ಪ್ರೀತಿ - ಭಕ್ತಿ - ಕಾಮ...

ಪ್ರೀತಿ - ಭಕ್ತಿ - ಕಾಮ...

ಉತ್ಕರ್ಷ - ಉನ್ಮಾದ : ಉದ್ವೇಗಗಳ ಉತ್ಕಟವಾದ ಪರಮೋಚ್ಚ ಸ್ಥಿತಿ ತಲುಪುವ ಮನಸ್ಥಿತಿಗಳು.....

ಪ್ರೀತಿ - ಭಾವನಾತ್ಮಕ,

ಭಕ್ತಿ - ಭ್ರಮಾತ್ಮಕ,

ಕಾಮ - ದೇಹಾತ್ಮಕ...

ಪ್ರೀತಿ - ವಾಸ್ತವ,

ಭಕ್ತಿ - ನಂಬಿಕೆ,

ಕಾಮ - ವಾಂಛೆ...

ಪ್ರೀತಿ × ದ್ವೇಷ,

ಭಕ್ತಿ × ಅಹಂ,

ಕಾಮ × ಸನ್ಯಾಸ...

ಪ್ರೀತಿ - ಜೀವನೋತ್ಸಾಹ ಮತ್ತು ಮಾರಣಾಂತಿಕ,

ಭಕ್ತಿ - ನಂಬಿಕೆ ಮತ್ತು ಅರ್ಪಣೆ,

ಕಾಮ - ಸುಖ ಮತ್ತು ಸಂಘರ್ಷ...

ಪ್ರೀತಿ, ಭಕ್ತಿ, ಕಾಮ ಆಂತರಿಕವಾದದ್ದು,

ಆದರೆ ಬಾಹ್ಯ ಒತ್ತಡ ಮತ್ತು ನಿಯಂತ್ರಣಗಳದೇ ಬಹುಮುಖ್ಯ ಪಾತ್ರ.........

ಪ್ರೀತಿ, ಭಕ್ತಿ, ಕಾಮಕ್ಕಾಗಿ ಎಂತಹ ತ್ಯಾಗಕ್ಕೂ ಬದ್ದ

ಮತ್ತು ಎಂತಹ ಸ್ವಾರ್ಥಕ್ಕೂ ಸಿದ್ದ...

ಸಂಗೀತ ಸಾಹಿತ್ಯ ಸಿನಿಮಾ ಕಲೆಗಳ ಜೀವ ದ್ರವ್ಯ ಪ್ರೀತಿ ಭಕ್ತಿ ಕಾಮ...

ವಿನಾಶದ ವಿಕೃತಿಯ ಪರಾಕಾಷ್ಠೆ  ಪ್ರೀತಿ ಭಕ್ತಿ ಕಾಮ...

ಬದುಕು ಕಟ್ಟಲು ಪ್ರೇರಣ,

ಬದುಕು ಮುಗಿಸಲು ಕಾರಣ,

ಪ್ರೀತಿ ಭಕ್ತಿ ಕಾಮ...

ಪ್ರೀತಿ ಭಕ್ತಿ ಕಾಮಕ್ಕೆ ಗಡಿ ಭಾಷೆ ಧರ್ಮಗಳಿಲ್ಲ,

ಆದರೆ ಧರ್ಮಗಳೇ ಅವುಗಳಿಗೆ ಗಡಿ ನಿರ್ಮಿಸಿವೆ......

ಪ್ರೀತಿಗಾಗಿ ಆತ್ಮಹತ್ಯೆ,

ಭಕ್ತಿಗಾಗಿ ಶರಣಾಗತಿ,

ಕಾಮಕ್ಕಾಗಿ ಕೊಲೆಪಾತಕಿ...

ಪ್ರೀತಿ - ಸುಂದರ,

ಭಕ್ತಿ - ನಿಷ್ಕಲ್ಮಶ,

ಕಾಮ - ತೃಪ್ತಿ..

ಪ್ರೀತಿ ಬಯಸುವ ಸಮಾಜ,

ಭಕ್ತಿ ಬಯಸುವ ಧರ್ಮ,

ಕಾಮ ಬಯಸುವ ದೇಹ..

ಯೋಚಿಸಿದಂತೆಲ್ಲಾ ಹೊಳೆಯುವ,

ಅನುಭವಿಸಿದಂತೆಲ್ಲಾ ಬೆಳೆಯುವ,

ಕ್ರಮಿಸಿದಂತೆಲ್ಲಾ ತೆರೆಯುವ

ಪ್ರೀತಿ ಭಕ್ತಿ ಕಾಮ...

ಇವುಗಳ ಅನುಭವಿಸುವಿಕೆ,

ಇವುಗಳ ತೃಪ್ತಿ ಪಡಿಸುವಿಕೆ,

ಇವುಗಳ ನಿಯಂತ್ರಣವೇ ಬದುಕು....

ಮಡಿವಂತಿಕೆಯೂ ಬೇಡ,

ಮುಕ್ತತೆಯೂ ಬೇಡ,

ಸಹಜ - ಸಾಮಾನ್ಯ ಜ್ಞಾನ ಬಯಸುವ

ಪ್ರೀತಿ ಭಕ್ತಿ ಕಾಮ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 99 ನೆಯ ದಿನ ಬೆಳಗಾವಿ ಜಿಲ್ಲೆಯ ಹುಲಕುಂದ ಗ್ರಾಮದಲ್ಲಿ ವಾಸ್ತವ್ಯ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