ಪ್ರೇಮಿಗಳ ಸಂಭಾಷಣೆ
ಇಬ್ಬರು ಪ್ರೇಮಿಗಳ ಸಂಭಾಷಣೆ ಹೇಗಿರುತ್ತದೆ??
ಹುಡುಗಿ ಹುಡುಗನಿಗೆ ರಾತ್ರಿ ಮಿಸ್ಡ್ ಕಾಲ್ ಕೊಡುತ್ತಾಳೆ. ಹುಡುಗ ವಾಪಸ್ ಕರೆ ಮಾಡುತ್ತಾನೆ.
ಹುಡುಗಿ : ಹಲೋ
ಹುಡುಗ : (ಅಯ್ಯೋ ಇವತ್ತೇನು ಕುಯ್ಯುತ್ತಾಳೋ) ಹಾಯ್..ಏನು ಹೇಳು.
ಹುಡುಗಿ : ಏನಿಲ್ಲ ಸುಮ್ಮನೆ ಕಾಲ್ ಮಾಡಿದೆ.
ಹುಡುಗ : (ಕಾಲ್ ಯಾವತ್ತು ಮಾಡಿದ್ದೀಯ..ಯಾವಾಗಲೂ ಮಿಸ್ಡ್ ಕಾಲ್ ತಾನೆ ಕೊಡೋದು) ಸರಿ ಸರಿ..ಎನು ಮಾಡ್ತಿದ್ಯ ಚಿನ್ನು..
ಹುಡುಗಿ : ಈಗ ತಾನೆ ಊಟ ಆಯ್ತು ಹನಿ..ನೀನೇನು ಮಾಡ್ತಿದ್ಯ?
ಹುಡುಗ : ನಂದು ಈಗ ತಾನೆ ಊಟ ಆಯ್ತು. ರೇಡಿಯೋಲಿ ಕುಣಿದು ಕುಣಿದು ಬಾರೆ ಹಾಡು ಕೇಳ್ತಿದ್ದೆ.
ಹುಡುಗಿ : ನೈಸ್ ಸಾಂಗ್.
(ಹಾಗೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂದು ಗುನುಗಿದಳು)
ಹುಡುಗ : ಹೇ ಇನ್ನೊಂದು ಸಲ ಹಾಡು ಪ್ಲೀಸ್...
ಹುಡುಗಿ : ಇಲ್ಲಿ ಎಲ್ಲಾ ಮಲಗಿದ್ದಾರೆ..ಆಮೇಲೆ ಭಯ ಪಡುತ್ತಾರೆ.
ಹುಡುಗ : (ಕರೆಕ್ಟ್..ಅವರು ಯಾವುದೋ ಮೋಹಿನಿ ಬಂದಿದೆ ಎಂದುಕೊಳ್ಳುತ್ತಾರೆ) ಹೇ ಕಮಾನ್ ಪ್ಲೀಸ್..
ಹುಡುಗಿ : ಹೋಗೋ ನನಗೆ ಅಷ್ಟು ಸರಿಯಾಗಿ ಬರಲ್ಲ..
ಹುಡುಗ : (ಅದು ಊರಿಗೇ ಗೊತ್ತು) ಹೇ ಅದು ನಿಜವಾಗಿಯೂ ಚೆನ್ನಾಗಿತ್ತು...ಪ್ಲೀಸ್ ಹಾಡೆ.
ಹುಡುಗಿ : ಹೇ ನಂಗೇನೋ ಒಂಥರಾ ಆಗತ್ತೆ.
ಹುಡುಗ : ಅದ್ರಲ್ಲಿ ಏನಿದೆ ಚೆನ್ನಾಗೇ ಹಾಡ್ತೀಯಲ್ಲ..
ಹುಡುಗಿ : ಯಾಕೋ ತಲೆ ತಿನ್ನುತ್ತೀಯ..ಸರಿ ಒಂದೇ ಒಂದು ಪಲ್ಲವಿ ಹಾಡುತ್ತೇನೆ
ಹುಡುಗ : (ಇನ್ನೇನು ಕಾದಿದೆಯೋ) ಗ್ರೇಟ್..
ಹುಡುಗಿ : ಯಾವ ಹಾಡು ಹಾಡಲಿ.
ಹುಡುಗ : (ಯಾವ ಹಾಡು ಹಾಡಿದ್ರೆ ಏನು..ನನ್ನ ನಿದ್ದೆ ಅಂತೂ ಹಾಳಾಗೋಯ್ತು) ಪ್ರೇಮಲೋಕದಿಂದ "ಈ ನಿಂಬೆ ಹಣ್ಣಿನಂತ" ಹಾಡು.
ಹುಡುಗಿ : ಒಳ್ಳೆ ಹಾಡು ಆದರೆ ನನಗೆ ಸಾಹಿತ್ಯ ನೆನಪಿಲ್ಲ.
ಹುಡುಗ : (ಪಠ್ಯ ಪುಸ್ತಕ ಬಿಟ್ರೆ ಬೇರೆ ಏನು ನೆನಪಿರತ್ತೆ ನಿಂಗೆ) ಸರಿ ಸಂತೋಷಕ್ಕೆ ಹಾಡು ಸಂತೋಷಕ್ಕೆ ಹಾಡ್ತ್ಯಾ?
ಹುಡುಗಿ : ಬೇಡ ಅದೇ ಹಾಡು ಹಾಡ್ತೀನಿ.
ಹುಡುಗ : ( ಎಲ್ಲಾ ಒಂದೇ ಯಾವ ಹಾಡು ಹಾಡಿದ್ರೂ ನನ್ನ ಕಿವಿ ಕೆಡತ್ತೆ) ಹಾಡು.
ಹುಡುಗಿ : ತನ್ನ ಗಂಟಲನ್ನು ಸರಿ ಪಡಿಸಿಕೊಂಡು ಒಂದು ಸಾಲು ಹೇಳಿ..ಬೇಡ ಚಿನ್ನು ನನಗೆ ನಾಚಿಕೆ ಆಗುತ್ತಿದೆ.
ಹುಡುಗ : ಹಾಡು ಹಾಡು..ನಿನ್ನ ಹಾಡಿನ ಸವಿಗೆ ನಾನು ಮುಳುಗಿ ತೇಲಬೇಕು.
ಹುಡುಗಿ : ನೋಡು ಗಲಾಟೆ ಶುರು ಮಾಡ್ತೀಯ..
ಹುಡುಗ : (ಗೊತ್ತಾಯ್ತು ತಾನೆ..ಮತ್ತಿನ್ನೇನು) ಇಲ್ಲ ಇಲ್ಲ.ನೀನು ನಾಚಿಕೆ ಅಂದ್ಯಲ್ಲ..ಅದಕ್ಕೆ ಸುಮ್ಮನೆ ರೇಗಿಸಿದೆ. ಪ್ಲೀಸ್ ಹಾಡೆ.
ಹುಡುಗಿ : ನಾಳೆ ಹಾಡ್ಲಾ?
ಹುಡುಗ : (ಅಬ್ಬಾ ಸದ್ಯ ತಪ್ಪಿಸಿಕೊಂಡೆ ಗುರು..ಗ್ರೇಟ್ ಎಸ್ಕೇಪ್) ಸರಿಮಾ..ನಿಂಗೆ ಯಾವಾಗ ಹಾಡಬೇಕು ಅನ್ಸತ್ತೋ ಅವಾಗ ಹಾಡು.
ಹುಡುಗಿ ಸರಿ ಕಣೋ ಗುಡ್ ನೈಟ್.
ಹುಡುಗ : ಸರಿ ಗುಡ್ ನೈಟ್.
ಸ್ವಲ್ಪ ಹೊತ್ತಿನ ನಂತರ ಮತ್ತೆ ಆಕೆ ಕರೆ ಮಾಡಿದಳು ( ಅಂದರೆ ಮತ್ತೆ ಮಿಸ್ಡ್ ಕಾಲ್ ಕೊಟ್ಟಳು ಹುಡುಗನೇ ವಾಪಸ್ ಮಾಡಿದ
ಹುಡುಗಿ : ಹೇ ಮಲಗಿಬಿಟ್ಯ?
ಹುಡುಗ : (ಇಲ್ಲ ಕರೆಂಟ್ ಕಂಡು ಹಿಡೀತಾ ಇದೀನಿ)..ಇಲ್ಲ ಹೇಳಮ್ಮ..
ಹುಡುಗಿ : ಏನ್ ಮಾಡ್ತಿದ್ಯ?
ಹುಡುಗ : (ನಡುರಾತ್ರಿಲೀ ಏನು ಕಳ್ಳ ಪೋಲೀಸ್ ಆಟ ಆಡಕ್ಕಾಗತ್ತಾ) ಮ್ಯಾಚ್ ನೋಡ್ತಾ ಇದೀನಿ.
ಹುಡುಗಿ : ಸರಿ ಮ್ಯಾಚ್ ನೋಡ್ಕೋ ನೀನು.
ಹುಡುಗ : ಪರ್ವಾಗಿಲ್ಲ ಹೇಳು ಹಳೆ ಮ್ಯಾಚ್ ಅದು.
