ಪೞೆಯುೞಿಕೆಗಳು

ಪೞೆಯುೞಿಕೆಗಳು

ಬರಹ

ಕನ್ನಡ ಕಾಲಕ್ಕೆ ತಕ್ಕಂತೆ ಸ್ಥಿತ್ಯಂತರ ಹೊಂದಿದ ಭಾಷೆ. ಆದರೂ ಕೆಲವು ಪದಗಳು ಬದಲಾಗದೇ ಹಾಗೇ ಉೞಿದಿವೆ.

ಎಲ್ಲಾ ವಕಾರಗಳು ಬಕಾರವಾದದ್ದು ಪೂರ್ವದ ಹೞಗನ್ನಡಕಾಲಕ್ಕೆ ಆದರೆ ಈಗಲೂ
ವಾಡಿಕೆ, ವೀಳೆಯ, ವಂದರಿ, ವರಸೆ, ವಟಗುಟ್ಟು ವೆಚ್ಚ ಇತ್ಯಾದಿ ಹಾಗೆಯೇ ಉೞಿದಿವೆ.

ಹೆಚ್ಚಿನ ಪಕಾರಗಳು ಹಕಾರವಾಗಿದ್ದು ವಚನಕಾರರ ಕಾಲಕ್ಕೆ ಆದರೂ
ಪುಡಿ, ಪಾಡು, ಪಸೆ, ಪಾಚಿ, ಪೆಟ್ಟಿಗೆ, ಪಾಳೆಯ, ಪಾೞಿ, ಪೊಗರು ಹಾಗೆ ಉೞಿದಿವೆ. ಅಲ್ಲದೆ ಸಮಾಸಗಳಲ್ಲಿ ಪಕಾರ ವಕಾರವಿನ್ನೂ ಉೞಿದಿದೆ
ಉದಾಹರಣೆ: ಇಪ್ಪತ್ತು, ಮೂವತ್ತು, ಎಪ್ಪತ್ತು (ಎೞ್ಪತ್ತು), ಕರೆವೆಣ್ಣು, ಬೆಲೆವೆಣ್ಣು, ಕುಲವೆಣ್ಣು ಇತ್ಯಾದಿ ಇತ್ಯಾದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet