ಪ್ರೀತಿಯ ಕಲ್ಪನೆ
ಕವನ
ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ
ಪ್ರೀತಿಯ ಕಲ್ಪನೆ
ಅರಸುತ ಸಾಗಿದೆ
ಈ ಮನ ನಿನ್ನನೇ
ಹಗಲಲ್ಲಿ ನೀ ಕಂಡರು
ಇರುಳಲಿ ಕನಸಲಿ ನೀ ಕಾಡುವೆ,
ಮನದಲಿ ನೀನಿದ್ದರೂ
ನೆರಳಾಗಿ ನೀ ಸಾಗುವೆ
ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ !
ಹೊಂಬಾಳೆಯು ನಿನ ಅಂದವು
ನೀ ಆ ಚಂದ್ರನ ಬಿಂಬವು
ತಿಳಿ ನೀರಿನ ಮನ ನಿನ್ನದು
ನೀ ಆ ಜೇನಿನ ಸಿಹಿ ಸ್ವಾದವು
ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ !
ನಿನ್ನ ನೋಟಕೆ ಮಿಂಚು ನಿಂತಾಗಿದೆ
ಆ ನಡಿಗೆಗೆ ಹಂಸ ಬೆರಗಾಗಿದೆ
ಕೆನ್ನೆಯ ಆ ಕೆಂಪಿಗೆ, ಧರೆಯು ನಾಚಿದೆ
ಕೆಣಕುವ ಆ ನಗುವಿಗೆ, ಈ ಮನವೇ ಸೋತಿದೆ
ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ .....
ನಿನ್ನ ಪ್ರತಿಬಿಂಬದ ಈ ಮನದಲಿ
ಆ ಪ್ರಾಣವು ಕಾಡದೆ ಹೋಗದು
ಬಾಳಿನ ಪ್ರತಿ ಘಳಿಗೆಯಲಿ
ನಾನಿರುವೆನು ನಿನ್ನ ಜೊತೆಯಲಿ
ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ .....