ಪ್ರಾರ್ಥನೆ ಮತ್ತು ವಿಶ್ವಾಸ

ಈ ಕಿರು ಕಥೆಯನ್ನು ನೀವು ವಾಟ್ಸಾಪ್, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಓದಿರಬಹುದು, ಆದರೆ ಈ ಕಥೆಯನ್ನು ಪ್ರತೀಬಾರಿ ಓದುವಾಗಲೂ ನಮ್ಮಲ್ಲಿ ಹೊಸದಾದ ಚೈತನ್ಯವೊಂದು ಮೂಡುತ್ತದೆ ಎನ್ನುವುದು ಸತ್ಯ.
ವಿಶ್ವ ವಿಖ್ಯಾತ ಕ್ಯಾನ್ಸರ್ ರೋಗ ತಜ್ಞರು ಜಾಗತಿಕ ಪ್ರಶಸ್ತಿಯೊಂದನ್ನು ಸ್ವೀಕರಿಸಲು ಅವರು ವಿಮಾನವೊಂದರಲ್ಲಿ ಪಯಣಿಸುತ್ತಿದ್ದರು.ತಾಂತ್ರಿಕ ದೋಷದಿಂದ ವಿಮಾನ ಬೇರೊಂದು ಏರಪೋರ್ಟಲ್ಲಿ ಇಳಿಯಿತು. ಮುಂದಿನ ವಿಮಾನ ಹತ್ತು ಗಂಟೆ ನಂತರವಿದೆ. ಕಾರಿನ ಮೂಲಕ ಹೋದರೆ ಕೆಲವೇ ಗಂಟೆಯಲ್ಲಿ ತಲುಪಬಹುದು ಎಂದು ತಿಳಿದು ಕಾರು ಬಾಡಿಗೆ ಪಡೆದು ಹೊರಟರು.
ರ್ದುದೈವದಿಂದ ಇದಕ್ಕಿದ್ದಂತೆ ಹವಾಮಾನ ಬದಲಾಗಿˌ ಧಾರಕಾರ ಮಳೆ ಸುರಿಯ ತೊಡಗಿತ್ತು. ಏಲ್ಲೋ ಹೋಗಬೇಕಿದ್ದ ಕಾರು ದಾರಿ ಪತ್ತಿ ಏಲ್ಲೆಲ್ಲೋ ಸುತ್ತಾಡಿಸಿತ್ತು. ದಣಿವು ಹಸಿವು ಕಂಗೆಡಿಸಿತ್ತು. ಕತ್ತಲು ಆವರಿಸಿತ್ತು. ಮುಂದಿನ ಪಯಣ ಅಸಾಧ್ಯವಾಗಿತ್ತು.
ವೈದ್ಯರು ತಂಗಲು ಮನೆಯೊಂದನ್ನು ಹುಡುಕಲು ಆರಂಭಿಸಿದರು. ಅವರಿಗೆ ದೂರದಲ್ಲಿ ಮುರಕಲು ಮನೆಯೊಂದು ಕಣ್ಣಿಗೆ ಬಿದ್ದಿತು. ವೈದ್ಯರು ಆ ಮನೆಯ ಬಾಗಿಲು ತಟ್ಟಿದರು.
ಆ ಮನೆಯ ಬಾಗಿಲು ತೆರೆದ ಮಹಿಳೆ, ಒಳಕರೆದು, ಬಿಸಿ ಹಾಲು ಮತ್ತು ಉಪಹಾರವನ್ನು ನೀಡಿ "ಸ್ವೀಕರಿಸಿˌ ವಿಶ್ರಮಿಸಿ" ಎಂದಳು. ಅವಳು ಕೆಲ ಹೊತ್ತಿನ ನಂತರ ತೊಟ್ಟಿಲ್ಲೊಂದರ ಮುಂದೆ ಕುಳಿತು ಪ್ರಾರ್ಥಿಸತೊಡಗಿದಳು ಮತ್ತು ಅವಳು ವೈದ್ಯರಿಗೂ ಪ್ರಾರ್ಥನೆಯಲ್ಲಿ ಪಾಲ್ಗೊಳಲು ವಿನಂತಿಸಿದಳು.
