ಪ್ರೀತಿ ಅಂದ್ರೆ....

ಪ್ರೀತಿ ಅಂದ್ರೆ....

ಪ್ರೀತಿ ಅಂದ್ರೆ ವಿವಿಧ ರೀತಿ, ಪ್ರೀತಿ ಅಂದ್ರೆ ಅದು ಬಗೆಹರಿಯದ ರೀತಿ...

ಅಪ್ಪನ ಆದರ್ಶದ ಪ್ರೀತಿ,

ಅಮ್ಮನ ತುತ್ತಿಡುವ ಪ್ರೀತಿ,

ಅಜ್ಜ-ಅಜ್ಜಿಯರ ಮುದ್ದುತನದ ಪ್ರೀತಿ,

ಅಕ್ಕ-ತಂಗಿ,ಅಣ್ಣ-ತಮ್ಮ ಸಹೋದರರ ನಡುವಿನ ಪೆದ್ದುತನದ ಪ್ರೀತಿ,

ಗೆಳೆಯ-ಗೆಳತಿಯರ/ಸ್ನೇಹಿತರ ನಡುವಿನ ಸಂಬಂಧಗಳ ಪ್ರೀತಿ,

ಪ್ರೇಯಸಿಯ ಪ್ರಿಯವಾದ ಪ್ರೀತಿ,

ಗುರು -ಶಿಷ್ಯರ ನಡುವಿನ ಭಯ-ಭಕ್ತಿಯುಳ್ಳ ಆದರ್ಶ ಪ್ರೀತಿ,

ಸಮಾಜದ ಜನರ ಜೊತೆಗಿನ ಹೊಂದಿಕೊಳ್ಳುವ ಪ್ರೀತಿ,

ಅಕ್ಕ-ಪಕ್ಕದ ಮನೆಯವರ ಜೊತೆಗಿನ ಕೊಡುತೆಗೆದುಕೊಳ್ಳುವ ಪ್ರೀತಿ,

ಬಾಳ ಸಂಗಾತಿ/ಹೆಂಡತಿಯ ಜೊತೆಗಿನ ಹೆಗಲಿಲಿ ಹೆಗಲೊತ್ತುವ ಪ್ರೀತಿ,

ಸಾಕು ಪ್ರಾಣಿಗಳ ಜೊತೆಗಿನ ಸಂತಸದ ಪ್ರೀತಿ,

ಪ್ರಕೃತಿಯ ಜೊತೆಗೆ ಉಸಿರಾಗಿ ಬೆರೆತಿರುವ ಪ್ರೀತಿ.

ಅಪ್ಪನ ಪ್ರೀತಿ ಮುಗಿಲು,

ಅಮ್ಮನ ಪ್ರೀತಿ ಎಲ್ಲ ಪ್ರೀತಿಗಿಂತ ಮಿಗಿಲು,

ಇವೆರಡನ್ನು ಹೊರತುಪಡಿಸಿ ಸಿಗುವ ಬಾಳ ಸಂಗಾತಿಯ/ಅರ್ಧಾಂಗಿಯ ಪ್ರೀತಿ ಜೀವನದ ಕೊನೆಯತನಕ ಕಾಪಾಡಲು...

ಅವರು-ಇವರು ಹೇಳಿಲ್ಲ ಯಾರಿಂದಲಾದರೂ ಒಂಚೂರು ಪ್ರೀತಿ ಸಿಕ್ಕರೆ-ಪ್ರೀತಿಯಿಂದ ನಗು ಬೀರಿದರೆ ಅಷ್ಟೇ ಸಾಕು ಆಹಾ! ಹಾಲು ಕುಡಿದಷ್ಟು ತೃಪ್ತಿ.

ಇದೇ ಆ ಪ್ರೀತಿಗಿರುವ ಶಕ್ತಿ.

ಹಲವು ಬಗೆಯಾಗಿಹುದು ಈ ಪ್ರೀತಿ... 

ಈ ಪ್ರೀತಿ ಒಂಥರ,

ಈ ಪ್ರೀತಿ ಪವಿತ್ರ,

ಈ ಪ್ರೀತಿ ವಿಚಿತ್ರ,

ಈ ಪ್ರೀತಿ ಆಹ್ಲಾದಕರ,

ಈ ಪ್ರೀತಿ ಆನಂದ ಸರೋವರ,

ಈ ಪ್ರೀತಿ ಆಶ್ಚರ್ಯಕರ,

ಈ ಪ್ರೀತಿ ಅಮ್ಮನ ತುತ್ತಿನ ಥರ ರುಚಿಕರ,

ಈ ಪ್ರೀತಿ ಹಸಿವಾದಾಗ ಆಹಾರ,

ಈ ಪ್ರೀತಿ ವಿಶಾಲ ಅಂಬರ,

ಈ ಪ್ರೀತಿ ತುಂಬು ಹುಣ್ಣಿಮೆಯ ಚಂದಿರ,

ಈ ಪ್ರೀತಿ ಹೊಳೆವ ನಕ್ಷತ್ರ,

ಈ ಪ್ರೀತಿ ಗರಿ ಬಿಚ್ಚಿ ಹಾರುವ ಹಕ್ಕಿಥರ,

ಈ ಪ್ರೀತಿ ಬಲು ಸಡಗರ,

ಈ ಪ್ರೀತಿಯಲ್ಲಿದೆ ಆಡಂಬರ,

ಈ ಪ್ರೀತಿಯಲ್ಲಿದೆ ಅಬ್ಬರ,

ಈ ಪ್ರೀತಿ ಅತಿ ಮಧುರ,

ಈ ಪ್ರೀತಿ ಇಳಿಸುವುದು ಮನಸಿನ ಭಾರ,

ಈ ಪ್ರೀತಿ ಕೆಲವೊಮ್ಮೆ ಬಲು ಭೀಕರ,

ಈ ಪ್ರೀತಿಗಾಗಿ ಹಲವರ ಜೀವನ ವಿಕಾರ,

ಈ ಪ್ರೀತಿ ಅಪಾಯಕರ,

ಈ ಪ್ರೀತಿ ದು:ಖಕರ,

ಈ ಪ್ರೀತಿ ಕೆಲವರಿಗೆ ವಿನಾಶಕಾರ,

ಈ ಪ್ರೀತಿ ಅಪ್ಪಟ ಬಂಗಾರ,

ಈ ಪ್ರೀತಿ ಬಲು ಶೃಂಗಾರ,

ಈ ಪ್ರೀತಿ ನಿರಂತರ,

ಈ ಪ್ರೀತಿ ಅಮರ,

ಈ ಪ್ರೀತಿ ಪ್ರೀತಿಸುವ ಹೃದಯಕ್ಕೆಆತುರ-ಕಾತರ, 

ಈ ಪ್ರೀತಿ ಇರಲಿ ಹತ್ತಿರ,

ಈ ಪ್ರೀತಿ ಬೆಳೆಯುತಿರಲಿ ಎತ್ತರ,

ಈ ಪ್ರೀತಿ ಭೂಮಿಯ ಮೇಲಿನ ಶ್ರೇಷ್ಠ ಅಸ್ತ್ರ...

-ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ಚಿತ್ರ ಕೃಪೆ: ಇಂಟರ್ನೆಟ್ ತಾಣ