ಪ್ರೇಮ ಗೀತೆ ರಚನೆ

ಪ್ರೇಮ ಗೀತೆ ರಚನೆ

ಕವನ

ಬಂಧಗಳ ಕಳೆವ ಒಲವು

ನೋಡು ಕಾದಿರಿಸಿಹೆ ನವಿಲುಗರಿ

ಬದಲಾಗಲಿ ಜಗದ ನೋಟದ ಪರಿ.

 

ಪ್ರೀತಿಗಿಲ್ಲ ಕುಲದ ಕೂಪದ ಗುಂಗು

ಮನುಜ ಮತವೇ ಅದರ ಬಲು ರಂಗು

ಭಾವ ಬೆರೆತರದು ಒಂದೇ ಉಸಿರು ಜೀವ

ಒಡತಿ ದೇವ ನಮ್ಮ ಒಲವ ಕಾವ.

 

ಗೆಳೆಯ ಬೆಳಗಿದೆ ನಮ್ಮ ಪ್ರೀತಿ ದೀಪ

ನೀಗಿಸಿ ಮನದ ಈ ಕತ್ತಲ ತಾಪ

ಬಂಧಗಳ ಮೀರಿ ಬೆಳೆದ ಒಲವ ರೂಪ

ಸುಮವಾಗಿ ನಗುತಿದೆ ಅಳಿಸಿ ವಿರೂಪ.

 

ನವಿಲುಗರಿ ಚಿತ್ತಾರ ನಮ್ಮ ಬದುಕು

ಒಡತಿ ಅಳಿಯಲಿ ಮನಗಳ ಒಡಕು

ಮುದ್ದಿಸಿ ಸಾಗುವ ಈ ಬದುಕು

ನಮ್ಮ ಒಲವು ಕಳೆಯಲಿ ಕೊಳಕು.

 

-ನಿರಂಜನ ಕೇಶವ ನಾಯಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್