ಪ್ರೇಮ ಸಂಗೀತ

ಪ್ರೇಮ ಸಂಗೀತ

ಬರಹ

ನಾನೂ ಒಮ್ಮೊಮ್ಮೆ ಹಾಡುತ್ತೇನೆ
ಒಮ್ಮೆ ಆರೋಹಣ
ಒಮ್ಮೆ ಅವರೋಹಣ
ಯಾರಿಗೂ ಕೇಳದಂತೆ
ನನ್ನೊಳಗೆ ನಾನೇ ಗುನುಗುತ್ತೇನೆ

ನನ್ನ ಸ೦ಗೀತದಿ೦ಪಿಗೆ
ನಾನೇ ಮನಸೋಲುತ್ತೇನೆ
ತಾಳ ತಪ್ಪಿದರೂ ನನಗೆ ನಾನೇ
ರಾಗ ವಿರಾಗವಾದರೂ ನನಗೆ ನಾನೇ
ಗಾಯಕ ಕೇಳುಗ ನಾನೇ ತಾನೆ

ನನ್ನ ಪ್ರೇಮ ರಾಗಕೆ ಈಗ
ಇವಳೊಬ್ಬಳು ಹೊಸ ಜೋಡಿ
ಅವಳ ತಾಳಕ್ಕೆ ತಾಳ ಸೇರಿಸಿ
ಹಾಡಿ ಕಚೇರಿ ನಡೆಸಿ
ಕೇಳುಗನಾಗಿ ನೋಡಿದ್ದೇನೆ
(ಚೆನ್ನಾಗಿದೆ ಗಾಯಕ ಜೋಡಿ)
ಅವಳ ದನಿಗೆ ದನಿಯಾಗಿ
ತಾಳವಾಗಿ , ಸ್ವರವಾಗಿ
ರಾಗವಾಗಿ , ಸ್ಪೂರ್ತಿಯಾಗಿ
ಅವಳಲ್ಲೇ ಸೇರಿಹೊಗಿದ್ದೇನೆ
ಹಾಡಿನೊಳಗಣ ಭಾವದಂತೆ

ಹರೀಶ್ ಆತ್ರೇಯ