ಪ್ರೊ.ಕೆ. ರಾಮದಾಸ್ ಬಾಲ್ಯದ ಪುಟತೆರೆದ ವಿಲಿಯಂ

ಪ್ರೊ.ಕೆ. ರಾಮದಾಸ್ ಬಾಲ್ಯದ ಪುಟತೆರೆದ ವಿಲಿಯಂ

ಬರಹ

ಪ್ರೊ.ಕೆ.ರಾಮದಾಸ್ ಬಗ್ಗೆ ಅಥವಾ ಸ್ವತಃ ರಾಮದಾಸರೇ ಬರೆದ ಒಂದೂ ಪುಸ್ತಕವಿಲ್ಲ ಎನ್ನುವ ಕೊರತೆಯನ್ನು ತಮ್ಮದೇ ರೀತಿಯಲ್ಲಿ ನೀಗಿಸಿದ್ದಾರೆ ರಾಮದಾಸ್‌ರವರ ಬಾಲ್ಯ ಸಖ ಶ್ರೀ ವಿಲಿಯಂ. ಅದೂ ಹೇಗೆ, ಈ ಬೆಂಕಿಕಿಡಿ ಚಾರ್ವಾಕ ರಾಮದಾಸ್‌ರ ಬಾಲ್ಯದ ಸುಮಧುರ ನೆನಪುಗಳನ್ನು ದಾಖಲಿಸಿ ಎಲ್ಲಿ ಹೋದವೋ ಆ ದಿನಗಳು ಎಂದು ಯಾರಾದರೂ ಹಂಬಲಿಸುವಂತೆ ಅವುಗಳನ್ನು ಮತ್ತೆ ಕಟ್ಟಿಕೊಡುವುದರ ಮೂಲಕ. ಎಲ್ಲರಿಗೂ ಅವರವರ ಬಾಲ್ಯ ಸೊಗಸು. ಆ ನೆನಪುಗಳು ಯಾತಕ್ಕೆ ಮತ್ತೊಮ್ಮೆ ಬರಲಾರದೋ ಬಾಲ್ಯ ಎನಿಸುವಂಥವು. ರಾಮದಾಸ್‌ರ ಬಾಲ್ಯವೂ ಇದಕ್ಕೆ ಹೊರತಾದುದಲ್ಲ. ಹೊರತಾದುದು ಏನಾದರೂ ಇತ್ತೆ ಎನ್ನುವುದು ಇಲ್ಲಿನ ಶೋಧ. ಹಾಗಾಗಿ ಈ ಪುಸ್ತಕಕ್ಕೆ ಬಾಲ್ಯದ ಹಂಬಲಿಕೆ ಮೀರಿದ ಮಹತ್ವ.

ಪ್ರತಿಗಳಿಗೆ : ಅಭಿರುಚಿ ಪ್ರಕಾಶನ, ನಂ.386, 14ನೆಯ ಮುಖ್ಯ ರಸ್ತೆ, 3ನೆಯ ಅಡ್ಡ ರಸ್ತೆ, ಸರಸ್ವತೀಪುರ, ಮೈಸೂರು - 9. (94486 08926) abhiruchiprakashana@yahoo.co.in

ಬೆಲೆ: ನಲವತ್ತೈದು ರೂಪಾಯಿ.