ಪ್ರಾರ್ಥನೆ
ಕವನ
ನಾ ದುಂಬಿ ಮೈ ದುಂಬಿ ಹೂ ದುಂಬಿ
ಕಣ್ತುಂಬಿ ಓಂಕಾರ ಕಿವಿದುಂಬಿ ಝೇಂಕಾರ
ಮನದುಂಬಿ ಸಿಹಿದುಂಬಿ ಹಾರುವೆ ಹೂವಿಂದ್ಹೂವಿಗೆ
ಮನದಲ್ಲಿ ಮಡಿಯಿಲ್ಲ ಯೋಚನೆ ಸ್ವಚ್ಛಂದ
ಯಾರನ್ನೂ ಮೆಚ್ಚಿಸೋ ಹಂಗಿಲ್ಲ
ಹೂವು ನನ್ನ ಮೆಚ್ಚಿಸಲು ತುಡಿಯುವುದೆಲ್ಲ
ಏಸೊಂದು ಬಣ್ಣ, ಮೈ ತುಂಬ ಕಣ್ಣ
ಆಸೆಯೊಳಗೆ ಸುಳಿಯುವುದಲ್ಲ
ಆಸೆಯಿಲ್ಲದೇ ಮಕರಂದವಿಲ್ಲ
ಹೂಗೆಂಪು ಹಾದಿ ರಕ್ತ
ಎಲೆಹಸಿರು ಉಸಿರಲ್ಲ ಅಗ್ಗ
ಕೇಸರಿ ಕೇಸರವೇ ಹೂವಲ್ಲ
ಹಳದಿ ಹೂವಿನ ಭಾವದೊಳಗೆ ಜಗವೆಲ್ಲ ಹಳದಿ
ಬಿಳಿಹೂವಿಗೆ ನಾ ಸೋತೆ ಮನವ
ಅದರೋಳಗೂ ಸ್ವಾರ್ಥದ ಕರುಹು
ಕಾಣುತಿಹುದಲ್ಲ?
ಮೂರ್ತಿ ಬಿಂಬ ತಿಳಿಯದ ಹುಂಬ
ಮುಖ ಮುಖವಾಡ ಕುರುಡ
ರೂಪ ಕಾಣದು ಪ್ರತಿಫಲನಕ
ನಾಲ್ಕು ಕಾಲುಗಳು ಅಶಕ್ತ
ಕಾಲವೂ ಅಲ್ಲ ಬಲವೂ ಇಲ್ಲ
ನಾ ದುಂಬಿ ಮನದುಂಬಿ ಬೇಡುವೆ ದೊಡ್ಡವನ
ನಾ ದುಂಬಿ ಮಗುತನವೇ ಮೈದುಂಬಿ
ಹರಡಲಿ ಜಗದಗಲ
ಮುಗಿಲಗಲ ಶಾಂತಿ ಅನಂತ ಓಂಕಾರ ಕಾಂತಿ
ಓ ಸಂತ ಈ ಪ್ರಾರ್ಥನೆ ಸ್ವಗತ
ಜಗವಾಗಲಿ ನಿರ್ಭೀತ ನಿರ್ಭೀತ ನಿರ್ಭೀತ
ಮನದುಂಬಿ ಮಮಕಾರ ರಾಜ್ಯವಾಳಲಿ
ನಾದುಂಬಿ ಮೈದುಂಬಿ ಮನದುಂಬಿ ಹಾರಾಡಲಿ
-ಗುರುಶಿಷ್ಯ (ರಾಘವೇಂದ್ರ ಗುಡಿ)
Comments
ಉ: ಪ್ರಾರ್ಥನೆ
In reply to ಉ: ಪ್ರಾರ್ಥನೆ by partha1059
ಉ: ಪ್ರಾರ್ಥನೆ
ಉ: ಪ್ರಾರ್ಥನೆ