"ಪ್ರೀತಿಸುತ್ತಿರುವೆ"
ಕವನ
"ಪ್ರೀತಿಸುತ್ತಿರುವೆ"
ಕದಿಯುವುದು ತಪ್ಪೆಂದು ಗೊತ್ತಿದ್ದರೂ,
ಹೃದಯವ ಕದ್ದು ಅವಳ
ಹೃದಯದ ಬಂಧಿಯಾಗಬೇಕೆಂದಿರುವೆ..
ಅವಳ ಕಣ್ಣ ನೋಟ ಹರಿತವೆಂದು ತಿಳಿದಿದ್ದರೂ,
ನೋಟಕ್ಕೆ ಸಿಕ್ಕಿ,
ಗಾಯಗೊಳ್ಳಬೇಕೆಂದು ಬಯಸಿರುವೆ.
ನನ್ನ ಪ್ರೀತಿಯ ನಿವೇದನೆಯನ್ನು
ತಿರಸ್ಕರಿಸುವಳೆಂದು ಗೊತ್ತಿದ್ದರೂ,
ನಿವೇದಿಸಿ
ಮನನೋಯಿಸಿಕೊಳ್ಳಬೇಕೆಂದಿರುವೆ..
ಪ್ರೇಮಿಯಾಗಲ್ಲದಿದ್ದರೂ
ಶತ್ರುವಾಗಿ ಅವಳ ಮನದಲ್ಲಿ
ನೆಲೆಸಬೇಕೆಂದಿರುವೆ..
ಕಾರಣ,
ನಾನವಳ
"ಪ್ರೀತಿಸುತ್ತಿರುವೆ"
-ಯಳವತ್ತಿ
Comments
ಉ: "ಪ್ರೀತಿಸುತ್ತಿರುವೆ"