ಪ್ರೀತಿ- ಫಜೀತಿ

ಪ್ರೀತಿ- ಫಜೀತಿ

ಕವನ

ಮುತ್ತು ಕೊಟ್ಟು ಹೋದೆಯಲ್ಲ

ಮತ್ತಿನಲ್ಲೆ ಇರುವೆನಲ್ಲ, ಏಕೇ ಈ ತರಾ

ತಂಪು ಗಾಳಿಗೆ ತನುವು ನಡುಗಿದೇ

ಬಾರೇ ಹತ್ತಿರ||ಪ||

 

ದುಂಬಿ ಹೂವಿನಲಿ ಪ್ರೇಮದಾಟದಲಿ

ಮಿಂದೂ ಪುಳಕಿತಾ

ವನಜ ಬಾನುವನು ಕಂಡು ಅರಳುತಿದೆ

ಒಲವಾ ಬೇಡುತಾ

ಮುಗಿಲು ಬಾನಲಿರೆ ನವಿಲು ನಲಿದಿದೆ

ಗರಿಯಾ ಕೆದರುತಾ

ಬೆಂದು ವಿರಹದಲಿ ಜೊತೆಯ ಕೂಗುತಿದೆ 

ಮಿಲನಾ ಬೇಡುತಾ

ಬಯಕೇ ಮುಗಿಯದೇ

ಮನವೂ ತಣಿಯದೇ ||೧||

 

ಇರುಳು ಚಂದಿರನು ಇಳಿದು ಭೂಮಿಯೊಳು

ಬಂದಾ ಹಾಗಿದೇ

ನನ್ನ ಬಾಹುವೊಳ ಸೇರಿ ಪ್ರೇಮದೊಳು

ನಿಂದಾ ಹಾಗಿದೇ

ಇರುಳು ಕನಸಿನಲಿ ಪ್ರಣಯದಾಟದಲಿ

ಕಂಡೇ ನಿನ್ನನೇ

ನಿನ್ನ ನಾಮವನೆ ಕರೆದೆ ಕನಸಿನಲಿ

ಮರೆತೂ ನನ್ನನೇ

ಕನಸೂ ಮುಗಿಯಲೂ

ಇದ್ದೇ ನೆಲದೊಳು ||೨||

( ಸುತ್ತ ಮುತ್ತ ಯಾರೂ ಇಲ್ಲ.. ‌ಧಾಟಿಯಲ್ಲಿ ಯತ್ನ)

-ಪೆರ್ಮುಖ ಸುಬ್ರಹ್ಮಣ್ಯ ಭಟ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್