ಪ್ರೀತಿ ಬರಿದಾದಾಗ.....
ಕವನ
ಪ್ರೀತಿ ಬರಿದಾದಾಗ ಮತ್ತೆ ಮತ್ಸ್ಯರ ಮುತ್ತಿದೆ
ಮನಸು ಬೇಸರಿಸಿದಾಗ ಅಂತರ ಬಯಸಿದೆ
ಇನ್ನೆಲ್ಲಿ ಆ ಸವಿಮಾತು
ಸದಾ ಮುಸುಕಿನೊಳಗಿನ ಹೊಗೆಯಂತೆ
ಹೊಗೆಯಾಡುತಿಹುದು
ಇದೆಂತಹ ವಿಪರ್ಯಾಸ
ವಿಧಿಯಾಟದ ಆಭಾಸ
ತೊಂದರೆಗೆ ಕೊನೆಯೊಂಬುದೆ
ಕೊಲೆಯಾಗಿ ಕೊನೆಯಾಗಿದೆ
ಹೃದಯ ಒಡೆದ ಕನ್ನಡಿಯ್ಂತಾಗಿದೆ
ಸುಖವೆಂಬುದು ಮರೀಚಿಕೆಯಾಗಿ
ಮಾಯಾಜಿಂಕೆಯಂತಾಯಿತು
ಹುಡುಕಾಟ, ಹುಡುಕಾಟ, ಹುಡುಕಾಟ
ಕೊನೆಯುಸಿರು ಇರುವರೆಗೆ ಪ್ರೀತಿಗಾಗಿ ಕಾದಾಟ