ಪ್ರಿಯನಿಗೊಂದು ಕರೆಯೋಲೆ

ಪ್ರಿಯನಿಗೊಂದು ಕರೆಯೋಲೆ

ಅದು ದೀಪಾವಳಿಯ ಶುಕ್ರವಾರ ಸಂಜೆ ,ಎಲ್ಲರ ಮನೆಯಂಗಳಗಳು ದೀಪದಿಂದ ಕಂಗೊಳಿಸುತ್ತ ಹಬ್ಬದ ಸಂತೋಷಕ್ಕೆ ಮೆರುಗು ನೀಡುತಿದ್ದವು  ,ಯುವತಿಯರೆಲ್ಲಾ ದೀಪಕ್ಕೆ ಎಣ್ಣೆ ಹಾಕುತ್ತಾ ನೆಂಟರಿಷ್ಟರನ್ನು ವಿಚಾರಿಸುತ್ತಿದ್ದರೆ ,ಮಕ್ಕಳೆಲ್ಲಾ ಅವರದೇ ಲೋಕದಲ್ಲಿ ವರ್ಷವಿಡೀ ಅಪ್ಪ ಕೊಟ್ಟ ಪಾಕೆಟ್ ಮನಿ ಕೂಡಿಟ್ಟು ತಂದ ಪಟಾಕಿಗಳನ್ನ ನಾ ಮುಂದು ತಾ ಮುಂದು ಎಂದು ಹಾರಿಸುವುದರಲ್ಲಿ ತಲ್ಲೀನರಾಗಿದ್ದರು .ಮನೆಯಲ್ಲಿ ಎಷ್ಟು ಪಟಾಕಿಗಳನ್ನು ತಂದುಕೊಟ್ಟರು ,ನಾನು ಪಟಾಕಿಗೋಸ್ಕರ ಅಷ್ಟು ಕೂಡಿಟ್ಟಿದ್ದೆ ಎಂದು ಬೀಗುತ್ತಾ ನಲಿಯುತ್ತಿದ್ದರು .
          "ದೇವರ ಮನೆಯಲ್ಲೇ ಕೂತ್ಕೊಬೇಡ ಊರೋಳಗಿನ ಹೋಗಿ ಬಾರಮ್ಮ ಬೇಗ ಸಂಜೆಯಾಯ್ತು " ಅಮ್ಮ ಕೂಗಿದರು .
                         ದೇವರ ಮೇಲೆ ತಾಯಿಯಂತೆ ಅಪಾರ ನಂಬಿಕೆ ಇಟ್ಟಿದ್ದ ವಿದುಳಾ ,ಹೆಸರಿನಂತೆ ಶಶಿಯಂತೆ ಬಣ್ಣದಲಿ, ಎಲ್ಲರು ಒಪ್ಪುವಂತ ಗುಣ ಹಾಗೂ  ದೈರ್ಯವಂತೆಯಾಗಿದ್ದಳು .ತಂದೆ ತಾಯಿ ಮಹಾಭಾರತದಲ್ಲಿನ ಸಂಜಯರಾಜನ ತಾಯಿಯ ಹೆಸರೆಂದು ತಿಳಿಯದೆ ಇಟ್ಟಿದ್ದರು ,ಇದು ಅವಳ ನಡತೆ ,ಶಕ್ತಿಗೆ ತಕ್ಕ ಹೆಸರಾಗಿತ್ತು ,ವಿದುಳಾಗೆ ತನ್ನ ಹೆಸರಿನ ಚರಿತ್ರೆ ಗೊತ್ತಾಗಿದ್ದು ಪಿ.ಯು.ಸಿ ಯಲ್ಲಿ ತನ್ನ ಕನ್ನಡದ ಮಾಸ್ತರು ಮಹಾಭಾರತದ ಮತ್ತು ರಾಮಾಯಣದ ಎಲೆ ಮರೆಯ ಕಾಯಿಗಳ ಕಥೆಗಳನ್ನು ಹೇಳುವಾಗ (ವಿದುಳ ಎಂಬುದು  ಮಹಾಭಾರತದ ಸಂಜಯ ರಾಜನ ತಾಯಿಯ ಹೆಸರು ,ತನ್ನ ಮಗ ಸಿಂದು ರಾಷ್ಟ್ರದ ರಾಜನೊಂದಿಗೆ ಯುದ್ದದಲ್ಲಿ ಹೆದರಿ  ವಾಪಸಾದಾಗ ಮನೆಯೊಳಕ್ಕೆ ಬಿಡದೆ ಯುದ್ದದಲ್ಲಿ ಹೋರಾಡಿ ಜಯಿಸಬೇಕು ,ಇಲ್ಲ ಮಡಿಬೇಕು ಹೀಗೆ ಹಿಂದಿರುಗುವುದಲ್ಲ ಎಂದು ದೈರ್ಯ ತುಂಬಿದ್ದಳು ,ಇದರಿಂದ ಪ್ರಭಾವಿತನಾದ ಮಗನು ಮತ್ತೆ ಯುದ್ದ ಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿಕೊಂಡಿದ್ದ ).
