*ಪ್ರೇಮದ ತೊರೆ*
ಕವನ
ಬತ್ತದ ಪ್ರೇಮದ ತೊರೆಯನು ಹರಿಸಿದೆ
ಮುತ್ತನು ನೀಡುತ ಮತ್ತನು ತರಿಸಿದೆ
ಬಳ್ಳಿಯ ತೆರದಲಿ ತೋಳಲಿ ನಲಿಯುವೆ
ಗಂಧವ ಬೀರುತ ಸುಮದಲಿ ಕೂಡುವೆ
ಒಲವಿನ ಕಾಣಿಕೆ ಅಧರಕೆ ನೀಡುವೆ
ಸನಿಹಕೆ ಬಂದರೆ ಮೋಹದಿ ವರಿಸುವೆ
ಪ್ರೇಮದ ಲೋಕಕೆ ಮೋಡದ ತೆರದಲಿ
ಉಸಿರಲಿ ನಿನ್ನಯ ಹೆಸರದು ಬೆರೆಯಲಿ
ಬಾಳಿನ ವೀಣೆಯ ತಂತಿಯು ಮೀಟಲಿ
ಗೀತೆಯ ಹಾಡುತ ಮುರಳಿಯ ಒಲಿಸಲಿ
ಚಂದಿರ ಕೌಮುದಿ ಹರಿಸುತ ಗಗನದಿ
ಶುಭ್ರದ ಕಾಂತಿಯು ಮಿನುಗುತ ತೋಷದಿ
ಕಡಲಿನ ಅರ್ಕನು ಹೊಳೆಯುತ ಹೃದಯದಿ
ಒಲಿಯುತ ಬಂದಿಹೆ ಎದುರಲಿ ಹಾಸದಿ
-*ಶಂಕರಾನಂದ ಹೆಬ್ಬಾಳ*
ಚಿತ್ರ: ಗೂಗಲ್
ಚಿತ್ರ್
