ಪ್ರೀತಿಯೊಳಗಿನ ನೋವು

ಪ್ರೀತಿಯೊಳಗಿನ ನೋವು

ಕವನ

ನೀನೆ ರಾಧೆಯು ನಾನೆ ಮೋಹನ

ಸನಿಹ ನಿಂತರೆ ಮಧುವನ

ಒಲವ ಚುಂಬನ ಸುತ್ತಲೆಲ್ಲವು

ಬಯಕೆ ತೋಟದಿ ಹೂಮನ

 

ನೂರು ತಾರೆಯು ಚಂದ್ರ ಬೆಳಕಲಿ

ನಾಚಿ ದೂರಕೆ ನಿಲ್ಲಲು

ಬರಲು ಹತ್ತಿರ ಮೋಹ ಸುತ್ತಲು

ಕೈಯ ಹಿಡಿಯುತ ಸಾಗಲು

 

ಮೈಯ ವರ್ಣಕೆ ತುಂಬು ಯೌವನ

ಬಳುಕಿ ನಿಲ್ಲುತ ಅಪ್ಪಲು

ಮದನ ಬೆಸುಗೆಗೆ ರತಿಯ ರೀತಿಯೆ

ಮಧುವ ಚೆಲ್ಲುತ ರಮಿಸಲು

 

ಜಲದ ಹೊಳಪಿಗೆ ನಿನ್ನ ಕಂಗಳು

ನನ್ನ ನೋಡುತ ನಗುತಿವೆ

ರಾತ್ರೆಯಾಗುತ ತಂಪ ಚೆಲ್ಲಿದೆ

ಸುಖದ ಮತ್ತಲಿ ತೇಲಿವೆ

 

ಪ್ರೀತಿ ಆಸರೆ ಹೀಗೆ ಸಿಗುತಿರೆ

ಸವಿಯು ಏಳಿಗೆ ಕಾಣಲಿ

ಬಾಳ ಪಯಣದಿ ಹೂವ ಹಾಸಿಗೆ

ನೋವ ಮರೆಯುತ ಹಾಡಲಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್