ಹುಡುಗಿ : ಅದು ನಾನು ಹಾಡು ಹೇಳ್ದೇ ಇದ್ರೆ ಬೇಜಾರು ಆಗತ್ತಾ?
ಹುಡುಗ : (ಬೇಜಾರ...ನೀನು ಹಾಡು ಹೇಳದೇ ಇದ್ದ ದಿನ ನನ್ನ ಜೀವನದಲ್ಲಿ ತುಂಬಾ ಒಳ್ಳೆಯ ದಿನ) ಬೇಜಾರು ಅಂತೇನು ಅಲ್ಲ. ನಾಳೆ ಹಾಡ್ತೀನಿ ಅಂದ್ಯಲ್ಲ ಅದಕ್ಕೆ ಸುಮ್ಮನಾದೆ. (ಇವತ್ತು ತಪ್ಪಿಸಿಕೊಂಡೆ ಅಂದುಕೊಳ್ಳುತ್ತಿದ್ದೆ :-( )
ಹುಡುಗಿ ಒಂದು ಸಾಲು ಹಾಡಿದಳು.
ಹುಡುಗ : (ಥೂ.....) ವಾವ್...ಸೂಪರ್!
ಹುಡುಗಿ : ಸುಳ್ಳು. ನಂಗೊತ್ತು ನನ್ ವಾಯ್ಸ್ ಎಷ್ಟು ಕಚಡವಾಗಿದೆ ಎಂದು..
ಹುಡುಗ : (ಸದ್ಯ ನಿಂಗೆ ಗೊತ್ತಾಯ್ತಲ್ಲ ) ಹೇ ಇಲ್ಲ ನಿಜವಾಗ್ಲೂ ಚೆನ್ನಾಗಿತ್ತು.
ಹುಡುಗಿ : ಏನಿಲ್ಲ ಸುಮ್ನೆ ಹೇಳ್ಬೇಕಲ್ಲ ಅಂತ ಹೀಗೆ ಹೇಳ್ತಾ ಇದ್ಯ ಸರಿ ಗುಡ್ ನೈಟ್ ಮಲ್ಕೊ.
ಹುಡುಗ : (ನಿನ್ನ ಹಾಡು ಕೇಳಿದ್ ಮೇಲೆ ಇನ್ನೆಲ್ಲಿ ಗುಡ್ ನೈಟ್)
ಹುಡುಗಿ : ಹೇ ನಿಜವಾಗ್ಲೂ ನನ್ ವಾಯ್ಸ್ ಚೆನ್ನಾಗಿದ್ಯ?
ಹುಡುಗ : (ತಂದೆ ಇವ್ಳು ಬಿಡಲ್ಲ..ಹಾಳಾಗೋಗು..ನಿನ್ ವಾಯ್ಸ್ ಒಂದ್ಸಲ ರೆಕಾರ್ಡ್ ಮಾಡಿ ಕೇಳು ಗೊತ್ತಾಗತ್ತೆ) ನಿಜವಾಗ್ಲೂ ಚೆನ್ನಾಗಿದೆ.
ಹುಡುಗಿ : ಬರೀ ಸುಳ್ಳು.
ಹುಡುಗ : (ಇವಳಜ್ಜಿ...ಇನ್ನೂ ನಿದ್ದೆ ಮಾಡಕ್ಕೆ ಬಿಟ್ಟಿಲ್ಲ ಅಂದ್ರೆ) ನಿಜವಾಗ್ಲೂ ಚೆನ್ನಾಗಿದೆ.
ಹುಡುಗಿ: ಏನೋಪಾ. ಸರಿ ಬೈ.
ಮಿಂಚಂಚೆಯಲ್ಲಿ ಬಂದದ್ದು.
Comments
ಉ: ಪ್ರೇಮಿಗಳ ಸಂಭಾಷಣೆ
In reply to ಉ: ಪ್ರೇಮಿಗಳ ಸಂಭಾಷಣೆ by vani shetty
ಉ: ಪ್ರೇಮಿಗಳ ಸಂಭಾಷಣೆ
ಉ: ಪ್ರೇಮಿಗಳ ಸಂಭಾಷಣೆ
In reply to ಉ: ಪ್ರೇಮಿಗಳ ಸಂಭಾಷಣೆ by santhosh_87
ಉ: ಪ್ರೇಮಿಗಳ ಸಂಭಾಷಣೆ
ಉ: ಪ್ರೇಮಿಗಳ ಸಂಭಾಷಣೆ
In reply to ಉ: ಪ್ರೇಮಿಗಳ ಸಂಭಾಷಣೆ by gopaljsr
ಉ: ಪ್ರೇಮಿಗಳ ಸಂಭಾಷಣೆ