ಪ್ರೀತಿಯ ಶರಧಿ
ಕವನ
ಹೂಮನ ಹೃದಯದ ಪಿಸುನುಡಿ ಕೇಳಲು
ಗಗನದಿ ಜೇನ್ಮಳೆ ಸುರಿಯುತಿದೆ||ಪ||
ಎದೆಯಲಿ ಸಾವಿರ ಬಯಕೆಯು ಕಾಡುತ
ನಲ್ಲನ ತನುವನು ಬೆರೆಯುತಿದೆ
ಉದಿಸಿದ ಭಾವವು ಮೋಡದ ಆಳದಿ
ಇಳೆಯನು ಸ್ಪರ್ಶಿಸಿ ನಿಲ್ಲುತಿದೆ||೧||
ಪ್ರೇಮದ ನೋಟದಿ ಗೆಲ್ಲುವೆ ಮನವನು
ಮನ್ಮಥನಂತೆಯೆ ನೀನಿರಲು
ಚಾಮರ ಬೀಸುತ ಹೂಮಳೆ ಹರಿಸುತ
ಕನಸಲಿ ನಲ್ಲನೆ ನೀ ಬರಲು||೨||
ಶಿಲೆಯಲಿ ಜಿನುಗುವ ನೀರಿನ ತೊರೆಯದು
ಹರಿಯುತ ಕಡಲನು ಸೇರುತಿದೆ
ಲಲನೆಯ ಪ್ರೀತಿಯ ಶರಧಿಯ ಉಕ್ಕುತ
ಭಾವದ ಯಾನವ ಗೈಯುತಿದೆ||೩||
-*ಶಂಕರಾನಂದ ಹೆಬ್ಬಾಳ*
ಚಿತ್ರ್
