ಫಲಿತಾಂಶ

5

 

“ಈ ಶತಮಾನದಲ್ಲಿ ಪ್ರೀತಿ ಮಾಯೆ, ಈ ಮಾಯೆಯ ಗೆದ್ದವನು ಸಮಾಜಕ್ಕೆ ಮಾದರಿಯಾಗುತ್ತಾನೆ, ವ್ಯಕ್ತಿಗತವಾಗಿ ಬಲವಾಗಿ ಮಾಯೆಗಳ ಮೀರಿ ನಡೆಯುತ್ತಾನೆ,ಶಿವನ ಮಾಯೆಯ ಧಾಟಿ ಯುವತಿಯ ಆಕರ್ಷಣೆಯಿಂದ ದೂರ ಸರಿಯುತ್ತಾನೆ,ಶಿವನು ಸುಖದಲ್ಲಿ ತಲ್ಲೀನನಾಗಿರಲು,ಅದೆಷ್ಟೋ ಜೀವಗಳು ಈ ಪ್ರೀತಿಯ ಮಾಯೆಗೆ ಸಿಲುಕಿ ಜೀವ ಕಳೆದುಕೊಂಡಿವೆ”.
                                     ಯುವತಿ ನವ ಹಾವಭಾವಗಳಿಂದನುಕ್ಷಣಂ|
                                     ನವತೆಯಾನುತಿರೆ ಯುವಕಂ ಬೆರಗುವಡುವೊಲ್||
                                     ವಿವಿಧವೇಷದಿ ನವ್ಯತೆಯನಾನುತಿರೆ ಮಾಯೆ|
                                     ಶಿವನು ಸುಖತನ್ಮಯನೊ ಮರುಳ ಮುನಿಯ||
ಅಂದು ಯಾಕೋ ಗೊತ್ತಿಲ್ಲ‌,ನನ್ನಲ್ಲಿ ನಾನು ಇರಲಿಲ್ಲ‌,ಎಲ್ಲಿಗೋ ಪಯಣ‌ ಸಾಗಬೇಕಿತ್ತು,ಬಸ್ ಸ್ಟಾಪಿನಲ್ಲಿ ನಿಂತಿದ್ದೆ,ಮರೆಯದಿದ್ದರೂ ಅವಳ‌ ನೆನಪು ದೂರವಿತ್ತು.ಅಂದು ಅದೇ ಬಸ್ ಸ್ಟಾಪಿಗೆ ಅವಳು ಬಂದಳು ಅದು ಕೂಡಾ ಯಾಕೋ ಗೊತ್ತಿಲ್ಲ‌,ಎದೆಯಲ್ಲಿ ಮಿಂಚೊಂದು ಕಣ್ಣಿನಂಚಿಗೆ ಬಡಿಯಿತು,ಅದ್ಯಾಕೋ ಕಾಲು ನಿಂತಲ್ಲಿ ನಿಲ್ಲಲಿಲ್ಲ‌,ತಲೆ ಮೇಲೇಳಲಿಲ್ಲ‌, ಎದೆಬಡಿತ‌ ಕಡಿಮೆಯಾಗಲೇ ಇಲ್ಲ‌ ಕಣ್ಣು ಮಾತ್ರ‌ ಅವಳೆಡೆಗೆ ಎಳೆಯುತಿತ್ತು,ಅಂ'ತೂ' ಬಸ್ಸು ಬಂದಿತ್ತು,ಸೀಟು ಮಾತ್ರ ನನ್ನೇ ನೋಡಿದಂತಿತ್ತು ಅವಳನ್ನು ದೂರ‌ ಉಳಿಸುವ‌ ಯೋಚನೆ ಅದರದಾಗಿತ್ತು ಎಂಬುದು ಮನವರಿಕೆಯಾಯ್ತು, ನಿಜವಾಯ್ತು,ಅವಳು ಆ ಕಡೆ ನಾನು ಈ ಕಡೆ ಅಂದು ಕಿಟಕಿ ಗಾಜು ಇರದಿದ್ದರೆ ಆ ಕ್ಷಣ‌ ನನ್ನ‌ ಬದುಕು ಶೂನ್ಯ‌ ಎಂಬುದೇ ಸತ್ಯ‌,ಕಣ್ಣು ಕಿಟಕಿ ಗಾಜಿನ‌ ಕಡೆಗೆ ಎಳೆಯಿತು,ಅವಳ‌ ಅಸ್ಪಷ್ಟ‌ ರೂಪ‌ ಹೃದಯದಲ್ಲಿ ಸ್ಪಷ್ಟವಾಯಿತು.ಎಂದಾದರು ಅವಳು ನನ್ನೆಡೆಗೆ ನೋಡುವಳೇ! ಎಂಬುದು ಮೂಢಯೋಚನೆಯಾಯ್ತು.