                  ದೇವರ ಮನೆಯಿಂದ ಹೊರಬಂದವಳು ಅಮ್ಮನಾಜ್ಞೆಯಂತೆ ದೇವಸ್ತಾನಕ್ಕೆ ಸಿದ್ದವಾಗುತ್ತಿದ್ದಳು ,ಅಸ್ಟರಲ್ಲಿ ತನ್ನ ಸೆಲ್ ಫೋನ್ ಕರೆದಿದ್ದು ತಿಳಿದು ಮೇಜಿನತ್ತ ಹೋದಳು ,ಕಾಲ್ ಬರುತ್ತಿದ್ದುರ ಹೆಸರು ಪರಿಚಯವಿದ್ದರು ,ಇಷ್ಟೊತ್ತಲ್ಲಿ ಇವರೇಕೆ ಎಂದುಕೊಂಡು ರಿಸೀವ್ ಮಾಡಿದಳು ,
       "ಹಲೋ ",
"ಹಲೋ ವಿದುಳಾ ನಾನು " ರಘುನಂದನ ಆ ಕಡೆಯಿಂದ ಸ್ವಲ್ಪ ಗಡಿಬಿಡಿಯಿಂದ ಹೇಳಿದ .
"ಹೌದು ಗೊತ್ತಾಯ್ತು ಹೇಳಿ ,ಬೆಳಿಗ್ಗೆಯೇ ವಿಷ್ ಮಾಡಿದ್ರಲ್ಲ ಮತ್ತೆ ಇವಾಗ ಏನು ವಿಷ್ಯ ?" ಎಂದು ಸಮದಾನದಿಂದಲೇ ಕೇಳಿದಳು .
 ತನ್ನ ಸ್ನೇಹಿತೆಯ ಗುಣ ಗೊತ್ತಿದ್ದ ರಘು ,ಮತ್ತೆ ಗಡಿಬಿಡಿಯಿಂದ "ಅದು ಅದು "ಎಂದು ರಾಗವೆಳೆದ ,
ವಿದುಳಾ ಇವರಿಗೆನಾಯ್ತು ಎಂದುಕೊಂಡು ಮರುಮಾತನಾಡದೆ ಸುಮ್ಮನಿದ್ದಳು .
"ವಿದುಳಾ  ನಾನು ಪ್ರಾಜೆಕ್ಟ್ ಕೆಲಸದ ಮೇಲೆ ಮೈಸೂರಿಗೆ ಬಂದಿದ್ದೆ ಪ್ರಕಾಶ್ ಸರ್ ಮನೆಯಿಂದ ಹೊರಡುತ್ತಿದ್ದೀನಿ  ನಿನ್ನ ಹತ್ರ ಸ್ವಲ್ಪ ಮಾತ್ನಾಡ್ಬೇಕು "ಇಷ್ಟನ್ನು ಪಟಪಟನೆ ಹೇಳಿದ .

ವಿದುಳಾ  ತನ್ನಿಚ್ಚೆಯಂತೆ ಪಿ.ಯು.ಸಿ ಯ ನಂತರ B.Sc ಫಿಸಿಕ್ಸ್ ಮೇಜರ್ ತಗೊಂಡಿದ್ದರೆ ,ಅವಳ ಗೆಳತಿ ಶರ್ಮಿಳ  ತಂದೆ ತಾಯಿಯ ಬಲವಂತಕ್ಕೆ ಇಂಜೀನಿಯರಿಂಗ್ ಮೊರೆಹೊಗಿದ್ದಳು ,ವಿದುಳಾ ಳ ಮೂರನೇ ವರ್ಷದ ಕೊನೆ ಪರೀಕ್ಷೆಯ ಟೈಮ್ ಲಿ ಶರ್ಮಿಳ ತನಗೂ ರಜೆ ಇದ್ದುದರಿಂದ ,ಪರೀಕ್ಷೆ ಮುಗಿದಮೇಲೆ ಒಂದು ವಾರ ತನ್ನ ಮನೆಯಲ್ಲಿ ಇರಬೇಕೆಂದು ,ನಂತರದ ವಾರದಲ್ಲಿ ತಾನು ಅವಳ ಮನೆಗೆ ಬರುವುದಾಗಿ ಕೇಳಿದ್ದಳು ,ಅದರಂತೆಯೇ ಇದ್ದಾಗ ಒಂದು ದಿನ exam halt  ticket  ಪಡೆಯುವ ಸಲುವಾಗಿ ಶರ್ಮಿಳ ಸ್ನೇಹಿತೆಯನ್ನು ತನ್ನ ಕಾಲೇಜಿಗೆ ಕರೆದೊಯ್ದಿದ್ದಳು ,ಅಂದು ಪರಿಚಯವಾಗಿದ್ದು ರಘುನಂದನ -ಹೆಸರಿನಂತೆ ರೂಪವಂತ ,ಶರ್ಮಿಳ ನಿಂದ ಫೋನ್ ನಂ ಗಿಟ್ಟಿಸಿ ವಿದುಳಾ ಳ ಸ್ನೇಹಿತನಾಗಿದ್ದ .