ಈರ್ವರೂ ಬುವಿಯಲಿ ಉದಿಸಿರಿ

ಕಾಯಕದ ಮರ್ಮವ ತಿಳಿ ಹೇಳಿರಿ/

ಭ್ರಷ್ಟಾಚಾರ ಅನಾಚಾರಗಳ ಬೇರು ಕಿತ್ತೆಸೆಯಿರಿ

ಬಡತನದಿ ಕೆಸರಿನ ಕಮಲದಂತೆ ಅರಳಿ ಬೆಳಗಿರಿ//

 

ನಿಮ್ಮಿಬ್ಬರ ಉಸಿರಿನ ನಿಟ್ಟುಸಿರ ಅರಿಯದಾದರು

ಅರ್ಥವಾಗುವಷ್ಟರಲಿ ಎಲ್ಲಾ ಕಳೆದುಕೊಂಡರು/

ಭಾರತಾಂಬೆಯ ಮಡಿಲ ಮಹಾನ್ ಬೆಟ್ಟಗಳೆರಡು ನವರತುನಗಳಾದಿರಿ 

ನೆನೆಯುವೆ ಈ ದಿನ ತಮ್ಮತ್ಯಾಗ ಬಲಿದಾನ ಹೋರಾಟದ ಮಜಲುಗಳನ್ನು//

(ಗಾಂಧೀಜಿ, ಶಾಸ್ತ್ರೀಜಿಯವರ  ನೆನಹು)

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್