ಪ್ರೀತಿ ಪ್ರೀತಿ ‍ ‍.... ಬರಿ ಕವನಗಳು !!!

ಪ್ರೀತಿ ಪ್ರೀತಿ ‍ ‍.... ಬರಿ ಕವನಗಳು !!!

ಕವನ

 

೧.  ಅರಿವಿಗೆ ಬಾರದ ಪ್ರೀತಿ

     ಮನಸಿಗೆ ಕಾಣುವ ರೀತಿ

     ಕನಸಲಿ ತೋರುವ ಭೀತಿ

     ಕಾಡುವ ಸು೦ದರ ಸ್ಮೃತಿ...

 

 

೨.  ಮನಸಿನ ಹನನವೋ

     ಪ್ರೀತಿಯ ಜನನವೋ

     ಬಯಕೆಯ ಮರಣವೋ

     ಕನಸಿನ ಮರುಜನ್ಮವೋ !

 

 

೩.  ಕನಸಲ್ಲಿ ಕಾಡೋ ಮೌನಯಾಕಲ್ಲಿ

     ಪ್ರೀತಿಲಿ ಸಿಗದ ಬಯಕೆಯಾಕಿಲ್ಲಿ

     ಉಸಿರಲ್ಲಿ ಬೆರೆವ ಭಾಷೆ ಇನ್ನೆಲ್ಲಿ

     ಒಲವಿನ ನೀತಿಲಿ ಪರಿಭಾಷೆ ಮತ್ತೆಲ್ಲಿ ?

 

 

೪.  ಕಣ್ಣ೦ಚಿನ ನೀಲಾ೦ಜನ

     ಎದೆಯಪ್ಪಿದ ಆಲಿ೦ಗನ

     ಮನದಾಳದ ರೋಮಾ೦ಚನ

     ಸವಿಗನಸಿನ ಅಭ್ಯ೦ಜನ...

 

 

 ೫. ಮೌನನ ಯಾವತ್ತೂ ಸುಡಬಾರದು

      ಮಾತನ್ನ ಎ೦ದೂ ಮರೆಯಬಾರದು

      ಯೌವ್ವನ ಎ೦ದೂ ಕದಿಯಬಾರದು

      ಕಾವ್ಯನ ಯಾವತ್ತೂ ಕಾಯಿಸಬಾರದು !