ಪೞಗು, ಪೞೆ(ಹೞೆ)
ಪೞಗು, ಪೞೆ(ಹೞೆ) ಎರಡೂ ಒಂದೇ ಬೇರಿಗೆ ಸೇರಿದ್ದು. ಅವುಗಳ ಅರ್ಥ ಹೊಸದಲ್ಲದ್ದು. ಹೞೆಯದೆಂದೇ ಅರ್ಥ. ನಾವು ಯವುದನ್ನಾದರೂ ಪೞಗಿಸಬೇಕೆಂದರೆ ಅದು ಹೊಸದಱಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ ಆನೆಯನ್ನು ಪೞಗಿಸುವುದನ್ನೇ ತೆಗೆದುಕೊಳ್ಳಿ. ಅದಱೊಂದಿಗೆ ನಮಗೆ ಸಲಿಗೆ ಬೆಳೆದು ಅದು ನಾವು ಹೇೞಿದಂತೆ ಕೇಳಬೇಕೆಂದರೆ ನಮಗೆ ಆನೆಯ ಪರಿಚಯದ ಹೊಸತಱಲ್ಲಿ ಸಾಧ್ಯವಿಲ್ಲ. ಅದರ ಪರಿಚಯ ನಮಗೆ ಹೞೆಯದಾಗಬೇಕು. ಹಾಗೆಯೇ ನಾವು ಯಾವುದಾದರೂ ವಿಷಯದಲ್ಲಿ ಪೞಗಬೇಕೆಂದರೂ ಆ ವಿಷಯ ನಮಗೆ ಹೞೆಯದಾಗಬೇಕು. ಈ ಉದಾಹರಣೆ ನೋಡಿ: "ವಕೀಲಿವೃತ್ತಿ ಅವನಿಗೇನು ಹೊಸತೇ. ಅದಱಲ್ಲಿ ಪೞಗಿ ಅವನಿಗೀಗ ಹತ್ತು ವರ್ಷವಾಗಿದೆ". ಇಲ್ಲೂ ಪೞಗು ಎಂಬುದು ಹೞೆಯದಾಗಿದೆಯೆಂದೇ ಹೇೞುತ್ತಿದೆ. ತಮಿೞಿನ ಪೞಂ=ಹಣ್ಣು ಇದನ್ನೇ ತೆಗೆದುಕೊಳ್ಳಿ. ಇಲ್ಲಿ ಕಾಯಿ ಅಗಲೇ ಹೞೆಯದಾಗಿ ತಿನ್ನಲು ಯೋಗ್ಯವಾಗಿದೆ. ಆ ಹಣ್ಣನ್ನು ತಿನ್ನದೇ ಬಿಟ್ಟರೆ ಅದು ಎಷ್ಟು ಹೞೆಯದಾಗುತ್ತದೆಂದರೆ ಮರದಿಂದ (ಗಿಡದಿಂದ) ಬಿದ್ದು ಕೊೞೆಯಲು ಸಿದ್ಧವಾಗಿದೆ. ಹೞೆಯದು ಅೞಿಯಬೇಕಲ್ಲವೇ? ಇಲ್ಲೂ ಹೊಸ ಕಾಯಿ ಹೞತಾಗಿ (ಪೞತಾಗಿ) ಪೞವಾಗಿದೆ. ಇನ್ನೂ ಮುಂದೆ ಹೋದರೆ ಪೞತಾಗಿ (ಹೞತಾಗಿ) ಕೊೞೆತುಹೋಗುತ್ತದೆ. ಈ ’ಪೞಗು’ ವಿನ ಪಕಾರವೇಕೋ ಕನ್ನಡದಲ್ಲಿ ಹ ಆಗಲಿಲ್ಲ. ಇಲ್ಲಿ ಪೞಗು ತನ್ನ ಹೊಸರೂಪವಾಗಬೇಕಿದ್ದ ’ಹೞಗು’ ಆಗದೆ ಹೞೆಯ ಪೞಗು ಆಗೇ ಉೞಿದಿದೆ. ಹಾಗೆಯೇ ಪೞಗಾಗಿ ಕೊೞೆಯದಿದ್ದರೆ ಸಾಕು. (ಪೞಗುಮಿನ್ ಬಾೞ್ಗೆ ಕನ್ನಡದೊಳ್).
Comments
ಉ: ಪೞಗು, ಪೞೆ(ಹೞೆ)
ಉ: ಪೞಗು, ಪೞೆ(ಹೞೆ)
ಉ: ಪೞಗು, ಪೞೆ(ಹೞೆ)
ಉ: ಪೞಗು, ಪೞೆ(ಹೞೆ)