ಪ್ರೀತಿ ಅಂದರೆ ಇದೇನಾ??? (ಭಾಗ 2)
ಯಾರನ್ನೋ ಒಬ್ಬರನ್ನಾ ತುಂಬಾ ಬೇಕದವರನ್ನಾ ನೆನಸ್ಕೋತ ಇರೋವಾಗ ಅವರು ಫೋನ್ ಅಥವ ಸಂದೇಶ ಕಲಿಸದ್ರೆ ಎಸ್ತು ಖುಶಿ ಆಗತ್ತೆ ಅಲ್ವಾ?? ಅವತ್ತು ನನಗು ಅದೇ ಆಗಿದ್ದು .. ರಾಷ್ರ್ಟ್ ಮಟ್ಟದ "ಸೆಮಿನಾರ್ ಆಂಡ್ ಎಕ್ಸಿಬುಶನ್" ಗೆ ಹೋಗಿ ಕೇರಳದಿಂದ ಮರಳಿ ಬರುವಾಗ ಬಸ್ ನಲ್ಲಿ ನಡೆದ ಘಟನೆ ಅದು.. ಆ ಘಟನೆ ಮತ್ತು ಆ ವ್ಯಕ್ತಿಯನ್ನ ಯಾವತ್ತು ಮರೆಯೋಕೆ ಆಗ್ಲಿಲ್ಲ, ಆ ದಿನ ನನಗೆ ನೆನಪಾದಾಗಲೆಲ್ಲ ಆ ವ್ಯಕ್ತಿ ಇನ್ನೊಂದು ಸಾರಿ ನನ್ನ ಜೀವನದಲ್ಲಿ ಬರಬೇಕು,ಅವರನ್ನ ನೋಡ್ಬೇಕು,ಮಾತಾಡ್ಬೇಕು ಅಂತ ಅನಿಸ್ತಿತ್ತು..ಆದ್ರೆ ಹೆಸರೆ ಗೊತ್ತಿಲ್ದೆ ಹೇಗೆ ಹುಡುಕಲಿ ಅಂತ ಸುಮ್ನಾಗ್ತಿದ್ದೆ.. ಅದೇ ವ್ಯಕ್ತಿ ಪತ್ರ ಬರೆದಿದಾರೆ ಅಂದ್ರೆ ನನಗೆ ಆಗಿದ್ದ ಖುಶಿ ಅಸ್ಟಿಸ್ಟಲ್ಲ ಅವತ್ತು.. ಅಸ್ಟಕ್ಕು ಎನ್ ಬರೆದಿತ್ತು ಅಂತ ಕೆಳಗಿದೆ ನೋಡಿ.
("ನೀನೇನೊ ೪ ತಾಸು ನನ್ನ ಮಡಿಲಲ್ಲಿ ಮಗು ತರ ಮಲಗಿ ಎದ್ದೋದೆ, ಆದರೆ ನಾನಿನ್ನು ಆ ದಿನಾ ಮರೆತಿಲ್ಲ.. ಕೇರಳದ ಆ ಸೊಗಸಾದ ಪ್ರಕೃತಿಯ ನಡುವೆ, ಆ ಮಳೆಗಾಲದ ಛಳಿಯಲ್ಲಿ ಹುಶಾರಿಲ್ದೆ ನಡುಗುತ್ತಾ ಬಸ್ ನಲ್ಲಿ ಮರಳಿ ಬರೋವಾಗ ನನ್ನ ತೊಡೆ ಮೇಲೆ ಮಲಗಿದ್ದೆಯಲ್ಲ, ಅದೇ ಗೆಳೆಯ 'ಅನುಪ್' ನಾನು.. ಅಲ್ಲಾ ರೀ ಒಂದು ಸರಿ ಧನ್ಯವಾದ ಹೆಳ್ಬೇಕು ಅನ್ನೋ ಸೆನ್ಸು ಇಲ್ವ ನಿಮ್ಗೆ...ಇರ್ಲಿ ಬಿಡಿ, ಜೀವನದಲ್ಲೆ ಮರೆಯಲಾಗದಂತ ನೆನಪನ್ನಾ ಕೊಟ್ಟಿದೀರಾ ನನಗೆ..ಆ ಕ್ಷಣ ನಾ ಯವತ್ತು ಮರೆಯಲ್ಲ ರೀ.. ನೀವು ಮರಳಿ ಇದೆ ಶಾಲೆಗೆ ಬಂದಿದೀರೊ ಇಲ್ವೊ ಅನ್ನೊದು ಕೂಡಾ ನನಗೆ ಗೊತ್ತಿಲ್ಲಾ.. ಈ ಪತ್ರ ನಿಮ್ಗೆ ಮುಟ್ಟಿದ್ರೆ ನನ್ನ ನೆನಪಿದ್ರೆ ಉತ್ತರ ಮಾಡ್ತಿರ ಅಂತಾ ಇದನ್ನ ಬರಿತಿದಿನಿ.....) ಅಂತ ಬರೆದಿದತ್ತು..
ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಎರಡು ಜೀವಗಳ ನಡುವೆ ಒಂದು ಸಾರಿಯ ಪರಿಚಯದಲ್ಲಿ ಇಂತಹ ಮರೆಯಲಾಗದಂತ ಗೆಳೆತನ ಬೆಳೆಯತ್ತೆ ಅಂತ ಯಾವತ್ತು ಅನ್ಕೊಂಡಿರ್ಲಿಲ್ಲ..ಯಾವತ್ತೋ ಎಲ್ಲೋ ಪರಿಚಯವಾದ ಗೆಳೆಯ "ಅನುಪ್" ೬ ತಿಂಗಳ ಮೇಲೆ ನನ್ನ ನನಗೆ ಪತ್ರಾ ಬರೆದಾಗಲೆ ಗೊತ್ತಾಗಿದ್ದು,ಅವನ ಹೆಸರು ಅನುಪ್ ಅಂತ.. ಕಾರ್ಯಕ್ರಮದ ಪುಸ್ತಕ ಬಿಡುಗಡೆ ಆದ್ಮೇಲೆ ಹೇಗೋ ಏನೋ ನನ್ನ ಹೆಸರು ಮತ್ತು ಶಾಲೆಯ ವಿಳಾಸ ಗೊತ್ತು ಮಾಡ್ಕೊಂಡು ಪತ್ರ ಬರೆದಿದ್ದ..ನಿಜವಾದ ಸ್ನೇಹ ಅಂದ್ರೆ ಇದೇನಾ ಅಂತ ಅನ್ನಿಸ್ತು..
ಅದೇ ದಿನ ನಾನು ಕೂಡ ಉತ್ತರ ಬರೆದೆ,,
"" ನಾನು ನಿನ್ನನ್ನ ಮರೆತಿಲ್ಲ ಕನೋ,
ಗಾಳಿಗೆ ನನ್ನ ಕೂದಲು ಹಾರುತ್ತಿದ್ದಾಗ ಅದನ್ನ ನೀನು ಸರಿಮಾಡಿದ ನೆನಪು ನಂಗಿದೆ,
ಅವಾಗವಾಗ ನನ್ನ ತಲೆ ಸವರಿದ್ದ ನೆನಪು ನನಗಿದೆ,
ಛಳಿಯಲ್ಲಿ ನಾ ನಡುಗುವಾಗ ನಿನ್ನ ಶಾಲ್ ನನಗೆ ಹೊದ್ದಿಸಿದ ನೆನಪು ನನಗಿದೆ
ಪಕ್ಕದ ಸೀಟ್ ನಲ್ಲಿ ಇರುವ ಗೆಳೆಯರಿಗೆ ಜೋರಾಗಿ ಮಾತಾಡ್ಬೇಡಿ ಅಂತ ನೀನು ಅವ್ರಿಗೆ ಹೇಳಿದ ನೆನಪು ನನಗಿದೆ
ಬಸ್ ಇಳಿದು ಹೋಗೋವಾಗ ಮತ್ತೆ ಮತ್ತೆ ನನ್ನ ನೀನು ತಿರುಗಿ ನೋಡಿದ ನೆನಪು ನನಗಿದೆ..
ಆದರೆ ನಿನ್ನ ಹೆಸರು ಕೂಡ ಕೇಳೋಕೆ ಆಗಲಿಲ್ಲ ಅವತ್ತು ಕ್ಶಮಿಸು... ಅಸ್ಟಕ್ಕು ಅವತ್ತು ನನಗೆ ನಿದ್ದೆ ಬಂದಿರಲಿಲ್ಲ, ನನಗೆ ಹುಶಾರಿರಲಿಲ್ಲ..ಅದಕ್ಕೆ ನಮ್ಮ ಸರ್ ಹೇಳಿದ್ರು ಅಂತ ಪಕ್ಕದಲ್ಲಿ ಕುಳಿತಿದ್ದ ನಿನ್ನ ತೊಡೆ ಮೇಲೆ ಮಲಗಿದ್ದೆ, ಮಗು ತರ ನನ್ನ ನೋಡಿಕೊಂಡ ನಿನ್ನ ಹೇಗೋ ಮರೀಲಿ,
ಗಾಳಿ ಬೀಸಿದಾಗಲೆಲ್ಲ ನಿನ್ನ ನೆನಪಾಗತ್ತೆ,
ನೀನು ಇದ್ದಿದ್ದರೆ ನನ್ನ ಕೂದಲನ್ನ ಸರಿ ಮಾಡ್ತಿದ್ದೆ ಅಂತ ಅನಿಸತ್ತೆ.
ನನ್ನ ನೆನಪಿಸಿಕೊಂಡಿದ್ದಕ್ಕೆ ತುಂಬ ಧನ್ಯವಾದ ಕನೋ ....
ಅಂತ ಉತ್ತರ ಬರೆದೆ..ಅವತ್ತು ನನಗೆ ಅಗಿದ್ದ ಖುಶಿ ಎಸ್ಟು ಅಂತ ಹೇಳೋಕಾಗಲ್ಲ... ಅದೆಲ್ಲ ಇರ್ಲಿ ಬಿಡಿ ನಾನು ಮತ್ತೆ ಮತ್ತೆ ನೆನಪು ಮಾಡಿಕೊಳ್ತಿದ್ದ ವ್ಯಕ್ತಿ ಬಗ್ಗೆ ಗೊತ್ತಾಯ್ತಲ್ಲ ಅಸ್ಟು ಸಾಕು ಅನ್ಕೊಂಡೆ...
Comments
ಉ: ಪ್ರೀತಿ ಅಂದರೆ ಇದೇನಾ??? (ಭಾಗ 2)
In reply to ಉ: ಪ್ರೀತಿ ಅಂದರೆ ಇದೇನಾ??? (ಭಾಗ 2) by makara
ಉ: ಪ್ರೀತಿ ಅಂದರೆ ಇದೇನಾ??? (ಭಾಗ 2)