ಹೀಗೆ ಫೋನ್ ನಲ್ಲಿ ಮಾತ್ನಡುವಾಗ  ಪ್ರಕಾಶ್ ಸರ್ ವಿಷ್ಯ ಬಂದಿತ್ತು -ಇವ್ರು ಫಿಸಿಕ್ಸ್ ಲೆಕ್ಚರರ್ ಆಗಿದ್ದು ,ವಿದುಳಾ ಳ ಕಾಲೇಜ್ ಲಿ ಹಾಗೂ ರಘು ಟುಶನ್ ಗೆ ಕಾಮನ್ ಸರ್ ಆಗಿದ್ದಿದ್ದು ತಿಳಿದಿತ್ತು .ಕರೆಸ್ಪಾಂಡೆನ್ಸ್ phd ಮುಗಿಸಿದ್ದರಿಂದ ಎರಡು ವರ್ಷಗಳ ಹಿಂದೆ ಮೈಸೂರಿನ ಮಾನಸ ಗಂಗೋತ್ರಿ ಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು .ರಘುಗೆ ಟುಶನ್  ಸರ್ ಆಗಿದ್ದರಿಂದ ಅವರೊಂದಿಗೆ ಒಡನಾಟ ತನ್ನ ಸ್ವಂತ ವಿಷಯಗಳನ್ನು ಚರ್ಚಿಸುವಷ್ಟಿತ್ತು ,ಹೀಗಾಗಿ ರಘುಗೆ ವಿದುಳಾ ತಕ್ಕ ಜೋಡಿಯೆಂದು ಸರ್ ತಿಳಿಸಿದ್ದರಿಂದ ,ಅವರ ಮನೆಯಿಂದ ಹೊರಟಾಗ ಕಾಲ್ ಮಾಡಿದ್ದ .


ಎಂದಿನಂತೆ ಮಾತ್ನಾಡದೆ  ಇದ್ದುದರಿಂದ ವಿದುಳಾ "ಹೇಳಿ ಏನಾಯ್ತು "ಎಂದಳು ಮತ್ತೆ ,
ಅಷ್ಟರಲ್ಲಿ  ರಘು ಎಚ್ಚರಗೊಂಡವನಂತೆ
  "ಅದು ವಿದುಳಾ ನಿನ್ನ ಕಂಡ್ರೆ ತುಂಬಾ ಇಷ್ಟ ,ಆಕಾಶದ ನಕ್ಷತ್ರ ತಂದಿಡಾಲಾಗುವುದಿಲ್ಲ ಎಂದು ಗೊತ್ತಿದ್ದೂ ಆ ರೀತಿ ಆಸೆ ತೋರಲಾರೆ ,ಆದ್ರೆ ನಾನು ನಿನ್ನ ಕಣ್ಣ ರೆಪ್ಪೆಯಂತೆ ಕಾಪಡುತ್ತೀನೆಂದು ನಂಗೆ ನಂಬಿಕೆ ಇದೆ ,ನಂಗೆ ನೀನು ಒಳ್ಳೆಯ ಸ್ನೇಹಿತೆ ,ನಿನ್ನ ಜೊತೆ ಮಾತ್ನಡಿದಾಗ ನನ್ನ ನೋವುಗಳನೆಲ್ಲ ಮರ್ತೋಗಿ ಕುಷಿಯಾಗ್ತಿತ್ತು  ಅಂತಷ್ಟೇ ಗೊತ್ತಿತ್ತು ,ಇದೆ ರೀತಿ ಸರ್ ಗೆ ಹೇಳ್ಕೊಂಡಾಗ  ಅವರು ಅವಳು ನಂಗು ಚೆನ್ನಾಗಿ ಗೊತ್ತು ,ಅವಳೇ ನಿಂಗೆ ಸರಿಯಾದ ಜೋಡಿ ಅಂದಾಗ ನಾನ್ ನಿನ್ನ ನೆನಪಲ್ಲಿ ಅರೆಕ್ಷಣ ಮೈಮರೆತಿದ್ದು ನಿಜ ,ನನೀನು  ಬಾಳಸಂಗಾತಿಯಾದ್ರೆ ನಾನೇ ಪುಣ್ಯವಂತ ,ನೀನು ನನ್ನ ಪ್ರಪೋಸಲ್ ತಿರಸ್ಕರಿಸಲ್ಲ  ಅಂತ ಅಂದ್ಕೊಂಡಿದೀನಿ " ಎಂದು ಅದೇ ವೇಗದಲ್ಲಿ ಹೇಳಿ ಮುಗಿಸಿದ .
