ಪ್ರೇಮ ಶಾಸನ - ಒಂದು ಗಝಲ್

ಪ್ರೇಮ ಶಾಸನ - ಒಂದು ಗಝಲ್

ಕವನ

ಹಳಗನ್ನಡ ಶೈಲಿಯಲಿ ಪ್ರೇಮಶಾಸನ

ಬರೆಸುವೆ ರಮಣಿ

ಸೆಳೆಯುತ ಹೃದಯದೊಳು ರಾಣಿಯಾಗಿ

ಇರಿಸುವೆ ರಮಣಿ

 

ಮಧುಶಾಲೆಯಲಿ ಸವಿಜೇನ ಹೀರುತ

ನೆನಪಿಸಿಕೊಳ್ಳುವೆನು

ಚದುರೆಯ ಚೆಲುವೆಯ ಕಟಿಯನ್ನು

ಬಳಸುವೆ ರಮಣಿ

 

ಕೋಮಲ ಶರೀರದ ಆಲಿಂಗನಕೆ

ಕಾದಿರುವೆ ನಿನಗಾಗಿ

ನಿರ್ಮಲ ಮನಸ್ಸಿನ ಉನ್ಮಾದದೊಳು

ತೇಲಿಸುವೆ ರಮಣಿ

 

ಬಿಗಿದಪ್ಪುವೆ ತೋಷದಲಿ ಬಿಡದಂತೆ

ಬಳ್ಳಿಯಾಗಿ ಇಂದು

ನಗೆಯನ್ನು ಚೆಲ್ಲುತಿಹ ವದನವನು

ಮುದ್ದಿಸುವೆ ರಮಣಿ

 

ಸಾಲುಸಾಲಲಿ ವೈಭವದ ಮೆರವಣಿಗೆ

ಅಭಿನವನ ಕಾವ್ಯ

ಹಾಲುಗೆನ್ನೆಯ ಗಂಧರ್ವ ಕನ್ಯೆಗಾಗಿ

ಧ್ಯಾನಿಸುವೆ ರಮಣಿ

 

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್