ಪ್ರೊ. ಕೃಷ್ಣೇಗೌಡ್ರ ಯುಗಾದಿ!!! ಸ್ವಾಗತಿಸಿ..........

ಪ್ರೊ. ಕೃಷ್ಣೇಗೌಡ್ರ ಯುಗಾದಿ!!! ಸ್ವಾಗತಿಸಿ..........

ಬರಹ

ಸ್ನೇಹಿತರೇ.... ಮೊನ್ನೆ ಪ್ರೊ!! ಕೃಷ್ಣೇಗೌಡ್ರ ಹಾಸ್ಯ ಭಾಷಣ ಕೇಳ್ತಾ ಅವರೇ ಬರ್ದಿರೋ ಈ ಯುಗಾದಿ ಕವನ ಕೇಳಿದೆ.. ನಿಮ್ಮೆಲ್ಲರ್ ಜೊತೆ ಹಂಚ್ಕೋಬೇಕು ಅನ್ನಿಸ್ತು... ಮಜಾ ಇದೆ.. ಒಮ್ಮೆ ಓದಿ ನೊಡಿ........(ರತ್ನನ ಪದಗಳ ಧಾಟಿ)

ವರ್ಸ ಆಯ್ತ್ ನಿನ್ ಮಖ ನೋಡಿ ಹೆಂಗಿದ್ದೀ ಉಗಾದಿ

ಪರ್ಪಚ್ವೆಲ್ಲ ಸುತ್ತ ಬಂದಿದ್ದಿ ಹೆಂಗಿತ್ತು ನಿನ್ ಹಾದಿ !!೧!!

ಏನಂದೆ ಇಲ್ ಯೇಗಕ್ಷೇಮ ಹೆಂಗೈತೆ ಅಂತೀಯಾ

ಯೋಳ್ತೀನ್ ಕುಂತ್ಕೋ ಮದ್ಯ ಬ್ಯಾಸ್ರಾದ್ರ್ ಎದ್ ಗಿದ್ ಹೋಗ್ಬುಟ್ಟೀಯಾ!

ತುಂಬೆ ನಿಂಬೆ ಗಿಡದಂತೋರು ಒಬ್ರು ಕಾಣ್ತಾ ಇಲ್ಲ

ಸುತ್ತ ಮುತ್ತ ಪಾರ್ತೇನ್ಯಮ್ಮು ಕಿತ್ರೂ ಸಾಯಾಕಿಲ್ಲಾ !

ಭೂಮಿ ತುಂಬಾ ಬುಸ್ಗುಡ್ತಾವೆ ಅಪನಂಬ್ಕೆಯಾ ಬಾಪು

ತಾಯಿ ಮಕ್ಳಲ್ ನಂಬ್ಕೆ ಇಲ್ಲಾ ಹಬ್ಬೈತ್ ವಿಸದ ಹಂಬು!

ಈ ದುಡ್ಡಿಗ್ ಇಂಥ ದುರಂಕಾರ ಎಂದೂ ಬಂದಿರಲಿಲ್ಲ

ಇಲ್ದೋರ್ ಪಾಲಿಗ್ ಬರೀ ಬೇವು ಇದ್ದೊರ್ಗೆನೆ ಬೆಲ್ಲ!

ದೊಡ್ ದೊಡ್ ರೂಪಾಯಿ ನೋಟ್ಗೋಳೆಲ್ಲಾ ಮೀಸೆ ತಿರುಗುಸ್ತಾವೆ

ಒಂದೆರ್ಡ್ ರೂಪಾಯಿ ಮೈ ಮುಟ್ನೋಡು ತ್ಯಾಪೆ ಹಾಕ್ಕೊಂಡಾವೆ!

ಇದ್ಯಾವಂತ್ರು ಬುದ್ದಿನೆಲ್ಲಾ ದುಡ್ಡಿಗ್ ಮಾರ್ಕಂತವ್ರೆ

ಅಡ್ಡ ದಿಡ್ಡಿ ದುಡ್ ಮಾಡ್ಬುಟ್ಟಿ ನಿದ್ದೆಗೆಟ್ಗಂಡವ್ರೆ!

ಭೂಮಿ ಮ್ಯಾಗಲ ಸಂಪತ್ನೆಲ್ಲಾ ಗೋರ್ಕಂಡ್ ನೆಕ್ಕಂತಾವ್ರೆ

ನಾಳ್ಗೆ ಬರೋ ಪೀಳ್ಗೆ ಬಾಯ್ಗೆ ಕುಕ್ಕೆ ಅಲ್ವಾ ದ್ಯಾವ್ರೆ!

ಗೋವ್ಗೊಳೆಲ್ಲಾ ಗೂಟವಡ್ಕಂಡ್ ಗೊಂತ್ನಾಗ್ ಬಿದ್ಕೊಂಡಾವೆ

ಹಾವ್ಗೊಳೆಲ್ಲಾ ಹುತ್ತಾ ಬುಟ್ಬುಟ್ ಆಚೆ ತಿರ್ಗಾಡ್ತಾವೆ!

ನನ್ ಮಾತ್ ಕೇಳಿ ಭೂಮಿ ಮ್ಯಾಲೆ ಒಳ್ಳೇರ್ ಒಬ್ರೂ ಇಲ್ಲಾ ಅಂದ್ಕೊಬ್ಯಾಡ

ಮಳೆ ಬೆಳೆ ಇನ್ನೂ ಆಯ್ತಾದಲ್ಲಾ! ಹಬ್ಬಕ್ಕೇನು ಊಟ ಅಂದ್ಯಾ ಒಬ್ಬಟ್ಟು ಹುಳಿ ಅನ್ನ

ರಾತ್ರಿ ಅನ್ನ ಬಾಕಿ ಉಳುದ್ರೆ ಒತ್ತಾರೆಗ್ ಚಿತ್ರಾನ್ನ!

ಸೆರಗ್ನಾಗೇನೋ ಗಂಟಾಕಿದ್ದಿ ಬೇವು ಬೆಲ್ಲಾ ತಾನೆ

ಸಕಲೆಂಟ್ ಜನಕೂ ಸಮನಾಗ್ ಹಂಚಿ ಹತ್ತು ನಿನ್ನ ಮ್ಯಾನೆ!

ಮುಂದಿನ್ ವರ್ಸಾ ಹೆಂಗೂ ತಿರ್ಗಾ ಬಂದೆ ಬರ್ತೀಯಲ್ಲ

ಕೂತ್ಕಂಡಾಗ ದೀಟಲ್ಲಾಗಿ ಮಾತಾಡಾನಾ ಎಲ್ಲಾ.......! ಪ್ರೊ!! ಕೃಷ್ಣೇಗೌಡ್ರ...ಅನುಮತಿ ಕೋರುತ್ತಾ... -ಚಿ.ರಂ.ಶಿ.