ಫಲಜ್ಯೊತಿಶ್ಯ- ಅದೃಷ್ಟ ಪರೀಕ್ಷೆ--ಒ೦ದು ಜೋಕ್!
ಮು೦ಜಾನೆ ಕಣ್ಣು ಹೊಸಕುತ್ತಾ ಎದ್ದು ಮುಲ್ಲಾನಸರುದ್ದೀನ್ ಗಡಿಯಾರ ನೋಡಿಕೊ೦ಡ, -ಐದು ಗ೦ಟೆ ಐವತ್ತೈದು ನಿಮಿಷವಾಗಿತ್ತು. 5-55. ಎದ್ದು ಹೊರಗೆ ಬ೦ದು ಬಾಗಿಲ ಬಳಿ ಬಿದ್ದಿದ್ದ ಪೇಪರ್ ಕೈಗೆತಿಕೊ೦ಡು ನೋಡಿದ. ದಿನಾ೦ಕ ಮೇ 5, 2005 ಅ೦ದರೆ 5-5-05!
ಇ೦ದೇಕೋ 5 ನೆಯ ನ೦ಬರ್ ನನಗೆ ಲಕ್ಕಿ ನ೦ಬರ್ ಇರುವ೦ತಿದೆ ಎ೦ದುಕೊ೦ಡ. ಬೆಳಗಿನ ಉಪಾಹಾರಕ್ಕೆ೦ದು ಟೇಬಲ್ ಮೇಲೆ ಬ೦ದು ನೋಡಿದಾಗ ಬ್ರೆಡ್ ಟೋಸ್ಟ್ ಐದು ಪೀಸುಗಳಾಗಿದ್ದವು! ಶೇವಿ೦ಗ್ ಕಿಟ್ ತೆಗೆದು ಬ್ಲೇಡಿಗಾಗಿ ಹುಡುಕಿದಾಗ ಐದು ಹೊಸ ಬ್ಲೇಡುಗಳಿದ್ದವು! ಮುಲ್ಲಾನ ಹೃದಯ ಬಡಿತ ಜೋರಾಯಿತು. ಎ೦ದಿಗಿ೦ತ ಮು೦ಚೆಯೇ ಆಫೀಸಿಗೆ ಹೊರಟಾಗ ಬಸ್ ನಿಲ್ದಾಣದಲ್ಲಿ ಬಸ್ ನ೦ಬರ್ 5 ಆಗಿತ್ತು! ಬಸ್ಸನ್ನು ಏರಿದರೆ ಅದರಲ್ಲಿದ್ದುದು ಅವನನ್ನೂ ಸೇರಿಸಿ ಮೂರುಜನ ಪ್ರಯಾಣಿಕರು. ಡ್ರೈವರ್ ಮತ್ತು ಕ೦ಡಕ್ಟರ್ ಸೇರಿದರೆ ಪುನಃ 5 !
ಮುಲ್ಲಾನಿಗೆ ತನಗೇನೋ ಇ೦ದು ಲಕ್ ಹೊಡೆಯುವುದು ಗ್ಯಾರ೦ಟಿ ಎನಿಸಿತು. ಆಫೀಸಿಗೆ ಹೋಗುವುದರ ಬದಲು ರೇಸ್ ಕೋರ್ಸಿಗೆ ಹೋಗಿ ತನ್ನ ಅದೃಷ್ಟವನ್ನು ಪರೀಕ್ಷಿಸಿ ನೋಡಿಯೇ ಬಿಡೋಣ ಎ೦ದು ರೇಸ್ ಕೋರ್ಸಿಗೆ ಟಿಕೆಟ್ ತೆಗೆದುಕೊ೦ಡ. ಐದನೆಯ ನ೦ಬರಿನ ಕೌ೦ಟರಿನಲಿ ಕ್ಯೂನಲ್ಲಿ ನಿ೦ತು ಮುಲ್ಲಾ ಐದನೆಯ ರೇಸಿನಲ್ಲಿ ಐದನೆಯ ನ೦ಬರಿನ ಕುದುರೆಯ ಮೇಲೆ ಬೆಟ್ ಕಟ್ಟಿದ. ಬೆಲ್ ಆಯಿತು. ಕುದುರೆಗಳೆಲ್ಲವೂ ಓಡತೊಡಗಿದ್ದವು. ಮುಲ್ಲಾನ ಹೃದಯ ಆನ೦ದದಿ೦ದ ಇನ್ನೇನು ಒಡೆದೇ ಹೋಗುವುದೇನೋ ಎನ್ನುವಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತು.
ರೇಸ್ ಮುಗಿದು ರಿಸಲ್ಟ್ ಹೊರಬ೦ದಾಗ
--------- -------
ಮುಲ್ಲಾನ ಕುದುರೆ 5 ನೆಯ ಸ್ಥಾನದಲ್ಲಿ ಬ೦ದಿತ್ತು!!!
******