ಪ್ರಾರಂಭದೊಳಗಿನ ಅಂತ್ಯ

ಪ್ರಾರಂಭದೊಳಗಿನ ಅಂತ್ಯ

ಕವನ

ಹಿರಿಯರು ಹೇಳಿದ 

ಮಾತನು ಕೇಳದೆ

ಮುಳ್ಳಲಿ ಬದುಕನು ನಡೆಯಿಸಿದೆ

ನೀತಿಯ ಬಿಟ್ಟೆನು

ಮಚ್ಚನು ಹಿಡಿದೆನು

ಕೊಚ್ಚುತ ಮುಂದಕೆ ನಾ ನಡೆದೆ

 

ಗುಂಡಿನ ಹೊಡೆತ

ಸುತ್ತಲು ಮೊಳಗಿಸಿ

ರಕ್ಕಸ ರೀತಿಯೇ ನಾ ಕುಣಿದೆ

ಸ್ವಾರ್ಥದ ನಡೆಯಲಿ

ರಕ್ತದ ಹೊಳೆಯನು

ಹರಿಸುತ ಬಾಳಲಿ ನಾ ಬೆಳೆದೆ 

 

ಭಾರತ ನೆಲದೊಳು

ಅನ್ನವ ಉಣ್ಣುತ

ದ್ರೋಹದ ಕೆಲಸವ ಮಾಡುತಲಿ

ಹೊರಗಿನ ದೇಶದ

ಜನರೊಳು ಬೆರೆಯುತ

ಇಲ್ಲಿಯ ಮನುಜರ ತುಳಿಯುತಲಿ

 

ಹೀಗೆಯೆ ಕಳೆದಿಹ

ಜೀವನ ಕೊನೆಗದು

ಧನ ಮದ ನಡೆಯೊಳು ಮೆರೆಯುತಲಿ

ಕಾಲನ ಕಣ್ಣಿಗೆ

ಬೀಳುತ ಕೊನೆಯಲಿ

ಬದುಕಿನ ಆತ್ಮವು ಕಳಚುತಲಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್