ಪ್ರೇಮ ಪತ್ರ...
ಬರಹ
ಮಿನುಗು ತಾರೆಗಳು ಅಡಗಿ ಕುಳಿತಿದೆ ನಿನ್ನ ಕಣ್ಣ ನೋಟದಲ್ಲಿ...
ಮಿ೦ಚೊ೦ದು ಮಿ೦ಚಿ ಮರೆಯಾಗಿದೆ ನಿನ್ನ ಮೈಯ ಹೊಳಪಿನಲ್ಲಿ...
ಬೀಸೋ ಗಾಳಿಯು ಕೂಡ ಬಾಗಿಲ ಬಡಿದಿದೆ ಚಿನ್ನ ನಿನ್ನ ಮುದ್ದಾಡಲು..
ಆಗಸವು ಕಾಮನಬಿಲ್ಲಿನ ಆಸೆಯೊಡ್ಡಿದೆ ಚೆಲುವೆ ನಿನ್ನ ಬರ ಸೆಳೆಯಲು...
ಸದಿಲ್ಲದ ರಾತ್ರಿಯಲ್ಲಿ ಚ೦ದ್ರ ಇಣುಕುತಿರುಹನು ನೋಡೇ ಕಿಟಕಿಯಲ್ಲಿ...
ಮು೦ಜಾನೆ ನೀ ಏಳಲು ನಾಚಿ ಅಡಗಿದನೇ ಆ ಚ೦ದ್ರ ಆಗಸದಲ್ಲಿ...
ನಿನ೦ದಕ್ಕೆ ಮನ ಸೋತು ಮುಳುಗಿದ ನೋಡೇ ಆ ಸೂರ್ಯ...
ಬಳಿ ಬ೦ದು ನಿನ್ನ ಹೆಸರ ಹಿಡಿದು ಕರೆಯಲು ಅವನಿಗೆಲ್ಲಿದೆಯೇ ಧೈರ್ಯ...?
ಈ ಸೂರ್ಯ ಚ೦ದ್ರನ೦ತೆ ಮೌನವಾಗಿ ಸಾಗಿದೆಯೇ ನನ್ನ ಪ್ರೇಮ...
ಈ ಪ್ರಕ್ರುತಿಯಲ್ಲೇ ನಾ ಪ್ರೇಮಪತ್ರವ ಬರೆದಿರುವೆನೇ...
ನೀ ಓದಬಾರದೆ ಅದನೊಮ್ಮೆ ಈ ಪ್ರೇಮಿ ಕಣ್ಣ್ ಮುಚ್ಚುವ ಮುನ್ನ...