** ಪ್ರೇಮ **
ಹದವರಿಯದ ನೆಲಕ್ಕೂ
ಮೋಡಕಟ್ಟದ ಬಾನಿಗೂ
ಪ್ರೇಮ ಸಂಭವಿಸಬೇಕು,,,,
ಇಬ್ಬರ
ಪ್ರೇಮ ಸಲ್ಲಾಪದಲಿ
ಬಾನಿಂದ
ಮಳೆ ಹನಿದಾಗ ;
ನೆಲ, ನಾಚಿಕೆಯನು ಬದಿಗಿಟ್ಟು
ತುಟಿಬಿರಿದು,
ಮಳೆಯ, ಹನಿ-ಹನಿಯನೂ
ಆಸ್ವಾದಿಸಬೇಕು,,,,
ಬಾನು-ಭುವಿಯ
ಮಿಲನ ಸಂಭ್ರಮದಲಿ,
ನಮ್ಮ ಬೆನ್ನೆಲುಬುಗಳು
ದಿಟ್ಟವಾಗುತ್ತವೆ ;
ಅದೇ ಪ್ರೆಮದಿಂದಲೇ
ಬೀಜ ಬಿತ್ತಿ
ಪೈರು ತೆಗೆದು
ಹೊಟ್ಟೆಯ ಹಸಿವು ತಣಿಸಿಕೊಳ್ಳಬೇಕು ;
**************************************
ಇಲ್ಲೇನಾಗಿದೆ ?
ಬಾನು, ಪ್ರೇಮದ
ಉತ್ತುಂಗದಲಿ ಮಳೆ ಹರಿಸಿದರೂ.
ಒಂದು ಹನಿಯೂ
ಭುವಿಯ ಗರ್ಭ ಸೇರುತ್ತಿಲ್ಲ,,,
ಕಾಂಕ್ರೀಟಿನ ಹೊದಿಕೆಯೊಳಗೆ,
ಭುವಿಯ ತುಟಿಯನು
ಬಾನು ಚುಂಬಿಸದಂತೆ ಹೊಲಿದು
ಬಿಟ್ಟಿದ್ದೇವೆ,,,
ನಾಚಿಕೆ ಇಲ್ಲದ ನಾವುಗಳು,,,
-- ಜೀ ಕೇ ನ
Comments
ಉ: ** ಪ್ರೇಮ **
ಈ ಪರಿಸ್ಥಿತಿಯ ಖಳನಾಯಕರು ನಾವೇ ಎಂಬುದರ ಸಮರ್ಥ ಚಿತ್ರಣ.
In reply to ಉ: ** ಪ್ರೇಮ ** by kavinagaraj
ಉ: ** ಪ್ರೇಮ **
ಪ್ರತಿಕ್ರಿಯೆಗೆ ಧನ್ಯವಾದಗಳು ಕವಿಗಳೇ,