ಪ್ರೆಯಸಿಯೇ ಪತ್ನಿಯಾದಾಗ
ಕವನ
ಮರುಜನ್ಮವನು ನಂಬುವ ನನಗೆ ಬೇಕಿದೆ ಮರುಜನ್ಮ
ನಾನಾಗುವೆ ನಿನಗಮ್ಮ
ಒಂದಾ ಎರಡಾ ಏಳೂ ಜನ್ಮಕೂ ಜೀವ ನಿನಗಮ್ಮ
ನೀ ಹೊರುವೆಯ ನನ ಮಗುವ
ಓ ಹೃದಯ ಈ ಎದೆಯ ಒಳಗೆ ಬಂದು ತಳವ ಊರಿ ಕೂತೆ
ನಾನ್ ಇನಿಯ ನಿನ್ ನಗುವ ಎಲ್ಲ ದಿನವು ನೋಡಿ ಏಳುವಂತೆ
ನೀ ಸನಿಹದಲಿರೋ ನರಕವೂ ಸ್ವರ್ಗ ಎಂಬುವ ಕನಸೀಗ
ನಿಜವಾಗಿದೆ ಬಹುಬೇಗ
ನನ್ನ ಎದೆಯ ಹುರುಳುಗಳೆಲ್ಲ ಹೇಳಲು ನೂರಾರು
ನಿನ್ನಿಂದಾದವು ದೂರು
ನಿನ ವಿರಹ ತಾಳುವೆನೆ ನನ್ನ ಕೊನೆಯ ಉಸಿರು ಇರುವ ವರೆಗೂ
ನಿನ ಅಗಲಿ ಸಾಯುವೆನೆ ಯಮನು ಬಂದು ನಿನ್ನ ಕೂಗೋ ವರೆಗೂ
ಮಡದಿಯ ಮಡಿಲಲಿ ಮಲಗುವ ಕ್ಷಣವಿದು ಮನಸಿಗೆ ಸುಖ ಶಾಂತಿ
ನನಗೊಂದೇ ನಿನ ಪ್ರೀತಿ
ದೇವರೆ ಬಂದು ವರವನೆ ಕೊಟ್ಟರೂ ನಿನ್ನನು ಅಗಲುವೆನೇ
ನಾನೆಂದು ನಿನ್ನವನೇ
http://mangaloreanhindu.blogspot.in/2012/11/significance-of-7-vows-in-hindu.html
ಚಿತ್ರ್
Comments
ಉ: ಪ್ರೆಯಸಿಯೇ ಪತ್ನಿಯಾದಾಗ
ದಯವಿತ್ತು ಇದಕ್ಕೆ ಪ್ರತಿಕ್ರಯಿಸಿ..