  ಇತ್ತ ವಿದುಳಾ ಅಮ್ಮನ ಕೂಗಿಗೆ ಓಗೊಡದೆ "ಪ್ರಕಾಶ್ ಸರ್ "ಅಂದಷ್ಟೇ ಆಶ್ಚರ್ಯಕರವಾಗಿ ನಿದಾನವಾಗಿ ನುಡಿದಳು .ಅವರ ತಾಯಿ ಪ್ರಕಾಶ್ ಸರ್ ಕಾಲ್ ಮಾಡಿರಬಹುದೆಂದು ಸುಮ್ಮನೆ ಹೊರನಡೆದರು.
"ಪ್ರಕಾಶ್ ಸರ್ ಹೀಗೆಂದರೆ " ಮತ್ತೆ ಅದೇ ಸ್ವರದಲ್ಲಿ ಪ್ರಶ್ನೆ ಮಾಡಿದಳು .
ಹೌದೆಂದು ತಿಳಿದಾಗ ರಘುನ ವಿಷ್ಯ ಚೆನ್ನಾಗಿಯೇ ತಿಳಿದ್ದಿದುರಿಂದ ,ಮನೆಯಲ್ಲಿ ಒಪ್ಪಿದರೆ ಆಯ್ತು  ಎಂದು ಸಮ್ಮತಿಸಿದ್ದಳು .
         ಹೀಗಾಗಿ ಆರು ತಿಂಗಳಲ್ಲಿ ರಘುನ ಇಂಜಿನಿಯರಿಂಗ್ ಮುಗಿದು ಒಳ್ಳೆಯ ಕೆಲಸ ಸಿಕ್ಕಿತ್ತು ,ವಿದುಳಾ ೨ನೇ ವರ್ಷದ MSc  ಗೆ ಸಜ್ಜಾಗುತ್ತಿದ್ದಳು  ,ಅಷ್ಟರಲ್ಲಿ  ಇಬ್ಬರ ಮನೆಗೂ ಪ್ರಕಾಶ್ ಸರ್ ತಿಳಿಸಿ ವಿದುಳಾ  ವಿದ್ಯಾಬ್ಯಾಸ ದ ನಂತರ ಮದುವೆಗೆ ನಿಶ್ಚಯವಾಯಿತು.
  ರಘು ತನ್ನ ರಜೆ ದಿನದಲ್ಲಿ ಮೂವಿ ಗೆಂದು ಒಂದ್ಸಲ ಕರೆದರೆ ,ತನ್ನ ಮನೆಯವರ ಮೇಲಿನ ಅಭಿಮಾನಕ್ಕಾಗಿ ಹೋದರೆ ತಪ್ಪಾಗುವುದೆಂದು  ಭಾವಿಸಿ ಮೂವಿ ನೋಡಲು ಇಷ್ಟವಿಲ್ಲವೆಂದು ಸುಳ್ಳು ಹೇಳಿದ್ದಳು .ಎಲ್ಲರ ಒಪ್ಪಿಗೆಯಂತೆ ಸಂಭ್ರಮದಿಂದ ಮದ್ವೆಯಾಯ್ತು ,ಇಬ್ಬರು ಮೈಸೂರಿನಲ್ಲಿ ಒಂದು ಮನೆ ಮಾಡಿಕೊಂಡು ಸಂಸಾರಕ್ಕೆ ಕಾಲಿಟ್ತಿದ್ದರು ,ರಘು ಸರ್ವಜ್ಞ ನ ವಚನದಂತೆ ಮೆಚ್ಚಿನ ಹೆಂಡತಿ ಪಡೆದು ಖುಷಿಯಾಗಿದ್ದ .

