ಪ್ರೀತಿಯಲ್ಲವೇ

ಪ್ರೀತಿಯಲ್ಲವೇ

ಬರಹ

ನಿನ್ನ ಪ್ರೆಮದಾಳ ಕಣ್ತುದಿಯಲಿ
ಕಾಣಲು ನನ್ನ ಕಲ್ಲೆದೆಯೂ
ಹಾಡಾಯ್ತು, ಕವನವಾಯ್ತು
ಗೆಳತಿ ನೀ ಪ್ರೀತಿಯಲ್ಲವೇ

ಪ್ರೇಮದಾಳಕೆ ಇಳಿದು ಬಂದೆ
ನಿನ್ನ ನಗು, ಅಳು, ಹುಸಿಗೋಪ
ಎಲ್ಲವೂ ನನಗಿಷ್ಟವೇ
ಒಮ್ಮೊಮ್ಮೆ ನಿನ್ನ ಮಾತಿನೇಟಿಗೆ
ಬೇಸರಿಸಿದರೂ ಮರೆತು
ನಿನ್ನಲ್ಲಿಗೆ ಬಂದು, ಕಡೆಗೆ
ನಾನೇ ಕ್ಷಮೆ ಕೇಳುವುದು
ಪ್ರೀತಿಯದೊಂದು ಮುಖವಲ್ಲವೆ
ಗೆಳತಿ ನೀ ಪ್ರೀತಿಯಲ್ಲವೇ

ಸಾಯುವ ಮನಸ್ಸಾಗಿ
ತುದಿಬೆಟ್ಟದಲಿ ನಿಂತರೂ
ನೀನೆ ಕಂಡು ನೀ ಬದುಕಾಗಿ
ಪ್ರೀತಿಯಾಗಿ, ಬದುಕೇ ಪ್ರೀತಿಯಾಗಿ
ಹಿಂತಿರುಗಿದ್ದು ಪ್ರೀತಿಯಲ್ಲವೇ

ಮನಸಿನಾಳಕೆ ಇಳಿದವಳು
ಭಾವಕೆ ಬೆಳಕಾಗಿ ಬಂದವಳು
ಜೀವಕೆ ಜೀವವಾದವಳು
ನನ್ನಣುವಲ್ಲಿ ಅಣುವಾದವಳು
ಗೆಳತಿ ನೀ ಪ್ರೀತಿಯಲ್ಲವೇ