ಪ್ರೇಮ ಫಜೀತಿ

ಪ್ರೇಮ ಫಜೀತಿ

ಕವನ

ಸುಳಿವಿಲ್ಲದೇ ಬಂದೆ ನೀ

ಮಿಂಚಿನಂತೆ..

ಹಿತವಾಗಿ ಕಂಡೆ ನೀ 

ಮಳೆಯಂತೆ..

ಸೊಬಗಿಗೆ ಕರಗಿದೆ ನಾ 

ಕಡಲತೀರದ ಮರಳಂತೆ..

ತುಸು ನಗೆಯ ಬೀರುತ ನಿಂದೆ ನಾ 

ಅರಳುತಿರುವ ಹೂವಂತೆ..

 

ಮೊದಲ ನೋಟವು 

ಮನದಲ್ಲಿ ಮನೆಯ ಮಾಡಿತು..

ನೀನಾಡಿದ ಮೊದಲ ಮಾತು 

ನೋವೆಲ್ಲವ ಮರೆಸಿತು..

ಮೌನದಲ್ಲಿ ಭಾವನೆಗಳ

ಬಂಧವು ಬೆಸೆಯಿತು..

ನೋಟದಲ್ಲಿ ಸಂದೇಶಗಳ 

ಸಂವಹನ ಶುರುವಾಯಿತು..

 

ಸಮಯದೊಂದಿಗೆ ಸರಿಯುತ್ತಿತ್ತು 

ನಂಬಿಕೆಯೆಂಬ ಬುನಾದಿ..

ಹಲವು ತಿರುವುಗಳ ಪಡೆಯಿತು 

ನಾವ್ ನಡೆವ ಹಾದಿ..

 

ಹುಸಿ ಮುನಿಸುಗಳ ನಡುವಿನ ಪ್ರೀತಿ..

ಬದಲಾಗಿ ತಂದಿತು ಬಿರುಕೆಂಬ ಭೀತಿ..

ಸಾಕೆಂದು ಹಿಂದೆ ಸರಿದೆನು,

ಈ ಪ್ರೇಮ ಫಜೀತಿ..

- ಭಾರತಿ ಗೌಡ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್