 ಮೂರು  ವರ್ಷಗಳ ನಂತರ ಇಬ್ಬರ ಪ್ರೀತಿಯ ಕಾಣಿಕೆಯಾಗಿ ಹೆಣ್ಣು ಮಗುವಾಗಿ ಹತ್ತು ತಿಂಗಳುಗಳಾಗಿತ್ತು ,ಒಂದು ದಿನ ಕಾಲೇಜಿನ ಕೆಲಸ ಮುಗಿಸಿ ವಿದುಳಾ  ಮನೆಗೆ ಹಿಂದಿರುಗುವಾಗ ರಸ್ತೆಯಲ್ಲಿ ತಲೆತಿರುಗಿ ಬಿದ್ದ ವಿಷ್ಯ ಗೊತ್ತಾಗಿ ರಘು ಆಫೀಸ್ ಗೆ ರಜೆ ಮಾಡಿ ಹಾಸ್ಪತ್ರೆ ಗೆ ತೋರಿಸಿದ ,ಎಸ್ಟೆ ಕಷ್ಟ ಇದ್ದರೂ ತೋರಿಸಿಕೊಳ್ಳದ ವಿದುಳಾ ಅಂದು ಬ್ರೈನ್  ಟುಮರ್ ( lymphoma )  ಗೆ ತುತ್ತಾಗಿದ್ದಳು ,ಇದು ರಘುನನ್ನು ಖುಷಿಯ ಹಬ್ಬದಿಂದ ಹೊರನೂಕಿದಂತಾಗಿತ್ತು ,ಈ ವಿಷಯ ವಿದುಳಾಗು ತಿಳಿಯಿತು ,ಡಾಕ್ಟರ್ ಇನ್ನು ಆರು ತಿಂಗಳ ಕಾಲ ನಿಮ್ಮ ಹೆಂಡತಿಗೆ ಇಷ್ಟವಾದುದನ್ನು ಮಾಡುತ್ತಾ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ಅವರ ಕರ್ತವ್ಯ ಮುಗಿಸಿದರು.

             ರಘುನಂದನ ತನ್ನ ನಂದನವನಕ್ಕೆ ಬಂದ ಬಿರುಗಾಳಿ ಒಡೆತಕ್ಕೆ ಸಿಕ್ಕಿ ಸೊರಗಿದ,ತನ್ನ ಮಗುವನ್ನು ,ಹೆಂಡತಿಯನ್ನು ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳಲಾರಂಬಿಸಿದ ,ಮನೆಗೆ ಆಳುಗಳನಿಟ್ಟ ,ತನ್ನ ತಾಯಿಯನ್ನು ಹೀಗೆ ಬನ್ನಿ ಸ್ವಲ್ಪ ದಿನ ನನ್ನ ಮನೆಯಲ್ಲಿರಿ ಎಂದು ಕರೆಸಿಕೊಂಡ ,ಅವರ್ಯಾರಿಗೂ ವಿಷಯ ಗೊತ್ತಾಗದಂತೆ ನೋಡಿಕೊಂಡ .
           ವಿದುಳಾ ತನಗೆ ಏನು ಗೊತ್ತಿರದಂತೆ ನಟಿಸುತ್ತಾ ,ಮಗುವನ್ನು ನೋಡಿ ಮೈಮರೆಯಲು ಪ್ರಯತ್ನಿಸುತ್ತಿದ್ದಳು ,ಆದ್ರೆ ಆ ಖಾಯಿಲೆಯ ಲಕ್ಷಣವೇ ಹಾಗೆ ಯಾರನ್ನು ಮರೆಯಲು ಬಿಡುವುದಿಲ್ಲ  ವಿಪರೀತ ತಲೆನೋವು ,ವಾಮಿಟಿಂಗ್ ,ಕಣ್ಣಿನ ದೃಷ್ಟಿ ಕಡಿಮೆಯಾಗುತ್ತ ಬಂದು ಅವಳ ಜೀವವನ್ನ ಸೋಲಿಸುತಿತ್ತು .ವಿಧಿಯಾಟ ಬಲ್ಲವರಾರು ,ತಪ್ಪಿಸುವರಾರು ಎನ್ನುವಂತೆ ಒಂದುದಿನ ವಿದುಳಾ ಮೃತ್ಯುವಿನ ಸೆರೆಯಾಗಿ ಎಲ್ಲರಿಗು ಮರೆಯಾಗಿ ಹೋದಳು .ಇದೆಲ್ಲಾ ಮುಗಿದು ಸ್ವಲ್ಪ ದಿನಗಳು ಮುಗಿದ ನಂತರ ರಘುಗೆ ವಿದುಳಾ ಓದುತ್ತಿದ್ದ ಪುಸ್ತಕಗಳ ನಡುವೆ ಒಂದು ಪತ್ರ ಸಿಕ್ಕಿತು ,

               " ಪ್ರೀತಿಯ ರಘು ,
