ಪ್ರಿಯನಿಗೊಂದು ಕರೆಯೋಲೆ

ಪ್ರಿಯನಿಗೊಂದು ಕರೆಯೋಲೆ

ಕವನ

ಪ್ರಿಯ ನೆನಪಿದೆ ನೀವು ನನ್ನನ್ನು ಒಪ್ಪಿಸಿದ ದಿನಾಂಕ
ಮನಸ್ಸು ಹಕ್ಕಿಯಾಯ್ತು  ಗೊತ್ತಾದಾಗ ನೀವು  ಪ್ರೀತಿಯ ಆರಾದಕ
ಪಡೆದಿರುವಿರಿ ಪ್ರೀತಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ
ಜೀವ ಮಿಡಿಯುತಿದೆ ,ಇದಕೆ ನಿಮ್ಮನ್ನು ಸೇರುವ ತವಕ
ಮನಸ್ಸು ಸಪ್ಪಗಾಗಿದೆ ಪ್ರಿಯ ,ಇದಕೆ ಅಪ್ಪಾಜಿ ಒಪ್ಪಿಗೆಯ ಆತಂಕ
ನಗದು ,ಆಸ್ತಿ ಬೇಡ ಗೊತ್ತು ಇವು ಜಾಸ್ತಿಯದಷ್ಟು ನೆಮ್ಮದಿಗೆ ಮಾರಕ
ನೀರಿಕ್ಷಿಸುವುದೊಂದೇ ,ನಿಮ್ಮ ಪ್ರೀತಿ -ನನ್ನ ಉಸಿರು ಇರುವ ತನಕ
ಅಪ್ಪಾಜಿ ಒಪ್ಪಿದ ದಿನ ನನ್ನ ಮನಸಾಗುವುದು ನಿರಾತಂಕ
ನಿರಾತಂಕ ಮನಸ್ಸು ನಿಮ್ಮನು ಸೇರಿದ ದಿನ ಈ ಜೀವನ ಸಾರ್ಥಕ .

ಚಿತ್ರ್