ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರನ್ನು ಸನ್ಮಾನಿಸಲಾಯಿತು

ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರನ್ನು ಸನ್ಮಾನಿಸಲಾಯಿತು

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ, ರಾಮಕೃಷ್ಣ ಬಡಾವಣೆಯಲ್ಲಿರುವ, 'ಉದಯ ಭಾನು ಕಲಾಸಂಘ ' ನೋಂ. ಸಮಾಜಸೇವೆಯನ್ನು ನಿರಂತರವಾಗಿ  ೪೦ ವರ್ಷಗಳಿಗಿಂತ ಹೆಚ್ಚು ಸಮಯದಿಂದ ಮಾಡಿಕೊಂಡು ಬರುತ್ತಿದೆ.  ಬೆಂಗಳೂರು ನಗರದ ಸರ್ವತೊಮುಖ ಬೆಳವಣಿಗೆಯನ್ನು ದಾಖಲಿಸುವುದರ ಜೊತೆಗೆ, ನಗರದ ಸಾಂಸ್ಕೃತಿ ಸಾಹಿತ್ಯಗಳನ್ನು, ಸಮಾಜಸೇವೆಗಳನ್ನು ಗುರುತಿಸುವ, ಪ್ರೊತ್ಸಾಹಿಸುವ, ಗುರುತರ ಜವಾಬ್ದಾರಿಯನ್ನು ಸಂಘವು, ಅತ್ಯಂತ  ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ವರ್ಷ, ೨೦೧೧ ರ ಜನವರಿ ತಿಂಗಳ ೩೦ ನೆಯ ತಾರೀಖಿನ ದಿನ ಹಮ್ಮಿಕೊಂಡ ಸಂಘದ ಕಾರ್ಯಕ್ರಮದಲ್ಲಿ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರನ್ನು ಸನ್ಮಾನಿಸಲಾಯಿತು. ಪ್ರೊ.  ರಾವ್ ವಿಜ್ಞಾನದ ಪಾಠಗಳನ್ನು ಅತ್ಯಂತ ನಿಷ್ಠೆಯಿಂದ ವಿದ್ಯಾರ್ಥಿಗಳಿಗೆ ಆಸಕ್ತಿ ಬರುವಂತೆ ಬೋಧಿಸುತ್ತಾ ಬಂದಿದ್ದಾರೆ.  ಅವರು  ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ,  ತಮ್ಮ ಅಮೂಲ್ಯ ಸಮಯವನ್ನು ಕಾಲೇಜಿನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ವಿನಿಯೋಗಿಸುತ್ತಿದ್ದಾರೆ.  ಅಂತಹ ಶಿಕ್ಷರು ವಂದನಾರ್ಹರು.  ಚಿತ್ರದಲ್ಲಿ ನಿಂತಿರುವವರು :  ’ಉದಯ ಭಾನು ಕಲಾಸಂಘ” ದ ಕಾರ್ಯದರ್ಶಿ, ಶ್ರೀ ನರಸಿಂಹ ; ಕರ್ನಾಟಕ ವಿಧಾನ ಪರಿಷತ್ತಿನ ಸ್ಪೀಕರ್, ಶ್ರೀ. ಶಂಕರಮೂರ್ತಿಯವರು ರಾವ್ ರವರನ್ನು ಸನ್ಮಾನಿಸುತ್ತಿದ್ದಾರೆ. ಪಕ್ಕದಲ್ಲಿ ಉದಯಭಾನು ಕಲಾಸಂಘದ ಶ್ರೀ. ಕೃಷ್ಣರವರು ನಿಂತಿದ್ದಾರೆ.