                           ನಾನು ಹೆಚ್ಚೆಂದರೆ ಇನ್ನೊಂದು ತಿಂಗಳು ಬದುಕಿರುತ್ತೇನೆ ಎಂದು ನನಗೆ ಗೊತ್ತು ,ಎಲ್ಲರಿಗು ಭಾರವಾದೆನ ಅಥವಾ ದೇವರಿಗೆ ಇಷ್ಟವಾದೆನ ತಿಳಿಯುತ್ತಿಲ್ಲ ,ನಾನು ನಿಮ್ಮನ್ನೆಲ್ಲ ಬಿಟ್ಟು ಹೋಗಲೇಬೇಕು ಎಂದು ಬರೆದಾಗಿದೆ. ನೀವು ನಂಗೆ ಸಿಕ್ಕಿದ್ದು ವರದಂತೆ ಖಂಡಿತ ,ಇಂದಿನ ವರದಕ್ಷಿಣೆ ಪಿಡುಗು ,ಗಂಡಸರ ಕೆಟ್ಟ ಚಾಳಿಗಳು ,ಅತ್ತೆ ಮಾವಂದಿರ ಮುನಿಸುಗಳು ,ಇವೆಲ್ಲವುಗಳ ಯಾವುದೇ ಅನಾಹುತಕ್ಕೆ ಸಿಗದಂತೆ ನನ್ನನ್ನು ಸುಖವಾಗಿ ನೋಡಿಕೊಂಡಿರಿ ,ಹಾಗೆ ದೇವ್ರು ನನ್ನ ನೆನಪನ್ನು ನಿಮ್ಮಲ್ಲಿ ಉಳಿಸಲು ಮುದ್ದಾದ ಮಗು ಕರುಣಿಸಿದ್ದಾನೆ ,ಎಲ್ಲರು ಮೆಚ್ಚಿದ ದಂಪತಿಗಳಾಗಿದ್ದೇವೆ ,ಅದಲ್ಲದೆ ನಾನು ಮುತ್ತೈದೆಯಾಗಿ ಸಾಯುತ್ತೇನೆ ,ಅದುವೇ ನನಗೆ ಸ್ವರ್ಗ ಇದಕ್ಕಾಗಿ ಅನಂತಾನಂತ ಧನ್ಯವಾದ. ಈ ಪತ್ರ ನಾನು ಹೋದ ಮೇಲೆ ಸಿಗುವುದೆಂದು ನಂಗೆ ತಿಳಿದಿದೆ ,ಆದರೆ ಎಂದು ನಿಮ್ಮ ಮುಂದೆ ಹೇಳದ ನನ್ನ ಮನಸಿನ ಒಂದು ತೊಳಳಾಟವನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ ,ನಿಮಗೆ ನನ್ನ ಒಪ್ಪಿಗೆ ತಿಳಿಸಿದ ದಿನ -ನೀವು ಎಲ್ಲರಂತೆ ಒಂದು ಗಿಫ್ಟ್ ,ಟ್ರೀಟ್ ,ಗ್ರೀಟಿಂಗ್ ಕಾರ್ಡ್ ,ರೋಜ್ ಕೊಟ್ಟು ಪ್ರಪೋಸ್ ಮಾಡದೇ ,ನಿಮ್ಮ ಮನಸಲ್ಲಿರುವುದನ್ನು ನೇರವಾಗಿ ಹೇಳಿದಕ್ಕೆ ಇಷ್ಟವಾದಿರಿ ಎಂದು ಹೇಳಿದ್ದು ನನ್ನ ತಪ್ಪಿರಬಹುದು ,ನೀವು ಹೇಳಿದಂತೆ ನನ್ನ ರಾಣಿಯಂತೆ,ಏನು ಕೆಲಸಕ್ಕೂ ಕಷ್ಟವಾಗದಂತೆ ನೋಡಿಕೊಂಡು ,ಎಲ್ಲ ಹಬ್ಬಗಳಲ್ಲೂ ತವರು ಮನೆಗೂ ಜೊತೆ ಬರುತ್ತಿದ್ದಿರಿ ,ನೀವು ನಿಮ್ಮ ಮಾತು ಪರಿಪಲಿಸಿದ್ದು ನಿಜ, ಆದ್ರೆ ಎಲ್ಲಾ ಹುಡುಗಿಯರಂತೆಯೇ ತನ್ನ ಗಂಡನಿಂದ ಒಂದು ರೋಜ್ ಪಡೆಯುವ ಅಭಿಲಾಷೆಯಲ್ಲಿದ್ದೆ ,ನನ್ನ ಎಲ್ಲಾ ಬರ್ತ್ ಡೇ ಗಳಲ್ಲೂ ನನ್ನ ಸ್ನೇಹಿತರು ರೇಗಿಸುವಾಗ ಸೀರೆ ಕೊಡಿಸಿದರು , ಮನೆಗೆ ಹೊಸ ಕಾರ್ ತಂದ್ರು ನನ್ನ ಬರ್ತ್ ದಿನ ಅಂತಾ ಸುಳ್ಳು ಹೇಳ್ತಿದ್ದೆ ,ಯಾವುದೇ ಜೆವೆಲ್ಲರಿ ತಗೊಂಡ್ರು ಮುಂದಿನ ಬರ್ತ್ ಡೇ ವರೆಗೂ ಇರಿಸಿ ನಂತರ ನೀವು ನನಗಾಗಿ ಸರ್ಪ್ರೈಸ್ ಗಿಫ್ಟ್ ಕೊಟ್ಟಿದೆಂದು ಹೇಳುತಿದ್ದೆ .