ಅದಕ್ಕೆ ವೈದ್ಯರು.. "ನನಗೆ ಪ್ರಾರ್ಥನೆಯಲ್ಲಿ ಯಾವ ನಂಬಿಕೆಯು ಇಲ್ಲಾ. ನಾನು ಕೇವಲ ದುಡಿಮೆಯಲ್ಲಿ ಮಾತ್ರ ವಿಶ್ವಾಸವಿಡುವುದಾಗಿ ಹೇಳಿದರು"
ಅವಳು ತೊಟ್ಟಿಲ ಮುಂದೆ ಮುಂಡಿಯೂರಿ ಕುಳಿತು ಒಂದರ ನಂತರ ಒಂದು ಪ್ರಾರ್ಥನೆ ಮಾಡುವುದನ್ನು ನೋಡಿದರು. ಅವಳ ಪ್ರಾರ್ಥನೆಯ ನಂತರ ವೈದ್ಯರು ಕೇಳಿದರುˌ"ಯಾತಕ್ಕಾಗಿ ನೀನು ದೇವರನ್ನು ಪ್ರಾರ್ಥಿಸುತ್ತಿದ್ದಿಯಾ? ದೇವರು ನಿನ್ನ ಪ್ರಾರ್ಥನೆ ಈಡೇರಿಸುವನೆಂಬ ಭರವಸೆ ಇದೆಯಾ?"
ಅವಳು ಹೇಳಿದಳು...
"ನನ್ನ ಮಗುವಿಗೆ ವಿಶಿಷ್ಟ ರೀತಿಯ ಕ್ಯಾನ್ಸರ ರೋಗವಿದೆ. ಅದನ್ನು ದೂರ ಪಟ್ಟಣದಲ್ಲಿರುವ ವಿಶ್ವ ವಿಖ್ಯಾತ ವೈದ್ಯರು ಮಾತ್ರ ಗುಣಪಡಿಸಬಲ್ಲರು. ಅವರ ಬಳಿ ಹೋಗಲು ಬೇಕಾವಷ್ಟು ಹಣ ನನ್ನಲ್ಲಿ ಇಲ್ಲ. ಆದರೆ ಪರಮಾತ್ಮ ನನ್ನ ಪ್ರಾರ್ಥನೆಗೆ ಏನಾದರೊಂದು ಮಾರ್ಗವನ್ನು ನಿಶ್ಟಯವಾಗಿ ಕಂಡುಹಿಡಿಯುವನು..."
"ಗಾಡ್ ಈಸ್ ಗ್ರೇಟ್"ˌ ಎಂದ ವೈದ್ಯರ ಕಣ್ಣುಗಳಲ್ಲಿ ನೀರು ತುಂಬಿತು, ಮನಸ್ಸು ಭಾವುಕವಾಯಿತು....
"ಕೆಟ್ಟುಹೋದ ಪ್ಲೇನ್ˌ ಧಾರಕಾರವಾದ ಮಳೆˌ ರಸ್ತೆ ತಪ್ಪುವಿಕೆ...ಭೌತಿಕ ಪ್ರಪಂಚದಲ್ಲಿ ಸಿಲುಕಿದ್ದ ನನ್ನನ್ನು ಹಣವಿಲ್ಲದ ಆದರೆ ಭರವಸೆಯ ಅಪಾರ ಸಂಪತ್ತನ್ನು ಹೊಂದಿರುವ ನಿನ್ನ ಬಳಿ ಕಳುಹಿಸಿದ್ದಾನೆ..ಚಿಂತೆ ಬಿಡು ಮಗುವಿನ ಆರೋಗ್ಯದ ಹೊಣೆ ಈಗ ನನ್ನ ಮೇಲೆ."
"ಜೀವನದಲ್ಲಿ ಯಾವುದು ಆಕಸ್ಮಿಕವಲ್ಲ. ಪ್ರತಿಯೊಂದರ ಹಿಂದೆ ಒಂದು ಅಜ್ಞಾತ ಕಾರಣವಿದ್ದೇ ಇರುತ್ತದೆ.."
ಇದು ಭಗವಂತನ ಪ್ರೇರಣೆˌ ನಿಸರ್ಗದ ನಿಯಮ.
ಹೌದಲ್ಲ, ಇಂದಿನ ದಿನ ಅಷ್ಟು ಸೂಕ್ಷ್ಮವಿದೆ. ಯಾರಿಗೆ ಗೊತ್ತು ಇವತ್ತು ರಾತ್ರಿ ಮಲಗಿ ನಾಳೆಯ ಸೂರ್ಯೋದಯ ನಾವು ನೋಡಿದಲ್ಲಿ ಅದೇ Bonus !
(ವಾಟ್ಸಾಪ್ ನಿಂದ ಸಂಗ್ರಹಿತ)