ಪ್ರೀತಿಯ ಜೀವ
ಪ್ರೀತಿಯ ಜೀವ ,ನನ್ನ ಜೀವದ ಭಾವ
ಮರೆಯಲು ಸಾಧ್ಯವೇ ,
ಹೃದಯದ ಬಾಗಿಲು ತೆರೆದ ಕರವ ,
ಮನಸ್ಸಿನ ಜ್ಯೋತಿಯ ಬೆಳಗಿಸಿದ ದಿನವ ,
ನಿಸ್ವಾರ್ಥದಿಂದ ನೀ ತೋರುವ ಒಲವ .
ನಿನ್ನ ಮುದ್ದು ಮಾತುಗಳು ಮರೆಸುತ್ತವೆ ನನ್ನ ನೋವ
ನೂರು ಸಾಲುಗಳು ಸಾಲದು ಹೊಗಳಲು ನಿನ್ನ ಗುಣವ
ತಾರಾಬಳಗದಲಿ ಶಶಿಯಂತೆ ಮಿನುಗುವ ಮುಖ
ಆಗತಾನೆ ಅರಳುತ್ತಿರುವ ಹೂವಂತೆ ನಗುವ ಕಣ್ಣು
ಕೆಸರಿನಂತ ದುಷ್ಟಲೋಕದ ನಡುವೆ ಕಮಲದಂತ ಮನಸ್ಸು
ಮೈಮರೆಯುವೆ ಹೇಳಲೋಗಿ ಇವರ ಪ್ರೀತಿಯ ಸೊಗಸು
ಇವರ ಅರಮನೆ ಸೇರಲು ನಾ ಕಾಣುತಿರುವೆ ಕನಸು
ಕಣ್ಗಳಿಗೆ ತಂಗಾಳಿ ತಾಕಿದಷ್ಟು ತಂಪು ನಿಮ್ಮ ಮುಖ ನೋಡಲು
ಕಿವಿಗಳು ನಿಮಿರುವವು ನಿಮ್ಮ ಇಂಪಾದ ಪ್ರೀತಿ ಮಾತು ಕೇಳಲು
ಮನಸು ಮುಗಿಲ ಕೆಂಪು ನೋಡಿದಷ್ಟು ತಂಪು ನಿಮ್ಮ ಜೊತೆ ಸೇರಲು
ಬಯಸುವೆ ,ನಮ್ಮಿಬ್ಬರ ಮಿಲನಕ್ಕೆ ಹೆತ್ತವರ ಆಶೀರ್ವಾದ ಸಿಗಲೆಂದು
ಪ್ರೀತಿಯೆಂಬ ವಜ್ರಕ್ಕೆ ಸುವರ್ಣ ಮಿಲನವು ಮೆರುಗು ನೀಡಲೆಂದು .
ಬೇಡುವೆನು ದೇವರ, ಈ ವಜ್ರ ಯಾವ ಜೇವಕು ಹಾನಿಯಾಗಬಾರದೆಂದು ,
ಜೀವ ಜಗಕ್ಕೆ ಪ್ರೀತಿಯ ಸಾರವ ತೋರುವಂತಾಗಲೆಂದು .
ಬೋ .ಕು .ವಿ