ಹಾಗೊಮ್ಮೆ ಹೀಗೊಮ್ಮೆ ತಿರುಗಿ ನೋಡೋಣ‌ವೆಂದರೆ ಈ ಹಾಳು ಜನ್ಮಕ್ಕೆ ಸುತ್ತಲಿನ‌ ಜಗತ್ತಿನ‌ ಅರಿವಿನ‌ ಪರಧಿ ಜಾಸ್ತಿ,ಅದೇ ಗುಂಗಿನಲ್ಲಿ ಅದೇಷ್ಟೋ ಬಾರಿ ಅವಳನು ನೋಡುವ‌ ಅದೃಷ್ಟ‌ ತಪ್ಪಿತ್ತು,ಇದನ್ನೆಲ್ಲಾ ಮೀರಿ ಬರುವ‌ ಹಂಬಲ‌ ಪ್ರಬಲವಾದರೂ ಅದು ಎಂದಿಗೂ ಬಲವಾಗಲೇ ಇಲ್ಲಾ...! ಇರಲಿ ಬಿಡು,ನೋಡೋಣ‌ ಕಾಯೋಣ‌ ಅದೆಂತಹುದೇ ಇರಲಿ ಮೀರಿ ನಡೆಯೋಣ‌,ಇನ್ನಷ್ಟು ದಿನ‌ ಅವಳು ಇದೇ ರೀತಿ ನನ್ನಲ್ಲಿರಲಿ.........? ಮುಂದುವರಿಯಲಿ........!? ‌
             ಹೇಗೇಗೋ ಅವಳ ಸ್ನೇಹ ಸಂಪಾದಿಸಿದೆ,ಆದರೆ ಮನಸಿನಲ್ಲಿ ,ಅವಳಿಲ್ಲದಾ! ಬಾಳು ನರಕದ ಗೋಳು ಎಂಬುದು ಸತ್ಯವಾಗುತ್ತಾ ಸಾಗಿತ್ತು, ದಿನ ಬೆಳಗಾದರೆ ಅವಳದೇ ಚಿಂತೆ, ಅವಳದೇ ಧ್ಯಾನ, ಮರೆಯುವಂತಾ ಮುಖವಾಗಿರಲಿಲ್ಲ,ಅಂತಾ ಸೊಗಸು,ಅಹಾ! ಏನು ಮಾಧುರ್ಯ ಅವಳ ಸ್ವರ,ಅವಳ ಕಂಠಕ್ಕೆ ದನಿಯಾಗುತ್ತಿದ್ದ ನನ್ನ ಕಂಠ ಯಾಕೋ ದಿಢೀರನೆ ಕುಸಿಯತೊಡಗಿತ್ತು.ಅವಳ ಅಂದದ ವೈಭೋಗ ಹೆಚ್ಚಾದಂತೆ ನನ್ನ ಕಂಠ  ಯಾಕೋ ನಿಧಾನಿಸತೊಡಗಿತ್ತು,ಸದಾ ಅವಳ ಜೊತೆ ಇರುತ್ತಿದ್ದರೂ ಯಾಕೋ ಏನೋ ಮನದಲ್ಲಿ ದುಗುಡ, ನಿಜವು ಅರಿವಾದರೆ ಅವಳು ನನ್ನ ದೂರ  ನೂಕುವಳೆನೋ ಎಂಬುದು ದಿನೇ ದಿನೇ ಗಾಢವಾಗತೊಡಗಿತು, ನನ್ನ ಮನಸು ನಿಭಿಡವಾಗತೊಡಗಿತು, ಜೀವನ ಅರ್ಥವಾಗತೊಡಗಿತು,ಶಿವನು ಬೇಕಾದರೆ ವಿವಿಧ ಪಾತ್ರಗಳನ್ನು ಧರಿಸಿ ಮಾಯೆಯೂ ಹೊಸರೂಪ ತಾಳಲಿ, ಅದರಲ್ಲಿ ಪರಮಾತ್ಮನು ಸುಖದಲ್ಲಿ ತಲ್ಲೀನವಾಗಲಿ ನಾನು ಮಾತ್ರ ಯುವತಿಯ ಹಾವಭಾವಗಳಿಗೆ ಬೆರಗಾಗದೆ ಜೀವನದಲ್ಲಿ ಅಸಾಧ್ಯವಾದದನ್ನು ಸಾಧಿಸಬೇಕೆಂದು ತೀರ್ಮಾನಿಸಿ ಸ್ತಭ್ದ ಅನಂತದೆಡೆಗೆ ಹೊರಟು ಹೋಗುತ್ತೇನೆ.
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇದೇ ಭಾವ ಸದಾ ಇರದು! ಅದೇ ಮಾಯೆ! ಸದಾ ಇದ್ದಲ್ಲಿ ಜಗತ್ತು ಇರದು!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.