                 ನನ್ನ ಮನೆಯವರಿಗೆ ಅಂಜಿ ಫಿಲಂ ನೋಡಲು ಇಷ್ಟವಿಲ್ಲವೆಂದಿದಷ್ಟೇ ,ಆದ್ರೆ ನೀವು ಮದ್ವೆಯಾದ ಮೇಲೆ ಒಂದು ದಿನವೂ ನನ್ನನ್ನು ಕೇಳಲೇ ಇಲ್ಲ ,ಒಂದೊಂದು ದಿನ ಕಾಲೇಜು ತುಂಬಾ ಬೋರ್ ಎನ್ನಿಸಿದಾಗ ಮನೆಗೆ ಬಂದು ಸಹೋದ್ಯೋಗಿಗಳಿಗೆ ಅವರ ಜೊತೆ ಸಿನಿಮಾಗೆ ಎಂದು ಹೇಳುತಿದ್ದೆ ,ನೀವು  ಆಫೀಸ್ ಕೆಲಸದ ಮೇಲೆ ಬೆಂಗಳೂರಲ್ಲಿ ಕಳೆದ ಐದು ತಿಂಗಳುಗಳು  ಇದ್ದಾಗ ನನಗೆ ವಿಪರೀತ ತಲೆನೋವು ,ಒಂದೊಂದು ಬಾರಿ ನಿಮ್ಮನ್ನ ತುಂಬಾ ನೋಡಬೇಕೆನ್ನುವ ಆಸೆಯಾಗಿ ನಾನೇ ಅಲ್ಲಿಗೆ ಬರುತ್ತೆನೆಂದರೆ ನೀವು ಮುಂದಿನ ವಾರ ನಾನೇ ಬರ್ತೀನಲ್ಲ ಮತ್ತೆ ಯಾಕೆ ಎಂದೆಳುತ್ತಿದ್ದಿರಿ ,ಅವಾಗ ಈ ಕಾಯಿಲೆಯ ಲಕ್ಷಣಗಳಿವು ಎಂದು ನನಗೆ ತಿಳಿದಿರಲ್ಲಿಲ್ಲ ,ನಿಮ್ಮನ್ನು ನೋಡುವಾ ಆಸೆಯಿಂದ ತುಂಬಾ ನರಳುತಿದ್ದೆ .
                ಇದೆಲ್ಲಾ ನಿಮಗೆ ತಿಳಿಸದಿದ್ದರು ಒಂದು ದೊಡ್ಡ ಡಾಲ್ ನ್ನು ನನ್ನ ಗಂಡನಿಂದ ಪಡೆಯಬೇಕೆಂದು ತುಂಬಾ ಆಸೆಯಿತ್ತು ,ಅದು ನನ್ನ ಕಾಲೇಜ್ ದಿನದಿಂದಲೂ ,ಅಂತೆಯೇ ಒಂದು ದಿನ ನಿಮಗೆ ತಿಳಿಸಿದ್ದೆ ಕೂಡ ,ಶಾಪಿಂಗ್ ಗೆಂದು ಬರುವಾಗ ನೆನಪಿಸಿದಾಗ ಇಲ್ಲೆಲ್ಲಾ ಬೇಡ ಒಳ್ಳೆಯದೊಂದು ಶಾಪ್ ನಲ್ಲಿ ತಂದ್ರಾಯ್ತು ಅಂದ್ರಿ ,ಮತ್ತೆ ಮಗುವಾದಾಗ ಅವಳಿಗೆ ಚಿಕ್ಕ ಪುಟ್ಟ ಬೊಂಬೆ ತಂದಾಗ ನನ್ನ ಕುರಿತು ಇವೆಲ್ಲ ಪಾಪುಗೆ ,ನಾನು ನಿಂಗೆ ಎಂದೇಳಿ  ನಕ್ಕುಬಿಡುತ್ತಿದ್ದಿರಿ ,ನಿಮಗೆ ಇದುವರೆಗೂ ನೆನಪಿಲ್ಲ ಎಂದು ನಂಗೆ ಗೊತ್ತು ,ನನಗೆ ಇನ್ನೂ ತಿಳಿಯುತ್ತಿಲ್ಲ  ನನ್ನ ಆಸೆಗಳನ್ನ ನೀವು ತಮಾಷೆಯೆಂದುಕೊಂಡಿದ್ದೇಕೆ ,ನನ್ನ ಅಂಜಿಕೆಯನ್ನ ನಿಮ್ಮ ಕರ್ತವ್ಯಗಳಂತೆ ಮಾಡಿಕೊಂಡಿದ್ದೇಕೆಂದು .ಎಲ್ಲಾ ವಿಷಯಗಳನ್ನು ತಿಳಿಸುತ್ತಿದ್ದ ನಾನು ಈ ವಿಷಯವನ್ನು ಇಲ್ಲಿ ಬರೆದಿದ್ದೇನೆ ,ಇಂದು ನಾನು ಮುಕ್ತ ,ನಿಮ್ಮನ್ನೆಲ್ಲ ಅಗಲುವ ದಿನಗಳನ್ನು ಎಣಿಸುತ್ತಿದ್ದೇನೆ ,ದೇವರಲ್ಲಿ ಜನ್ಮ ಜನ್ಮವು ನೀವೇ ನನ್ನ ಪತಿಯಾಗಲೆಂದು ಪ್ರಾರ್ಥಿಸುತ್ತಿದ್ದೇನೆ ,ದೇವರು ತಥಾಸ್ತು ಎಂದರೆ ಆಗ ನಂಗೆ ಡಾಲ್ ಕೊಡಿಸ್ತೀರಾ ಅಲ್ವ ,ಹಾಗೆ ಗೊಂಚಲು ಗಟ್ಟಲೆ ರೋಜ್ ನನ್ನ ಸಮಾದಿಗೆ ಇಡುವ ಬದಲು ಪ್ರತಿವರ್ಷ ಒಂದು ರೋಜ್ ಕೊಡ್ತೀರ ಅಲ್ವ ."
