ಪ್ರೀತಿಯ ಕಡಲು-ವಾಣಿ ರಾಮದಾಸ್
ಬರಹ
ನನ್ನ ಪ್ರೀತಿ ಒಂದು ಕಡಲಿನಂತೆ,
ತೋರಿಕೆಗೆ ಪ್ರಶಾಂತ, ಒಳಗೆ ನಿಗೂಡ
ರಹಸ್ಯಗಳನ್ನು ಬಚ್ಚಿಟ್ಟುಕೊಂಡ
ಕಡಲಿನ ಆಳವನು ಅಳೆಯಲಾಗದಂತೆ|
ಮನದಲಿ ನಿನ್ನ ಬಿಂಬ ಮೂಡಿ ಬಂದಾಗ,
ಸುಪ್ತ ಭಾವನೆಗಳು ಅಲೆ ಬಡಿದಾಗ,
ಚಂದಿರನ ಕಂಡ ತೆರೆಗಳು ಏಳುವಂತೆ
ಅಳೆಯಲಾಗದು ಈ ಪ್ರೀತಿಯ ಆಳವನು||
ಹಿಗ್ಗದ ಕುಗ್ಗದು ಈ ಪ್ರೀತಿಯ ಗಾತ್ರ
ಅಲೆಗಳಂತೆ ಮೇಲೆರಿ ಮರಳುತಿವೆ
ಬೀಸುವ ಕುಳಿರ್ಗಾಳಿ ಚಿತ್ತವ ಕಲಕಿ
ಕೂಗಿ ಮರಳಿ ಬಾ ಎಂದು ಮೊರೆ ಇಟ್ಟಿದೆ||
ಅದೇ ಸಖ, ನಾ ಹೇಳುವುದು
ನನ್ನ ಹೃದಯದಲಡಗಿರುವ
ನಿನ್ನ ಪ್ರೀತಿ ಒಂದು ಕಡಲಿನಂತೆ
ಕಡೆದಾಗ ಸಿಗುವ ಅಮೃತ ಕಲಶದಂತೆ||