ಪ್ರೀತಿಯೊಳಗಿನ ಕನಸು

ಪ್ರೀತಿಯೊಳಗಿನ ಕನಸು

ಕವನ

ನಿನ್ನೆವರೆಗೂ ನಾನು ಕುಳಿತಿದ್ದೆ ಸುಮ್ಮನೆ

ಇಂದು ನೀ ಬಂದಾಗ ಅರಳಿ ನಿಂತೆ

ಪ್ರೀತಿಯೊಳಗಿನ ಕನಸು ಹೃದಯದಲಿ ನನಸಾಗೆ

ಮೌನ ದೂರಕೆ ಸಾಗಿ ನಿಂತ ಗಳಿಗೆ

 

ಸವಿಮಾತು ಸುಖವಾಗಿ ಹಿತವಾಗಿ ಸೇರುತಲೆ

ಜೀವಭಾವದ ತುಂಬಾ ಗೆಲುವ ಸವಿ ನೀರೆ

ಬಾನ ಚಂದ್ರಮನೊಳಗೆ ಹಾಲು ಬೆಳಕಿನ ತಾರೆ

ಚೆಲುವು ಸೂಸುತಲಿರಲು ಹೊನ್ನ ಉಡುಗೆ

 

ಸಂಸಾರ ಒಲವೊಳಗೆ ತಂಪದುವು ಸುರಿಯುತಿರೆ

ಗಂಧ ಪರಿಮಳ ಸುತ್ತ ಚೆಲ್ಲಿದಂತೆ

ಚಂದನದ ಕಾಂತಿಯದು ತನುವನ್ನು ಸೋಕಿದೊಡೆ

ಮದನ ಕಾಮನೆಯೊಳಗೆ ನಾನು ನೀನೆ

 

ಸಾಗುತಿರಲೂ ಹೀಗೆ ನಮ್ಮ ಬಾಂಧವ್ಯದ ನಡೆ

ಸಿಹಿಬಾಳು ಮನೆಯೊಳಗೆ ಎಂದೆಂದೂ ನೋಡೆ

ಒಡಲಲ್ಲಿ ನವಜೀವ ಮಧುರ ನಗೆಯನು ಸೂಸೆ

ಮನದೊಳಗೆ ನವ ಹುರುಪು ಚಿಮ್ಮಿ ಬಂತೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್