ಪ್ರೀತಿ - ಪ್ರೇಮ

ಪ್ರೀತಿ - ಪ್ರೇಮ

ಕವನ

ಅರಿಯದೆ ತಿಳಿಯದೆ

ಮಾಡಿದೆ ಪ್ರೀತಿಯ

ಮರೆಯದೆ ಆದೆ

ನಾ ನಿನ್ನಯ ಪ್ರೀತಿಯ

 

ಮೊದಲು ಸ್ನೇಹದಲ್ಲಿ ಅರಳಿದ

ಪ್ರೀತಿಯ ನಾ ಹೇಗೆ ಮರೆಯಲಿ

ಮೊದಲು ಹೃದಯದಲ್ಲಿ ನೆಲೆಸಿದ

ಪ್ರೀತಿಯ ನಾ ಹೇಗೆ ಮರೆಯಲಿ

 

ಗಿಡವಾಗಿ ಚಿಗುರೊಡೆದು

ಮರವಾಗಿ ಬೆಳೆದು ನಿಂತಿದೆ

ಹೂವಾಗಿ ಅರಳಿ ಕಾಯಾಗಿ ಪಕ್ವಪಡೆದು

 ಹಣ್ಣಾಗಿ ಬೆಳೆದು ನಿಂತಿದೆ

 

ಪರಿಶುದ್ಧ ಪ್ರೀತಿ ಪರಿಶುದ್ಧ ಮನಸ್ಸು

ಪರಿಶುದ್ಧ ಪ್ರೇಮ ಪರಿಶುದ್ಧ ಹೃದಯ

ಹೃದಯ ಹೃದಯ ಸಂಗಮದಿಂದ

ಪ್ರೀತಿ ಪ್ರೇಮ ಸಂಗಮವಾಯಿತು.

 

                                                 - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

 

 

Comments

Submitted by viru Wed, 01/02/2013 - 15:17

ಪ್ರೀತಿ - ಪ್ರೇಮ ಕವನದಲ್ಲಿ ಅರಿಯದೆ ತಿಳಿಯದೆ ಪ್ರೀತಿ ಮಾಡಿದ ಮೇಲೆ ಅದು ಮೆಲ್ಲನೆ ಪ್ರೀತಿ ಪ್ರೇಮವಾಗೆ ವಂದಾಗುತ್ತವೆ ಎಂದು ಸೂಕ್ಷ್ಮವಾಗಿ ಕವನದ ಮುಲಕ ವ್ಯಕ್ತಪಡಿಸಿದ್ದೇನೆ.