                                                                                             ಇಂತಿ ನಿಮ್ಮ ಪ್ರೀತಿಯ ನಲ್ಲೆ
                                                                                                  ವಿದುಳಾರಘುನಂದನ


           ಪತ್ರ ಓದುತಿದ್ದ ರಘು ಹಾಗೆಯೇ ಮಂಚದಿಂದ ಕೆಳಗುರುಳಿದನು ,ತನ್ನ ಕೈ ಕಾಲುಗಳಾಡದೆ ಅಲ್ಲಿಯೇ ಕುಳಿತು "ಒಬ್ಬರ ಮನಸನ್ನರಿಯದ ಯಂತ್ರವಾಗಿಬಿಟ್ಟೆ ,ಎಲ್ಲಾ ನನ್ನ ಇಷ್ಟಗಳನ್ನು ಹೇಳಿದ ನಾನು ಮನ ಅರಿತ ಹೆಂಡತಿ ಪಡೆದ ಖುಷಿಯಲ್ಲಿದ್ದೆ ,ಒಂದು ದಿನವು ನಿನ್ನ ಇಷ್ಟ  ಕೇಳದೆ ಮೋಸ ಮಾಡಿಬಿಟ್ಟೆ " ಎಂದು ಅಳುತ್ತಾ  ಮೂರ್ಚೆಹೊದನು . ರಘುನಂದನ ಹೆಸರಿನಂತೆ ತಂದೆಗೆ ತಕ್ಕ ಮಗನಾಗಿ ,ಸೀತೆಯಂತ ಹೆಂಡತಿ ಪಡೆದು ,ಈಗ ಸೀತೆ ಇಲ್ಲದ ಸುಧೀರ್ಘ ವನವಾಸದಲ್ಲಿದ್ದನು .

Comments

Submitted by Vinutha B K Fri, 02/01/2013 - 16:32

ಸೇವ್ ಮಾಡಿದಾಗ ನೋಡಿದೆ ಸ್ವಲ್ಪ ಕಡೆ ಕಾಗುಣಿತ ತಪ್ಪಾಗಿದೆ ,ಬದಲಾಯಿಸೋದ್ದಿಕ್ಕೆ ಗೊತ್ತಾಗ್ಲಿಲ್ಲ ,ಯಾರಾದರು ತಿಳಿದಲ್ಲಿ ತಿಳಿಸಿ
Submitted by mamatha.k Mon, 03/04/2013 - 16:19

In reply to by Vinutha B K

ವಿನುತಾ ಅವರೆ ನಿಮ್ಮ ಕಾದಂಬರಿ ೨ ಬಾರಿ ಪ್ರಕಟಗೊಂಡ ದಿನವೇ ಒಂದನ್ನು unpublish ಮಾಡಲಾಗಿದೆ, ಒಂದನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಪ್ರತಿಕ್ರಿಯೆಗಳಿರುವ ಬರಹ ಮಾತ್ರ ಸಂಪದದಲ್ಲಿ ಕಾಣಿಸಿಕೊಳ್ಳುತ್ತದೆ. ಧನ್ಯವಾದಗಳು.