*ಪ್ರೇಮಬಿಂದು( ಭಾವಗೀತೆ)*

*ಪ್ರೇಮಬಿಂದು( ಭಾವಗೀತೆ)*

ಕವನ

ನಂದನದ ವನದಲ್ಲಿ 

ನಿನ್ನೊಲವಿಗೆ

ಪ್ರೇಮಾನುರಾಗವದು 

ಈ ರಾಧೆಗೆ||

 

ಹರಿಯುತಿಹ ಯಮುನೆಯಲಿ 

ಪ್ರೇಮೋಲ್ಲಾಸ

ಬೆರೆಯುತಿದೆ ಮನವೆರಡು 

ಹಾಸ ಪ್ರಾಸ||

 

ದುಂಬಿಗಳ ಝೆಂಕಾರ 

ಲತೆಸುಮದಲಿ

ಸೌಗಂಧ ಬೀರುತಿದೆ 

ನನ್ನೆದೆಯಲಿ||

 

ಕುಣಿಕುಣಿದು ನಲಿಯುತ್ತ 

ಮೋಹದಲ್ಲಿ

ಸಿಲುಕುತಿದೆ ಮಾಧವನ 

ಒಲವಿನಲ್ಲಿ||

 

ಕಡಲಲ್ಲಿ ಭಾವವದು 

ತೇಲಿಬರುತ

ಹೃದಯದಲಿ ಸಂತಸವು 

ತಾನುಮಿಳಿತ||

 

ಹರಿವ ಜಲಸಾಗರದಿ 

ಪ್ರೇಮಬಿಂದು

ಒಲವ ಕೋರಿಕೆಯನ್ನು

ತೀರಿಸೆ ಬಂದು||

 

-*ಶಂಕರಾನಂದ ಹೆಬ್ಬಾಳ*

 

ಚಿತ್ರ್